Advertisement

ಬೇಹುಗಾರಿಕೆ ಆರೋಪ; ಭಾರತದ ಕುಲಭೂಷಣ್ ಗೆ ಪಾಕ್ ನಲ್ಲಿ ಗಲ್ಲು ಶಿಕ್ಷೆ

03:30 PM Apr 10, 2017 | Sharanya Alva |

ಇಸ್ಲಾಮಾಬಾದ್: ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಭಾರತದ ಕುಲಭೂಷಣ್ ಜಾಧವ್ ಗೆ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.

Advertisement

ಪಾಕ್ ನಲ್ಲಿ ಬೇಹುಗಾರಿಕೆ ನಡೆಸಿದ್ದಾರೆಂದು ಆರೋಪಿಸಿ ಜಾಧವ್ ಅವರನ್ನು 2016ರ ಮಾರ್ಚ್ ನಲ್ಲಿ ಬಲೂಚಿಸ್ತಾನದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಪಾಕ್ ಆರ್ಮಿ ಕೋರ್ಟ್ ಸೋಮವಾರ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ. ರಾ ಏಜೆಂಟ್ ಆಗಿರುವ ಜಾಧವ್ ಬಲೂಚ್ ನ ಪ್ರತ್ಯೇಕವಾದಿಗಳಿಗೆ ಕುಮ್ಮಕ್ಕು ನೀಡಿ, ಭಾರತದ ಪರ ಬೇಹುಗಾರಿಕೆ ನಡೆಸುತ್ತಿದ್ದರು ಎಂದು ಪಾಕ್ ಆರೋಪಿಸಿತ್ತು.

ಆದರೆ ಭಾರತ ಪಾಕಿಸ್ತಾನದ ನಡೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜಾಧವ್ ಅವರನ್ನು ಇರಾನ್ ನಲ್ಲಿ ಬಂಧಿಸಲಾಗಿತ್ತು. ಅಲ್ಲದೇ ಜಾಧವ್ ವಿರುದ್ಧ ಯಾವುದೇ ಸಾಕ್ಷ್ಯವನ್ನು ಪಾಕ್ ಒದಗಿಸಿಲ್ಲ, ಏಕಾಏಕಿ ದೋಷಿ ಎಂದು ತೀರ್ಮಾನಿಸಿ, ಗಲ್ಲಿಗೇರಿಸಲು ಹೊರಟಿದೆ ಎಂದು ಕಿಡಿಕಾರಿದೆ.

ಯಾರಿದು ಕುಲಭೂಷಣ್ ಜಾಧವ್:
ಪಾಕಿಸ್ತಾನದ ಸೇನಾ ಕೋರ್ಟ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಭಾರತದ ಮಾಜಿ ನೌಕದಳ ಅಧಿಕಾರಿ. ಜಾಧವ್ ಅವಧಿಗೂ ಮುನ್ನವೇ ನಿವೃತ್ತಿ ಪಡೆದಿದ್ದರು.

Advertisement

ಜಾಧವ್ ಕುಟುಂಬ ಪ್ರಸ್ತುತ ಮುಂಬೈನಲ್ಲಿ ನೆಲೆಸಿದೆ. ಜಾಧವ್ ಅವರನ್ನು ಪಾಕಿಸ್ತಾನ ಬಲೂಚಿ ಸಮೀಪದ ಇರಾನ್ ಗಡಿಯಲ್ಲಿ ಅಪಹರಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next