Advertisement
ಕಳೆದ ವರ್ಷದ ಮೇ ತಿಂಗಳಿನಲ್ಲಿ ಬ್ರೇಕ್ ವಾಟರ್‌ನ ಕಾಮಗಾರಿ ಆರಂಭವಾಗಿ ಕೆಲವು ತಿಂಗಳ ಹಿಂದೆಯಷ್ಟೇ ಮುಗಿದಿತ್ತು. ಈಗ ಪೂರ್ವ ಭಾಗದ ಬ್ರೇಕ್ ವಾಟರ್ ಕುಸಿದು, ಇಬ್ಭಾಗವಾಗಿದೆ. ಪಶ್ಚಿಮ ದಿಕ್ಕಿನಲ್ಲಿರುವ ಇನ್ನೊಂದು ಬ್ರೇಕ್ ವಾಟರ್ ಸದ್ಯ ಸುರಕ್ಷಿತವಾಗಿದೆ.
ಕಳೆದ ವರ್ಷದ ಮಳೆಗಾಲದ ವೇಳೆ ಕಾಮಗಾರಿ ಆರಂಭವಾಗಿತ್ತಷ್ಟೇ. ಅನಂತರ ಎದುರಾದ ಮೊದಲ ಮಳೆಗಾಲದ ಆರಂಭದಲ್ಲಿಯೇ ಅದು ಕುಸಿದಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಬ್ರೇಕ್ ವಾಟರ್ ನಿರ್ಮಾಣದ ವೇಳೆ ತಳಭಾಗದಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವ ಕಾರಣ ಬ್ರೇಕ್‌ವಾಟರ್ ಕಲ್ಲುಗಳು ಹೊಗೆಯಲ್ಲಿ ಹುದುಗಿ ಹೋಗುತ್ತಿವೆ. ಕಿರುಜೆಟ್ಟಿಯ ಕಾಮಗಾರಿ ಕಳೆದ ಕೆಲವು ಸಮಯದಿಂದ ನಡೆಯುತ್ತಿದೆ. ಸುಮಾರು 172 ಕೋ. ರೂ. ಅಧಿಕ ವೆಚ್ಚದ ಕಿರುಜೆಟ್ಟಿಯ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.