Advertisement

ಟೀಕೆಗೆ ಕುಮಾರಸ್ವಾಮಿ ಗರಂ

06:00 AM Jul 07, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ತಾವು ಮಂಡಿಸಿದ ಬಜೆಟ್‌ ಬಗ್ಗೆ ಋಣಾತ್ಮಕ ಅಭಿಪ್ರಾಯಗಳು ಕೇಳುತ್ತಿರುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಕ್ರೋಶಗೊಂಡಿದ್ದಾರೆ.

Advertisement

ತಮ್ಮ ಆಪ್ತ ವಲಯದಲ್ಲಿ ಮಾತ್ರವಲ್ಲದೆ, ಮಾಧ್ಯಮಗಳ ಮುಂದೆಯೂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪೆಟ್ರೋಲ್‌, ಡೀಸೆಲ್‌, ವಿದ್ಯುತ್‌ ಬಳಕೆ ಮತ್ತು ಮದ್ಯದ ಮೇಲಿನ ಅಬಕಾರಿ ತೆರಿಗೆ ಹೆಚ್ಚಿಸಿದ ಬಗ್ಗೆ ಮತ್ತು ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿಗೆ ಬಜೆಟ್‌ನಲ್ಲಿ ಏನೂ ಕೊಡುಗೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಜನಸಮುದಾಯ ಮತ್ತು ಆ ಭಾಗದ ಜನಪ್ರತಿನಿಧಿಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವುದು ಮುಖ್ಯಮಂತ್ರಿಗಳ ಆಕ್ರೋಶಕ್ಕೆ ಕಾರಣ.

ರೈತರ ಸಾಲಮನ್ನಾ ಮಾಡಿದ್ದರೂ ತೆರಿಗೆ ಹೆಚ್ಚಳವನ್ನೇ ದೊಡ್ಡದು ಮಾಡಿ ಬಿಂಬಿಸಿರುವುದು ಮತ್ತು ಹಾಸನ, ಮಂಡ್ಯಕ್ಕೆ ಸೀಮಿತ ಬಜೆಟ್‌ ಎಂದು ಬಿಂಬಿಸುವ ಕೆಲಸವನ್ನು ಮಾಧ್ಯಮಗಳು ಮತ್ತು ಪ್ರತಿಪಕ್ಷಗಳು ಮಾಡುತ್ತಿವೆ. ಮಿತ್ರಪಕ್ಷ ಕಾಂಗ್ರೆಸ್‌ ನವರೇ ನನ್ನನ್ನು ಉತ್ತರ ಕರ್ನಾಟಕ ವಿರೋಧಿ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದು, ಇದು
ಸರಿಯಲ್ಲ ಎಂದು ತಮ್ಮ ಆಪ್ತ ವಲಯ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಬೇಸರ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಮಾಜಿ ಉಪರಾಷ್ಟ್ರಪತಿ ಡಾ.ಬಾಬು ಜಗ ಜೀವನ ರಾಂ ಅವರ 32ನೇ ಪುಣ್ಯಸ್ಮರಣೆ ಅಂಗವಾಗಿ ಶುಕ್ರವಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಇದು ಸಮಗ್ರ ಕರ್ನಾಟಕವನ್ನು ದೃಷ್ಟಿಯಲ್ಲಿ ಟ್ಟು ಕೊಂಡು ಮಂಡಿಸಿರುವ ಬಜೆಟ್‌.

ಅದು ಅರ್ಥವಾಗದೇ ಇರುವವರಿಗೆ ಏನು ಹೇಳ್ಳೋಣ? ಯಾವ ಜಿಲ್ಲೆ, ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬುದನ್ನು ಚರ್ಚೆ ಮಾಡಲಿ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ, ಕೇಂದ್ರ ಸರ್ಕಾರ ಡೀಸೆಲ್‌, ಪೆಟ್ರೋಲ್‌ ಬೆಲೆ ಏರಿಕೆ ಮಾಡಿದಾಗ ಇವರಿಗೆ ಕಣ್ಣು ಕಾಣಲಿಲ್ಲವೇ ಎಂದೂ ಪ್ರಶ್ನಿಸಿದರು. 

ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳನ್ನು ಕಡೆಗಣನೆ ಮಾಡಲಾಗಿದೆ ಎಂದು ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅರ್ಥವಾಗದೇ ಇದ್ದವರಿಗೆ ಏನು ಹೇಳಲು ಸಾಧ್ಯ?ಈ ಹಿಂದೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನ ಮುಂದುವರಿದ ಭಾಗವಿದು. ಇದನ್ನು ಬಜೆಟ್‌ ಮಂಡಿಸುವಾಗಲೇ ಸ್ಪಷ್ಟಪಡಿಸಿದ್ದೇನೆ. ಕೆಲವೊಂದು ಕಾರ್ಯಕ್ರಮಗಳನ್ನಷ್ಟೇ ಹೊಸದಾಗಿ ಪ್ರಕಟಿಸಿದ್ದೇನೆ.ಹಿಂದಿನ ಬಜೆಟ್‌ನಲ್ಲಿದ್ದ ಕಾರ್ಯಕ್ರಮಗಳು ಸಂಪೂರ್ಣ ಅನುಷ್ಠಾನವಾಗಲಿದೆ ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next