ಕುಂಬಳೆ : ದತ್ತು ಪುತ್ರನ ಹೆಸರಿನಲ್ಲಿದ್ದ ಹಣವನ್ನು ನಕಲಿ ಸಹಿ ಮೂಲಕ ಕಬಳಿಸಿದ ಆರೋಪದಲ್ಲಿ ಮೂವರ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.
ಕುಂಭ್ಡಾಜೆ ಉಬ್ರಂಗಳ ತಾಂತ್ರಿಕ ಸದನದ ದಿ| ಬಾಲಕೃಷ್ಣ ತಂತ್ರಿಯವರ ಪತ್ನಿ ಸುಗುಣಾ ತಂತ್ರಿ (74), ಇವರ ಸಹೋದರ ದ.ಕ. ಜಿಲ್ಲೆಯ ರಾಮಕುಂಜ ನಿವಾಸಿ ನರಹರಿ ಉಪಾಧ್ಯಾಯ (54) ಮತ್ತು ಸಹಾಯಕ ಆರೋಪಿಗಳು. ಸಂತಾನಭಾಗ್ಯವಿಲ್ಲದ ಬಾಲಕೃಷ್ಣ ತಂತ್ರಿಯವರು ಕಳೆದ 2020ರ ಜೂ. 29ರಂದು ಕಾನೂನು ಪ್ರಕಾರ 12 ವರ್ಷದ ಬಾಲಕನನ್ನು ದತ್ತು ಪಡೆದಿದ್ದರು. ಆದರೆ ಬಾಲಕನನ್ನು ದತ್ತು ಪಡೆದು 10ನೇ ದಿನದಂದು ತಂತ್ರಿಯವರು ನಿಧನ ಹೊಂದಿದ್ದರು.
ತಂತ್ರಿಯವರ ಪತ್ನಿ ಮತ್ತು ಸಹೋದರರು ಸೇರಿ ತಂತ್ರಿಯವರ ಹೆಸರಲ್ಲಿದ್ದ ಬೆಲೆ ಬಾಳುವ ಆಸ್ತಿಯನ್ನು ನಕಲಿ ಸಹಿಯಲ್ಲಿ ಸ್ವಂತ ಹೆಸರಲ್ಲಿ ದಾಖಲಿಸಿರುವುದಲ್ಲದೆ ತಂತ್ರಿಯವರ ಹೆಸರಲ್ಲಿದ್ದ ವ್ಯಾನ್ ಮತ್ತು ಆಟೊ ರಿಕ್ಷಾವನ್ನು ಮಾರಾಟ ಮಾಡಿರುವುದಾಗಿ ಆರೋಪಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳ್ಳರ ತಂಡ ಸಕ್ರಿಯ: ಎಚ್ಚರಿಕೆ
ಕುಂಬಳೆ: ಬಸ್ಸುಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಪ್ರಯಾಣಿಕರ ನಗ ನಗದು ದೋಚುವ ತಂಡ ಸಕ್ರಿಯವಾಗಿದ್ದು, ಇವರ ಬಗ್ಗೆ ಗಮನ ಹರಿಸಬೇಕಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Related Articles
ಆನ್ಯರಾಜ್ಯದ ಅಲೆಮಾರಿ ತಂಡಗಳು ಕೃತ್ಯದಲ್ಲಿ ಹೆಚ್ಚಾಗಿದ್ದು, ಮಹಿಳೆಯರ ಮತ್ತು ಮಕ್ಕಳ ಆಭರಣ ಮತ್ತು ಹಣವನ್ನು ಅತ್ಯಂತ ಚಾಣಾಕ್ಷತನದಿಂದ ಅಪಹರಿಸುವರು. ಕಾಸರಗೋಡಿನ ಕೂಡ್ಲು ನಿವಾಸಿ ತಾರಾ ಬ್ಯಾಂಕಿನಿಂದ 40 ಸಾವಿರ ಹಣವನ್ನು ಬ್ಯಾಗಲ್ಲಿರಿಸಿ ಬಸ್ಸಿನಲ್ಲಿ ಆಗಮಿಸುತ್ತಿರುವಾಗ ಹಣ ಅಪಹರಣವಾಗಿ ಪೊಲೀಸರಿಗೆ ದೂರು ನೀಡಿದ್ದರು. ಕಳವಿನ ಆರೋಪಿ ಮಹಿಳೆ ತಾರಾರವರ ಸೀಟಿನಲ್ಲೆ ಕುಳಿತು ಪ್ರಯಾಣಿಸುತ್ತಿರುವ ದೃಶ್ಯ ಬಸ್ಸಿನ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.