ಹೊಸದಿಲ್ಲಿ: ಮಾಜಿ ಪ್ರಧಾನಿ ದಿ| ಇಂದಿರಾ ಗಾಂಧಿ ಅವರೇ ಖಲಿಸ್ಥಾನ ಉಗ್ರ ಜರ್ನೈಲ್ ಸಿಂಗ್ ಬಿಂದ್ರ ನ್‌ವಾಲೆಯನ್ನು ಮಾರಕವಾಗುವಂತೆ ಬೆಳೆಯಲು ಅವಕಾಶ ಕೊಟ್ಟಿದ್ದರು ಎಂದು ನಿವೃತ್ತ ಲೆ|ಜ| ಕುಲದೀಪ್ ಸಿಂಗ್ ಬ್ರಾರ್ ಆರೋಪಿಸಿದ್ದಾರೆ.
ಅಮೃತಸರದ ಸ್ವರ್ಣ ಮಂದಿರದಲ್ಲಿ “ಆಪ ರೇಶನ್ ಬ್ಲೂಸ್ಟಾರ್’ನ ನೇತೃತ್ವ ವಹಿಸಿದ್ದ ಲೆ|ಜ| ಬ್ರಾರ್ ಅವರು “ಎಎನ್‌ಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಾ ಈ ವಿಚಾರ ತಿಳಿಸಿದ್ದಾರೆ.
“ಯಾರೊಬ್ಬರಿಗೂ ಕಾರ್ಯಾಚರಣೆ ನಡೆಸು ವುದು ಬೇಕಾಗಿರಲಿಲ್ಲ. ಆದರೆ ಏನು ಮಾಡೋಣ? ಇಂದಿರಾ ಗಾಂಧಿಯವರು ಆತನನ್ನು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದರು. ಅದರ ಅನಂತರ ಏನಾಯಿತು ಎಂಬುದು ಎಲ್ಲರಿಗೂ ಗೊತ್ತು. ಆತನ ರಾಕ್ಷಸೀ ಪ್ರವೃತ್ತಿ ತುತ್ತತುದಿಗೆ ತಲುಪಿದಾಗ ಆತ ನನ್ನು ಮುಗಿಸಿ ಬಿಡಿ ಎಂದು ಹೇಳಿದ್ದರು. ಆಗ ವಿಳಂಬವಾಗಿತ್ತು’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಅಕಾಲಿ ದಳ ಮುಖಂಡರ ನಡುವೆ ಆಗ ಇದ್ದ ಸಮಸ್ಯೆ ಕೂಡ ಆತನಿಗೆ ನೆರವಾಗಿತ್ತು ಎಂದು ಬ್ರಾರ್ ದೂರಿದ್ದಾರೆ.