Advertisement

ICJ ವಿಚಾರಣೆ : ಜಾಧವ್‌ ಗಲ್ಲು ಅಮಾನತಿಗೆ ಭಾರತ ಆಗ್ರಹ; ಪಾಕ್‌ ವಿರೋಧ

07:08 PM May 15, 2017 | Team Udayavani |

ದ ಹೇಗ್‌ : ‘ಭಾರತೀಯ ಬೇಹುಗಾರನೆಂದು ಪಾಕಿಸ್ಥಾನದಿಂದ ಆರೋಪಿಸಲ್ಪಟ್ಟು ಅಲ್ಲಿನ ಮಿಲಿಟರಿ ಕೋರ್ಟ್‌ನಿಂದ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್‌ ಜಾಧವ್‌ ಅವರ ಗಲ್ಲು ಶಿಕ್ಷೆಯನ್ನು ಈ ಕೂಡಲೇ ಅಮಾನತುಗೊಳಿಸಬೇಕು; ಅಂತಾರಾಷ್ಟ್ರೀಯ ನ್ಯಾಯಾಲಯ ಈ ಕುರಿತ ವಿಚಾರಣೆಯನ್ನು ಮುಗಿಸುವ ಮೊದಲೇ ಜಾಧವ್‌ನನ್ನು ಗಲ್ಲಿಗೇರಿಸಿ ಮುಗಿಸಿಬಿಡುವ  ಭೀತಿ ತನಗಿದೆ’ ಎಂದು ಭಾರತ ‘ದ ಹೇಗ್‌’ ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತನ್ನ ವಾದವನ್ನು ಮಂಡಿಸಿದೆ.

Advertisement

ಇದಕ್ಕೆ ಉತ್ತರವಾಗಿ ತನ್ನ ಪ್ರತಿವಾದ ಮಂಡನೆ ಆರಂಭಿಸಿರುವ ಪಾಕಿಸ್ಥಾನ, “ಜಾಧವ್‌ ವಿಷಯದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲವನ್ನು ಭಾರತ ಸಂಪರ್ಕಿಸಿರುವುದು ಅನಗತ್ಯವೂ ಅನಪೇಕ್ಷಿತವೂ, ತಪ್ಪು ಗ್ರಹಿಕೆಯಿಂದ ಕೂಡಿರುವುದೂ ಆಗಿದೆ ಎಂದು ಖಂಡತುಂಡವಾಗಿ ಹೇಳಿದೆ. 

ಭಾರತ ಈ ಮೊದಲಿನ ತನ್ನ ವಾದ ಮಂಡನೆಯಲ್ಲಿ  “46ರ ಹರೆಯದ ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿ ಜಾಧವ್‌ ಅವರನ್ನು ಕಳೆದ ವರ್ಷ ಮಾರ್ಚ್‌ 3ರಂದು ಪಾಕಿಸ್ಥಾನ, ಇರಾನ್‌ನಲ್ಲಿ ಬಂಧಿಸಿತ್ತು. ಪಾಕ್‌ ಸೇನಾ ಕಸ್ಟಡಿಯಲ್ಲಿದ್ದ ಆತನಿಂದ ಬಲವಂತದ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆದು ಅದರ ಆಧಾರದಲ್ಲಿ ಪಾಕಿಸ್ಥಾನದಲ್ಲಿ ಬೇಹುಗಾರಿಕೆ ನಡೆಸಿದ, ವಿಧ್ವಂಸಕ ಕೃತ್ಯಗಳನ್ನು ಆಯೋಜಿಸಿದ ಆರೋಪ ಹೊರಿಸಿ ಆತನಿಗೆ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿತ್ತು’ ಎಂದು ಹೇಳಿತ್ತು. 

“ಜಾಧವ್‌ ಅವರನ್ನು ಬಂಧಿಸಿದ ಬಗ್ಗೆ ಪಾಕಿಸ್ಥಾನ ಭಾರತಕ್ಕೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಆತನಿಗೆ ಪಾಕ್‌ ಮಿಲಿಟರಿ ಕೋರ್ಟ್‌ ಅಪಾರದರ್ಶಕ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿದೆ. ಭಾರತ ಹಲವು ಬಾರಿ ಕೋರಿ ಕೊಂಡರೂ ಪಾಕಿಸ್ಥಾನ, ಮಾನವ ಹಕ್ಕುಗಳಿಗೆ ಅನುಗುಣವಾಗಿ, ಆತನಿಗೆ ದೂತಾವಾಸ ಸಂಪರ್ಕಾವಕಾಶವನ್ನು ನೀಡಿಲ್ಲ. ಪಾಕಿಸ್ಥಾನದಲ್ಲಿ ಆತನ ಜೀವಕ್ಕೆ ಗಂಭೀರ ಅಪಾಯ ಇರುವುದನ್ನು ಮನಗಂಡು ಆತನಿಗೆ ತುರ್ತು ರಕ್ಷಣೆ ದೊರಕಿಸುವ ಉದ್ದೇಶದಿಂದ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಸಂಪರ್ಕಿಸಿತು’ ಎಂದು ಭಾರತ ತನ್ನ ವಾದದಲ್ಲಿ ಹೇಳಿತ್ತು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next