Advertisement

ಶವಸಂಸ್ಕಾರದ ವೇಳೆ ಎದ್ದು ಕುಳಿತಿದ್ದ ಬಾಲಕ ಕೊನೆಗೂ ವಿಧಿವಶ 

10:46 AM Mar 07, 2017 | Team Udayavani |

ಧಾರವಾಡ: ಇಲ್ಲಿನ ಮನಗುಂಡಿ ಎಂಬಲ್ಲಿ ಪವಾಡವೆಂಬಂತೆ ಅಂತ್ಯಸಂಸ್ಕಾರ ನಡೆಸುವ ವೇಳೆ ಚಟ್ಟದಿಂದ ಎದ್ದುಕುಳಿತ  ಬಾಲಕ ಇಂದು ಮಂಗಳವಾರ ವಿಧಿವಶನಾಗಿದ್ದಾನೆ. 

Advertisement

ಬೀದಿ ನಾಯಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 16 ವರ್ಷ ಪ್ರಾಯದ ಕುಮಾರ್‌ ಮರಡಿ ಎಂಬ ಬಾಲಕ ಮೂರ್ಛೆ ತಪ್ಪಿದ್ದು ಆತನನ್ನು  ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ನಾಡಿ ಮಿಡಿತ ಮತ್ತು ಉಸಿರಾಟ ನಿಂತಿರುವುದನ್ನು ಪರೀಕ್ಷಿಸಿ   ವೈದ್ಯರು ಮೃತ ಪಟ್ಟಿರುವುದಾಗಿ ಘೋಷಿಸಿದ ಬಳಿಕ ಅಂತ್ಯಸಂಸ್ಕರಾಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ವಿಸ್ಮಯಕಾರಿ ಎಂಬಂತೆ ಕುಮಾರ್‌ ಚಟ್ಟದಿಂದ ಎದ್ದುಕುಳಿತಿದ್ದ. 

ಶವ ಎದ್ದುಕುಳಿತದ್ದನ್ನು ನೋಡಿ ಕೆಲವರು ದಂಗಾಗಿ ಹೋದರೆ, ಮನೆಯವರು ಕಳೆದುಕೊಂಡಿದ್ದ ಮಗನನ್ನು ಮತ್ತೆ ಪಡೆದು ಸಂಭ್ರಮ ಪಟ್ಟಿದ್ದರು. 

ಫೆಬ್ರವರಿ 18 ರಂದು ಘಟನೆ ನಡೆದ ಬಳಿಕ ಕುಮಾರ್‌ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಇಂದು ಆತ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next