ಕುಂಬಳೆ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಪೈವಳಿಕೆ ಶಾಖೆಯ ವತಿಯಿಂದ ಪೈವಳಿಕೆ ಕಾಯರ್‌ಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಗುಡಿಕೈಗಾರಿಕಾ ಕೇಂದ್ರವನ್ನು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಉದ್ಘಾಟಿಸಿದರು. ಕುಲಾಲ ಸಮಾಜ ಮಂದಿರದ ಸಮಾರಂಭವನ್ನು ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಜಾತಿ ಧರ್ಮದ ನೆಲೆಯಲ್ಲಿ ಮಣ್ಣಿನ ಕುಲಕಸುಬಿನೊಂದಿಗೆ ಜೀವನ ನಡೆಸುವ ಕುಲಾಲ ಸಮಾಜ ಶ್ರಮಜೀವಿಗಳಾಗಿದ್ದು ಇತರ ಸಮಾಜಕ್ಕೆ ಗೌರವ ನೀಡುವ ಮಾದರಿ ಸಮಾಜವಾಗಿದೆ. ಧ್ಯಾನ ಶಕ್ತಿ,ಇಚ್ಛಾಶಕ್ತಿ, ಕ್ರಿಯಾ ಶಕ್ತಿ,ಜನಶಕ್ತಿ ಇದ್ದಾಗ ಧನಶಕ್ತಿ ಕೂಡಿ ಬರುವುದು.ಇದನ್ನು ಸಮಾಜ ಸಂಘಟನೆಗಳು ಸದ್ವಿನಿಯೋಗ ಮಾಡಿಕೊಳ್ಳಬೇಕಾಗಿದೆ. ಗುಡಿಕೈಗಾರಿಕೆಯು ಇಂದು ವಿಜ್ಞಾನಕ್ಕೂ ಸವಾಲಾಗಿದೆ ಎಂದರು. ಸಭಾ ಸಮಾರಂಭದಲ್ಲಿ ಪೈವಳಿಕೆ ಅರಮನೆಯ ರಂಗತ್ತೈ ಅರಸರು ಮತ್ತು ವೇ|ಮೂ| ರಾಮ ಪ್ರಸಾದ್ ನಲ್ಲೂರಾಯರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚೇತನಾ ಎಂ. ಕೇಂದ್ರಕ್ಕೆ ಶುಭಹಾರೈಸಿ ಮಾತನಾಡಿ ನಾವು ಮೂಲ ಕಸುಬು ಮತ್ತು ಮೂಲ ನಂಬಿಕೆಯನ್ನು ಮರೆಯಬಾರದು. ಇದು ನಮ್ಮ ಸುಗಮ ಜೀವನಕ್ಕೆ ಕೈಹಿಡಿದು ದಾರಿ ತೋರಿಸುವುದು ಎಂದರು.
ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಸಮಾರಂಭದಲ್ಲಿ ವಿವಿಧ ರಂಗಗಳ ಗಣ್ಯರಾದ ಸದಾಶಿವ ಯು. ವರ್ಕಾಡಿ, ರಜಿಯಾ ರಜಾಕ್ ಚಿಪ್ಪಾರ್, ಪುರುಷೋತ್ತಮ ಚೇಂಡ್ಲ, ಡಾ| ತೇಜಸ್ವಿರಾಜ್, ಭಾಸ್ಕರನ್ ಪೈಕ, ಶ್ರೀನಿವಾಸ್ ಸಾಲ್ಯಾನ್ ಪಡೀಲ್, ಪ್ರೇಮಾನಂದ ಕುಲಾಲ್ ಕೋಡಿಕಲ್, ರಾಮಚಂದ್ರ ಗಟ್ಟಿ ಮೀಯಪದವು, ಚೇವಾರ್, ಸದಾಶಿವ ಚೇರಾಲ್, ಮೀನಾಕ್ಷಿ ಸಿ.ಕೆ. ಚಿಪ್ಪಾರ್, ಪ್ರಮೀಳಾ ಮಾನೂರ್, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಎನ್. ಕೃಷ್ಣಪ್ಪ ಕುಲಾಲ್ ಪುತ್ತೂರು, ಸೀತಾರಾಮ ನಾಯ್ಕ ಪೈವಳಿಕೆ, ನ್ಯಾಯವಾದಿ ಮಹೇಶ್ ಸವಣೂರು, ಗಣೇಶ್ ಕುಲಾಲ್ ಪೆರ್ವಡಿ, ವೆಂಕಪ್ಪ ಕನೀರುತೋಟ, ಸದಾನಂದ ಕೋಡಂದೂರು, ಐತ್ತಪ್ಪ ಅಟ್ಟೆಗೋಳಿ, ತಿಮ್ಮಪ್ಪ ತೆಂಕಮಜಲು, ರಾಮ ಮೂಲ್ಯ ಅಂಗಡಿಮಾರು, ಶೀನ ಮಾಸ್ಟರ್ ಕೋರಿಕ್ಕಾರು, ಪ್ರಕಾಶ್ ಸಸಿಹಿತ್ತಿಲು, ಕುಂಞ ಮೂಲ್ಯ ಪೆರ್ಲ, ನಾರಾಯಣ ಸಾಲ್ಯಾನ್ ನೂಜಿ, ಜಗದೀಶ್ ಕಣ್ವತೀರ್ಥ, ಸುರೇಶ್ ಮಡ್ವ, ಆನಂದ ಮಾಸ್ಟರ್, ಅಬ್ದುಲ್ ಅಜೀಜ್ ಕಳಾಯಿ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಾಧಕರನ್ನು ಸಮ್ಮಾನಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷ ಹರೀಶ್ ಬೊಟ್ಟಾರಿ ಸ್ವಾಗತಿಸಿದರು. ಸದಾನಂದ ಚಿಪ್ಪಾರ್ ವಂದಿಸಿದರು. ನವೀನ್ ಕುಲಾಲ್‌ಪುತ್ತೂರು ನಿರೂಪಿಸಿದರು. ಕಾರ್ಯಕ್ರಮದಂಗವಾಗಿ ಬೆಳಗ್ಗೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ವಿವಿಧ ವಿನೋದಾವಳಿ. ಬಳಿಕ ನಾರಾಯಣ ಕುಲಾಲ್ ಗೋಳಿಮೂಲೆ ನಿರ್ದೇಶನದಲ್ಲಿ ‘ಬಬ್ರುವಾಹನ’ ಯಕ್ಷಗಾನ ಬಯಲಾಟ ಜರಗಿತು.
ಕುಲಾಲ ಸಮಾಜದ ಕುಂಬಾರರು ಶ್ರಮದ ಬೆವರು ಹರಿಸಿ ನಿರ್ಮಿಸುವ ಮಡಕೆ ಆರೋಗ್ಯಕ್ಕೆ ಸಹಕಾರಿಯಾಗಿದೆ. ಈ ಶುಭಾರಂಭಗೊಂಡ ಕೇಂದ್ರದಲ್ಲಿ ಇನ್ನಷ್ಟು ಕುಲಕಸುಬುಗಳು ಆರಂಭವಾಗಿ ಜನರ ಆಶೋತ್ತರಗಳನ್ನು ಈಡೇರಿಸಲಿ ಎಂದು ಕೇಂದ್ರಕ್ಕೆ ಶುಭಹಾರೈಸಿದರು.
– ಭಾರತಿ ಜೆ. ಶೆಟ್ಟಿ, ಅಧ್ಯಕ್ಷೆ, ಪೈವಳಿಕೆ ಗ್ರಾಮ ಪಂಚಾಯತ್