Advertisement

ಕುಲಾಲ ಸಂಘ: 14ನೇ ವಾರ್ಷಿಕ ಸ್ನೇಹ ಸಮ್ಮಿಲನ

03:05 PM Nov 21, 2017 | |

ಮುಂಬಯಿ: ಯುವಕರಲ್ಲಿ ನಾಯಕತ್ವದ ಗುಣವಿದೆ. ಅವರ ಸರಿಯಾದ ಸದ್ಭಳಿಕೆಯನ್ನು ಸಂಘಟನೆಗೆ ಅಳವಡಿಸಬೇಕು. 87 ವರ್ಷಗಳ ಹಿಂದೆ ಸ್ಥಾಪಿತವಾದ ಈ ಸಂಸ್ಥೆ  ಯುವ ಜನಾಂಗದ ಕೊಡುಗೆಯಾಗಿದೆ. ಕುಲದ ಸರ್ವತೋಮುಖ ಅಭಿವೃದ್ಧಿಗಾಗಿ ಹುಟ್ಟಿಕೊಂಡ ಕುಲಾಲ ಸಂಘ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ಸ್ಥಳೀಯ ಸಮಿತಿಗಳ ಸ್ನೇಹ ಸಮ್ಮಿಲನಗಳು ಹೃದಯ ಹೃದಯಗಳ ಬೆಸುಗೆಯೊಂದಿಗೆ ಮುನ್ನಡೆಯಲಿ ಎಂದು ಕುಲಾಲ ಸಂಘ ಮುಂಬಯಿ ಇದರ ನೂತನ ಅಧ್ಯಕ್ಷ ದೇವದಾಸ್‌ ಎಲ್‌. ಕುಲಾಲ್‌ ಅವರು ನುಡಿದರು.

Advertisement

ನ. 19ರಂದು ನಲಸೋಪರ ಪಶ್ಚಿಮದ ಹೊಟೇಲ್‌ ಗ್ಯಾಲಕ್ಸಿ ಸಭಾಂಗಣದಲ್ಲಿ ಕುಲಾಲ ಸಂಘ ಮುಂಬಯಿ ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ 14ನೇ ವಾರ್ಷಿಕ ಸ್ನೇಹ ಸಮ್ಮಿಲನದ ಅಧ್ಯಕ್ಷ ವಹಿಸಿ ಮಾತನಾಡಿದ, ಅವರು ಸ್ವಜಾತಿ ಸಂಘಟನೆಯೊಂದಿಗೆ ಇತರ ಪರಿಸರದ ಕನ್ನಡ-ತುಳು ಸಂಸ್ಥೆಯೊಂದಿಗೆ ನಿಕಟ ಸಂಪರ್ಕವಿರಿಸಬೇಕು. ತಾನು ಬದುಕಿ ಇತರ ಬದುಕಿಗೆ ಆಸರೆಯಾಗುವ ಮಾನವ ಧರ್ಮವನ್ನು ಬೆಳೆಸಬೇಕು ಎಂದರು.
ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಪೂಜಾರಿ ಸ್ವಾಗತಿಸಿ ಮಾತನಾಡಿ, ಕ್ರೀಡೆ, ಆರೋಗ್ಯ ಹಾಗೂ ಶಿಕ್ಷಣಕ್ಕೆ ಸ್ಥಳೀಯ ಸಮಿತಿಯು ಸಾಧ್ಯವಾದಷ್ಟು ಶ್ರಮ ವಹಿಸಿ ಯಶಸ್ವಿಗೊಳಿಸಿದೆ. ಪೂರ್ವಜರು ಪಟ್ಟ ಶ್ರಮದ ದ್ಯೋತಕವಾದ ಕುಲಾಲ ಸಂಘ ಮುಂಬಯಿಯನ್ನು ಅತ್ಯಧಿಕಸದಸ್ಯರಸೇರ್ಪಡೆಯೊಂದಿಗೆ ಭದ್ರತೆಗೊಳಿಸಬೇಕು ಎಂದು ನುಡಿದರು.

ಜ್ಯೋತಿ ಕೋ ಆಪರೇಟಿವ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ಅವರು ಮಾತನಾಡಿ, ಕುಲಾಲ ಸಂಘ ಪ್ರಾಯೋಜಿತ ಜ್ಯೋತಿ ಕೋ ಆಪರೇಟಿವ್‌ ಸೊಸೈಟಿ ಆರ್ಥಿಕ ಕ್ಷೇತ್ರದಲ್ಲಿ ಗಮನೀಯ ಪ್ರಗತಿ ಸಾಧಿಸಿದೆ. ಈಗಾಗಲೇ ನಲಸೋಪರ ಮತ್ತು ಪುಣೆ ಶಾಖೆಗಳನ್ನು ತೆರೆಯಲು ಪರವಾನಿಗೆ ದೊರಕಿದೆ. ವಿವಿಧ ಸಾಲ-ಸೌಲಭ್ಯಗಳ ಸದುಪಯೋಗಕ್ಕೆ ಸ್ವಜಾತಿ-ಬಾಂಧವರು ಮುಂದಾ ಗಬೇಕು ಎಂದರು.

ಇದೇ ಸಂದರ್ಭದಲ್ಲಿ ಕಟ್ಟಡ ಸಮಿತಿಯ ಉಪ ಸಮಿತಿಯ ಕಾರ್ಯಾಧ್ಯಕ್ಷ ಡಿ. ಐ. ಮೂಲ್ಯ ಸ್ಥಳೀಯ ಸಮಿತಿಯ ಮಾಜಿ ಉಪ ಕಾರ್ಯಾಧ್ಯಕ್ಷ ಮಹಾಬಲ ಮೂಲ್ಯ, ಸ್ಥಳೀಯ ಸಮಿತಿಯ ಹಿರಿಯ ಸದಸ್ಯೆ ಜಾನಕಿ ಭುಜಂಗ ಬಂಗೇರ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿದರು. ಬಾಲ ಪ್ರತಿಭೆಗಳಾದ ಆಶಾ ಸಿ. ಮೂಲ್ಯ, ನಿಶಾ ಪಿ. ಕುಲಾಲ್‌, ಕೃಷ್ಣ ಸೂರ್ಯವಂಶಿ ಅವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ನೀಡಿ ಗೌರವಿಸಲಾಯಿತು.
ಕೇಂದ್ರ ಕಚೇರಿಯ ಉಪಾಧ್ಯಕ್ಷ ರಘು ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್‌, ಕೋಶಾಧಿಕಾರಿ ಜಯ ಎಸ್‌. ಅಂಚನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌, ಥಾಣೆ-ಕಸರಾ-ಕರ್ಜತ್‌ -ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ, ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ ಮೂಲ್ಯ, ಚರ್ಚ್‌ ಗೇಟ್‌-ದಹಿಸರ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘು ಪಿ. ಮೂಲ್ಯ, ಸಿಎಸ್‌ಟಿ-ಮುಲುಂಡ್‌ ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಸುಂದರ ಮೂಲ್ಯ, ಸಂಘಟನಾ ಕಾರ್ಯಾಧ್ಯಕ್ಷ ಉಮಾನಾಥ ಮೂಲ್ಯ, ಅಮೂಲ್ಯ ಪತ್ರಿಕೆಯ ಸಂಪಾದಕ ಶಂಕರ ವೈ. ಮೂಲ್ಯ ಅವರು ಮಾತನಾಡಿ ಶುಭ ಹಾರೈಸಿದರು.

ಗುರುವಂದನ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಕುಲಾಲ್‌, ಕಾರ್ಯದರ್ಶಿ ಆದ್ಯಪಾಡಿ ವಾಮನ್‌ ಡಿ. ಮೂಲ್ಯ, ಸ್ಥಳೀಯ ಸಮಿತಿಯ ಕಾರ್ಯದರ್ಶಿ ಮೋಹನ್‌ ಬಂಜನ್‌, ಕೋಶಾಧಿಕಾರಿ ಯೋಗೇಶ್‌ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುರೇಖಾ ಬಂಜನ್‌, ಕಾರ್ಯಾಧ್ಯಕ್ಷ ರಘುನಾಥ ಕರ್ಕೇರ ಮತ್ತಿತರ ಗಣ್ಯರನ್ನು ಗೌರವಿಸಿದರು.

Advertisement

ಕುಂಬಾರ ಗೀತೆಯನ್ನು ಉದಯ ಮೂಲ್ಯ ಮೀರಾರೋಡ್‌ ಅವರು ಹಾಡಿದರು. ಆಶಾ ಮೂಲ್ಯ, ಪ್ರಣೀತಾ ಮೂಲ್ಯ ಪ್ರಾರ್ಥನೆಗೈದರು. ಗೀತಾ ಬಂಗೇರ ಮತ್ತು ಜಯಂತಿ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next