Advertisement
ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದಕ್ಕೆ ಅಯೋಗ್ಯ. ಮುಖ್ಯಮಂತ್ರಿ ಸ್ಥಾನದಲ್ಲಿರೋರು ಗೌಪ್ಯತೆ ಕಾಪಾಡಬೇಕು. ಆದರೆ ಇವರು ಆ ಗೌಪ್ಯತೆ ಕಾಪಾಡೋದು ಬಿಟ್ಟು ಹಾಳು ಮಾಡುತ್ತಿದ್ದಾರೆ. ಕಳ್ಳರನ್ನು ರಕ್ಷಿಸಲು ಮೊದಲೇ ಹೇಳಿದ್ದಾರೆ ಎಂದು ದೂರಿದರು. ಐಟಿ ಅಧಿ ಕಾರಿಗಳು ಮಂಡ್ಯದಲ್ಲಿ ಜೆಡಿಎಸ್‌ನವರ ಮನೆಗಳ ಮೇಲೆ ರೇಡ್ ಮಾಡ್ತಿದ್ದಾರೆ ಅಂತೀರಾ? ಮಂಡ್ಯ ಭಾರತದಲ್ಲಿ ಇಲ್ವಾ, ಅ ಧಿಕಾರಿಗಳು ಅವರ ಕೆಲಸ ಅವರು ಮಾಡ್ತಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಲು ಕುಮಾರಸ್ವಾಮಿ ಅಯೋಗ್ಯ. ಕೂಡಲೇ ರಾಜೀನಾಮೆ ನೀಡಬೇಕು ಎಂದರು. Advertisement
ಕುಮಾರಸ್ವಾಮಿ ಅಯೋಗ್ಯ ಸಿಎಂ: ಈಶ್ವರಪ್ಪ
06:31 AM Mar 29, 2019 | Team Udayavani |