Advertisement

Kumbla ಆಟಿಕೆ ನೋಟು: ವ್ಯಾಪಾರಿಗಳು ಆತಂಕದಲ್ಲಿ

12:31 AM Jul 20, 2024 | Team Udayavani |

ಕುಂಬಳೆ: ಕುಂಬಳೆ ಹಾಗೂ ಪರಿಸರ ಪ್ರದೇಶಗಳಲ್ಲಿ ಅಸಲಿ ನೋಟುಗಳನ್ನೇ ಹೋಲುವ ಆಟಿಕೆ ನೋಟುಗಳು ವ್ಯಾಪಕಗೊಂಡಿದ್ದು, ಇದರಿಂದ ವ್ಯಾಪಾರಿಗಳು ಹಾಗೂ ಸಾರ್ವ ಜನಿಕರು ತೀವ್ರ ಆತಂಕಿತರಾಗಿದ್ದಾರೆ.

Advertisement

ಒಂದು ವಾರದೊಳಗೆ ಕಳತ್ತೂರು ಹಾಗೂ ಬಂಬ್ರಾಣದಲ್ಲಿ 500, 200 ರೂಪಾಯಿಗಳ ಆಟಿಕೆ ನೋಟುಗಳನ್ನು ಯಾರೋ ನೀಡಿ ವಂಚಿಸಿದ್ದಾರೆಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಅಂಗಡಿಗಳಲ್ಲಿ ಗ್ರಾಹಕರು ಹೆಚ್ಚಿರುವ ಸಂದರ್ಭದಲ್ಲಿ ವಂಚಕರು ಸಕ್ರಿಯರಾಗಿರುತ್ತಾರೆ.

ಅಸಲಿ ನೋಟಿನಲ್ಲಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಂದು ಬರೆದಿರುವಲ್ಲಿ “ಫುಲ್‌ ಆಫ್‌ ಫನ್‌’ ಎಂದು ಮುದ್ರಿಸಿದ್ದು, ಬಾಕಿ ಎಲ್ಲವೂ ಅಸಲಿ ನೋಟುಗಳನ್ನೇ ಹೋಲುತ್ತಿದೆ. ಗಾಂಧೀಜಿ ಚಿತ್ರ ಯಥಾರೂಪದಲ್ಲೇ ಇರುತ್ತದೆ. ನೋಟಿನ ಗಾತ್ರವೂ ಅಸಲಿ ನೋಟಿನಷ್ಟೇ ಇದೆ. ಚೈನೀಸ್‌ ಮಿಠಾಯಿಗಳೊಂದಿಗೆ ಇಂಥ ನೋಟುಗಳು ಲಭಿಸುತ್ತಿರುವುದಾಗಿ ಜನರು ಹೇಳುತ್ತಿದ್ದಾರೆ. ಈ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next