Advertisement

‘ಕಂಬಳ ಮಣ್ಣಿನ ಶಕ್ತಿಯ ಆರಾಧನ ಪದ್ಧತಿ’

03:57 PM Oct 15, 2017 | Team Udayavani |

ಪುಂಜಾಲಕಟ್ಟೆ: ಬಂಟ್ವಾಳ ತಾ| ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ದ್ವಿತೀಯ ವರ್ಷದ ಪರ್ಬದ ಲೇಸ್‌- ತುಳುವೆರೆ ಕೂಟದ ಪ್ರಯುಕ್ತ ಜಾನಪದ ಕ್ರೀಡಾ ಸ್ನೇಹಕೂಟ, ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

Advertisement

ಕಂಬಳ ಪ್ರಧಾನ ತೀರ್ಪುಗಾರ ಎಂ. ರಾಜೀವ ಶೆಟ್ಟಿ ಎಡ್ತೂರು, ಕಂಬಳ ತೀರ್ಪುಗಾರ ವಲೇರಿಯನ್‌ ಡೇಸಾ ಅಪ್ಪು ಕಂಬಳಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮ ಎಂ. ರಾಜೀವ ಶೆಟ್ಟಿ ಎಡೂ¤ರು ಉದ್ಘಾಟಿಸಿ ಕಂಬಳ ಕೇವಲ ಮನೋರಂಜನೆಯ ಕ್ರೀಡೆಯಲ್ಲ, ಇದು ಈ ಮಣ್ಣಿನ ಶಕ್ತಿ, ಇದರ ಗುಣದ ಆರಾಧನಾ ಪದ್ಧತಿಯಾಗಿದ್ದು, ತುಳುವರ ನಂಬಿಕೆಯ ಕ್ರೀಡೆಯಾಗಿದೆ ಎಂದು ಹೇಳಿದರು. ಎಪಿಎಂಸಿ ಸದಸ್ಯ, ಕಂಬಳ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಪ್ರಗತಿಪರ ಕೃಷಿಕ ಬಾಬು ಗೌಡ ಪೆಂರ್ಗಾಲು , ಕಂಬಳಪರ ಹೋರಾಟಗಾರ ಸೀತಾರಾಮ ಶೆಟ್ಟಿ ಮಹಾಂಕಾಳಿಬೆಟ್ಟು, ಸ್ಥಳದಾನಿ ತುಕ್ರಪ್ಪ ಗೌಡ, ಉಳಿ ಗ್ರಾ. ಪಂ. ಸದಸ್ಯ ಚಿದಾನಂದ ರೈ, ಪ್ರಗತಿಪರ ಕೃಷಿಕ ಸುಧಾಕರ ಶೆಟ್ಟಿ ಶಂಕರಬೆಟ್ಟು, ಜಯ ಪೂಜಾರಿ ಕುಕ್ಕಾಜೆ, ಪ್ರವೀಣ್‌ ಶೆಟ್ಟಿ ಕಿಂಜಾಲು, ವಿಠ್ಠಲ ಭಂಡಾರಿ, ಧರ್ಣಪ್ಪ ಪೂಜಾರಿ ಮೈರ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಕೇಶವ ಪೂಜಾರಿ ಕುಕ್ಕಾಜೆ, ಕಾರ್ಯಾಧ್ಯಕ್ಷ ಲತೀಶ್‌ ಕುಕ್ಕಾಜೆ, ಸರಪಾಡಿ ಗ್ರಾ.ಪಂ. ಸದಸ್ಯ ಎನ್‌. ಧನಂಜಯ ಶೆಟ್ಟಿ, ದಯಾನಂದ ಪೂಜಾರಿ, ಸಾಂತಪ್ಪ ಪೂಜಾರಿ ಹಟದಡ್ಕ, ರಫೀಕ್‌ ಮುನ್ನಲಪಲ್ಕೆ, ಗೆಳೆಯರ ಬಳಗದ ಪದಾಧಿಕಾರಿಗಳಾದ ಸುರೇಶ್‌ ಮೈರ, ಉಮೇಶ್‌ನೇರಳಪಲ್ಕೆ, ಶೇಖರ ಕಂಚಲ ಪಲ್ಕೆ, ಆನಂದ ಪುಣ್ಕೆದಡಿ, ಪುರುಷೋತ್ತಮ ಪಲ್ಕೆ, ವಸಂತ ಕಾಯರಗುರಿ ಉಪಸ್ಥಿತರಿದ್ದರು.

ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿದರು. ಮಾಜಿ ಅಧ್ಯಕ್ಷ, ನ್ಯಾಯವಾದಿ ರಂಜಿತ್‌ ಮೈರ ವಂದಿಸಿದರು. ಪ್ರಕಾಶ್‌ ಕರ್ಲ ಮತ್ತು ಪ್ರಶಾಂತ ಮೈರ ಕಾರ್ಯಕ್ರಮ ನಿರೂಪಿಸಿದರು. 

ಧಾರ್ಮಿಕ ಆಚರಣೆ ಉಳಿಸಿ
ತುಳುವರ ಸಂಘಟನೆಗಳು ಇಂತಹ ತುಳು ಆರಾಧನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಹಿರಿಯರು ನಂಬಿಕೊಂಡು ಬಂದ ಶಕ್ತಿಗಳು, ಧಾರ್ಮಿಕ ಆಚರಣೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ.
ನಿರಂಜನ ರೈ ಮಠಂತಬೆಟ್ಟು ,
ತುಳು ಸಾಹಿತ್ಯ ಅಕಾಡೆಮಿ ಸದಸ್ಯ 

Advertisement
Advertisement

Udayavani is now on Telegram. Click here to join our channel and stay updated with the latest news.

Next