Advertisement

ಅಕ್ರಮ ಅಕ್ಕಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಅಧಿಕಾರಿಗಳ ದಾಳಿ : ಚಾಲಕ ಪರಾರಿ

10:55 PM Jul 12, 2022 | Team Udayavani |

ಕುಳಗೇರಿ ಕ್ರಾಸ್ : ಸರಕಾರದ ವಿವಿಧ ಯೋಜನೆಯಡಿ ವಿತರಿಸಲಾಗುತ್ತಿರುವ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ, ವಾಹನವನ್ನು ಆಹಾರ ನಿರೀಕ್ಷಕರು ಹಿಡಿದಿದ್ದು, ವಾಹನದ ಚಾಲಕ ಪರಾರಿಯಾದ ಘಟನೆ ಬಾದಾಮಿ ತಾಲೂಕಿನ ಚಿಮ್ಮನಕಟ್ಟಿ ಗ್ರಾಮದ ಹತ್ತಿರ ಮಂಗಳವಾರ ಸಂಜೆ ನಡೆದಿದೆ.

Advertisement

ಚಿಮ್ಮನಕಟ್ಟಿ ಗ್ರಾಮದ ಕಡೆಯಿಂದ ಕುಳಗೇರಿ ಕಡೆಗೆ ಅಕ್ರಮ ಅಕ್ಕಿ ತುಂಬಿಕೊಂಡು ಹೊರಟಿದ್ದ ಅಶೋಕ ಲೇಲ್ಯಾಂಡ್ ವಾಹನವನ್ನು ಆಹಾರ ನಿರೀಕ್ಷಕ ಶಬ್ಬೀರ ಅಹ್ಮದ್ ಕೋತವಾಲ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ವಾಹನದಲ್ಲಿ ರೂ.46970 ಮೌಲ್ಯದ 2135 ಕೆಜಿ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದರು. ವಾಹನದ ಚಾಲಕ ಮತ್ತು ಮಾಲೀಕರ ವಿರುದ್ದ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸಾಗರ : ಶಿಶು ಮಾರಾಟ ಯತ್ನ ವಿಫಲಗೊಳಿಸಿದ ಮಕ್ಕಳ ರಕ್ಷಣಾ ಘಟಕ

Advertisement

Udayavani is now on Telegram. Click here to join our channel and stay updated with the latest news.

Next