Advertisement

ಎಚ್‌ಡಿಕೆ ಪ್ರಮಾಣ ವಚನ ಸ್ಥಳ 2 ಬಾರಿ ಬದಲು; ಕೊನೆಗೂ ಫೈನಲ್‌ !

05:06 PM May 20, 2018 | Team Udayavani |

ಬೆಂಗಳೂರು: ಜೆಡಿಎಸ್‌ ರಾಜ್ಯಾಧ್ಯಕ್ಷ  ಎಚ್‌.ಡಿ.ಕುಮಾರಸ್ವಾಮಿ ಅವರು ಬುಧವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದು  ಸ್ಥಳದ ವಿಚಾರದಲ್ಲಿ ಕೆಲ ಗೊಂದಲಗಳು ನಿರ್ಮಾಣವಾಗಿ ಕೊನೆಗೆ ವಿಧಾನಸೌಧದ ಎದುರೇ ಪ್ರಮಾಣ ವಚನ ಸ್ವೀಕರಿಸಲು ತೀರ್ಮಾನಿಸಲಾಗಿದೆ. 

Advertisement

ಮೊದಲು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಲಾಗಿತ್ತು, ಬಳಿಕ ಅರಮನೆ ಮೈದಾನದಲ್ಲಿ  ಕಾರ್ಯಕ್ರಮ ನಡೆಸಲು ಚರ್ಚೆ ನಡೆದಿತ್ತು. ಕೊನೆಗೆ ವಿಧಾನಸೌಧದ ಎದುರು ಪ್ರಮಾಣ ವಚನ ಸ್ವೀಕರಿಸಲು ನಿಗದಿ ಮಾಡಲಾಗಿದೆ. 

ಈ ಬಗ್ಗೆ ಜೆಡಿಎಸ್‌ ಶಾಸಕ ಬಂಡೆಪ್ಪ ಕಾಶಂಪೂರ್‌ ಅವರು  ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next