Advertisement

ಅರ್ಹ ಕೃಷಿಕರಿಗೆ ಪಟ್ಟಾ ನೀಡಿ: ಕುಮಾರ ಬಂಗಾರಪ್ಪ

08:22 PM Feb 06, 2021 | Team Udayavani |

ಗಂಗಾವತಿ: ಅರಣ್ಯಭೂಮಿ ಸಾಗುವಳಿ ಮಾಡುವ ಕೃಷಿಕರಿಗೆ ಪಟ್ಟಾ ನೀಡಲು ಸರ್ಕಾರ ಸಮರೋಪಾದಿಯಲ್ಲಿ ಬಗರಹುಕುಂ ಅರ್ಜಿ ವಿಲೇವಾರಿ ಮಾಡುವಂತೆ ಶಾಸಕ ಕುಮಾರ ಬಂಗಾರಪ್ಪ ಹೇಳಿದರು.

Advertisement

ಮಾಜಿ ಸಚಿವ ಎಚ್‌.ಜಿ. ರಾಮುಲು ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ಮೂರು ದಶಕಗಳಿಂದ ಬಾಕಿ ಇರುವ ಫಾರಂ 50 ಮತ್ತು 53 ಅರ್ಜಿ ವಿಲೇವಾರಿ ಮಾಡಿ ಬಗರಹುಕುಂ ಭೂಮಿ ಊಳುವವರಿಗೆ ಸಾಗುವಳಿ ಪಟ್ಟಾ ವಿತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಬಗರಹುಕುಂ ಭೂಮಿ ಉಳುಮೆ ಮಾಡುತ್ತಿರುವ ಕೃಷಿಕರು ಫಾರಂ ನಂ.50 ಮತ್ತು 53 ಮೂಲಕ ಪಟ್ಟಾ ನೀಡುವಂತೆ ಅರ್ಜಿ ಸಲ್ಲಿಸಿದ್ದು ಅವರಿಗೆ ಇದುವರೆಗೂ ಸಾಗುವಳಿ ಪಟ್ಟಾ ವಿತರಣೆಗೆ ಯಾವ ಸರ್ಕಾರಗಳೂ ಕ್ರಮ ಕೈಗೊಂಡಿಲ್ಲ. ಕಂದಾಯ ಸಚಿವ ಆರ್‌. ಅಶೋಕ ಡೀಮ್ಡ್ ಅರಣ್ಯ ಪ್ರದೇಶ ಕಂದಾಯ ಇಲಾಖೆ ವಹಿಸಿಕೊಂಡು ಭೂಮಿ ಹಂಚಿಕೆ ಮತ್ತು ಮನೆ ನಿರ್ಮಾಣಕ್ಕೆ ಜಾಗ ವಿತರಣೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿಕೆ ನೀಡಿದ್ದು

ಕೇಂದ್ರ ಮತ್ತು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸುವ ಮೂಲಕ ಡೀಮ್ಡ್ ಅರಣ್ಯ ಭೂಮಿ ಕಂದಾಯ ಇಲಾಖೆಗೆ ವಹಿಸಲು ಸಾಧ್ಯವಿದೆ.ರಾಜ್ಯ ಸರ್ಕಾರ ನಿರಂತರ ಯತ್ನದ ಮೂಲಕ ಈ ಕಾರ್ಯ ಮಾಡಬೇಕು ಎಂದರು.

ಈಗಾಗಲೇ ಬೆಂಗಳೂರಿನಲ್ಲಿ ಡೀಮ್ಡ್ ಅರಣ್ಯ ಪ್ರದೇಶ ಕುರಿತು ಮೂರು ಬಾರಿ ಸಭೆ ಜರುಗಿದ್ದು ಮಲೆನಾಡು ಮತ್ತು ಕಲಬುರಗಿ ವಿಭಾಗದಲ್ಲಿ ಬಗರಹುಕುಂ ಭೂಮಿ ಹಂಚಿಕೆ ಸಾವಿರಾರು ಅರ್ಜಿ ವಿಲೇವಾರಿ ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ತಾವು ನಿರಂತರ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಬೇಕು ಎಂದರು.

ನಿರೀಕ್ಷಿತ ಪ್ರಗತಿ ಆಗಿಲ್ಲ: ಬಹು ನಿರೀಕ್ಷೆಯ ಜತೆಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ರಾಜ್ಯದ ಜನರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೋವಿಡ್‌ ಮತ್ತು ಪ್ರವಾಹದಿಂದ ಸುಮಾರು 85 ಸಾವಿರ ಕೋಟಿಯಷ್ಟು ನಷ್ಟ ಸಂಭವಿಸಿದ್ದು ಪ್ರಗತಿ ಕಾರ್ಯಕ್ಕೆ ತೊಡಕುಂಟಾಗಿದೆ ಎಂದರು.

Advertisement

ಇದನ್ನೂ ಓದಿ :ಶಾರದಾ ಆಚಾರ್ಯರ ನಿಧನಕ್ಕೆ ನಳಿನ್‍ ಕುಮಾರ್ ಕಟೀಲ್ ಸಂತಾಪ

ಈ ಸಂದರ್ಭದಲ್ಲಿ ಮಾಜಿ ಸಂಸದ ಎಚ್‌.ಜಿ. ರಾಮುಲು, ಮಾಜಿ ಎಂಎಲ್ಸಿ ಎಚ್‌.ಆರ್‌. ಶ್ರೀನಾಥ, ಚಿತ್ರ ನಟ ಅರ್ಜುನ್‌ ಕುಮಾರ  ಬಂಗಾರಪ್ಪ, ಬಿಜೆಪಿ ಮುಖಂಡ ಜೋಗದ ಹನುಮಂತಪ್ಪ, ಜೆಡಿಎಸ್‌ ತಾಲೂಕು ಅಧ್ಯಕ್ಷ ವೀರನಗೌಡ, ನಗರಸಭೆ ಸದಸ್ಯ ಮಹಮದ್‌ ಉನ್ಮಾನ ಬಿಚ್ಚಗತ್ತಿ, ಎಚ್‌.ಆರ್‌. ಭರತ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next