Advertisement
ಈ ಸಂದರ್ಭ ಸಂಘದ ಸ್ಥಾಪಕಾಧ್ಯಕ್ಷ ನ್ಯಾಯವಾದಿ ಅಪ್ಪು ಮೂಲ್ಯ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತು ಮಾತನಾಡುತ್ತಾ ಪಿಂಪ್ರಿ ಚಿಂಚಾÌಡ್ ಪರಿಸರದಲ್ಲಿರುವ ಸಮಾಜ ಬಾಂಧವರೆಲ್ಲರನ್ನೂ ಒಂದೇ ಛತ್ರದಲ್ಲಿ ಸೇರಿಸಿ ಒಗ್ಗೂಡಿಸುವುದರ ಮೂಲಕ ನಮ್ಮ ತುಳು ಭಾಷೆ, ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸುವಲ್ಲಿ ಸಂಘದ ಕಾರ್ಯವೈಖರಿ ಶ್ಲಾಘನೀಯವಾಗಿದೆ. ಸಂಘಕ್ಕೊಂದು ಸ್ವಂತ ಕಚೇರಿಯ ಆವಶ್ಯಕತೆಯಿದ್ದು ಈ ಬಗ್ಗೆ ಚಿಂತಿಸಿ ಆದಷ್ಟು ಬೇಗ ಕಾರ್ಯಪ್ರವೃತ್ತರಾಗಬೇಕಿದೆ. ಸಂಘದ ಪ್ರಗತಿಯಲ್ಲಿ ಇದೊಂದು ಸ್ಫೂರ್ತಿದಾಯಕ ಹೆಜ್ಜೆಯಾಗಲಿದ್ದು ಮುಂದೆ ಸಮಾಜದ ಒಗ್ಗಟ್ಟು ಹಾಗೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಂಘದ ಸದಸ್ಯರೆಲ್ಲರೂ ಶ್ರಮಿಸಿ ಸಂಘವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ನೆರವಾಗಬೇಕು. ನಮ್ಮ ಸಂಘವು ಇದೀಗ ನೋಂದಾಯಿತಗೊಂಡ ಸಂಸ್ಥೆಯಾಗಿದ್ದು, ಮುಂಬಯಿ, ಪುಣೆಯ ಸಂಘಟನೆಗಳ ಸಹಕಾರದೊಂದಿಗೆ ಮುಂದಡಿಯಿಟ್ಟು ಇನ್ನೂ ಹೆಚ್ಚಿನ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜ ಬಾಂಧವರ ಆಶೋ ತ್ತರದಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
Related Articles
ಸಂಘದ ಅಧ್ಯಕ್ಷ ಸದಾನಂದ ಮೂಲ್ಯ ಮಾತನಾಡಿ, ಈ ವರ್ಷ ನಮ್ಮ ಸಂಘದ 6ನೇ ವಾರ್ಷಿಕೋತ್ಸವಕ್ಕೆ ಹೆಚ್ಚು ಸಮಾಜ ಬಾಂಧವರು ಆಗಮಿಸಿ ಸಹಕಾರ ನೀಡಿರುವುದಕ್ಕೆ ಸಂತೋಷವಾಗುತ್ತಿದೆ. ಮುಂದಿನ ವರ್ಷ ದೊಡ್ಡ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸುವ ಅಗತ್ಯತೆಯಿದೆ. ಸಮಾಜ ಬಾಂಧವರು ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಘವನ್ನು ಬಲಪಡಿಸ ಬೇಕಾಗಿದೆ. ಸಂಘಕ್ಕೊಂದು ಕಚೇರಿ ಹೊಂದುವಲ್ಲಿ ಸಮಾಜ ಬಾಂಧವರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
Advertisement
ಸಂಘದ ಉಪಾಧ್ಯಕ್ಷ ಸಂಜೀವ ಮೂಲ್ಯ ಮಾತನಾಡಿ ಸಂಘದ ಒಳಿತಿಗಾಗಿ ಸಮಾಜ ಬಾಂಧವರೆಲ್ಲರೂ ಸಹಕಾರ ನೀಡಬೇಕೆಂದರು.ಸಂಘದ ಪ್ರಧಾನ ಕಾರ್ಯದರ್ಶಿ ಜಯ ಮೂಲ್ಯ ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ಪ್ರಸ್ತುತಪಡಿಸಿದರು. ಸಂಘದ ಕೋಶಾಧಿಕಾರಿ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸುತ್ತಾ ಸಂಘವನ್ನು ನೂತನವಾಗಿ ನೋಂದಾಯಿಸಿಕೊಂಡಿದ್ದಲ್ಲದೆ ಸಂಘದ ಕಚೇರಿಯನ್ನು ಖರೀದಿಸಲು ಧನ ಸಹಕಾರವಿತ್ತ ಸ್ಥಾಪಕಾಧ್ಯಕ್ಷ ನ್ಯಾಯ ವಾದಿ ಅಪ್ಪು ಮೂಲ್ಯರನ್ನು ಅಭಿನಂದಿಸಿದರು.
ಸಂಘದ ಸದಸ್ಯರಾದ ನ್ಯಾಯವಾದಿ ಮೇಘನಾ ಮೂಲ್ಯ ನೂತನವಾಗಿ ನೋಂದಾಯಿತಗೊಂಡ ಸಂಘದ ಉದ್ದೇಶ ಹಾಗೂ ಕಾನೂನು ಸಲಹೆಗಳನ್ನು ನೀಡಿದರು.
ಆರಂಭದಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಸದಸ್ಯರು ಪ್ರಾರ್ಥಿಸಿದರು. ಶ್ಯಾಮ್ ಸುವರ್ಣ ಹಾಗೂ ನೂತನ್ ಸುವರ್ಣ ದಂಪತಿಯನ್ನು ಸತ್ಕರಿಸಲಾಯಿತು. ಕ್ರೀಡೋತ್ಸವದಲ್ಲಿ ಕಾರ್ಯದರ್ಶಿ ಜಯ ಮೂಲ್ಯ ಸ್ವಾಗತಿಸಿದರು. ಉಪಾಧ್ಯಕ್ಷ ರವಿ ಕೆ. ಮೂಲ್ಯ ವಂದಿಸಿದರು. ಮನೋರಂಜನೆಯ ಅಂಗವಾಗಿ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಚಿತ್ರ-ವರದಿ: ಕಿರಣ್ ಬಿ.ರೈ ಕರ್ನೂರು