ಮಹಾನಗರ: ಹಂಪನಕಟ್ಟೆ ಕೆ.ಎಸ್.ರಾವ್ ರಸ್ತೆಯ ಕುಲ್ಯಾಡಿಕಾರ್ ಫೇಬ್ರಿಕ್ಸ್‌ನ ನವೀಕೃತ ಮಳಿಗೆ ಹಾಗೂ ವಿಶೇಷ ರೇಷ್ಮೆ ಸೀರೆಗಳ ವಿಭಾಗದ ಶುಭಾರಂಭದ ಅಂಗವಾಗಿ ಹಮ್ಮಿಕೊಂಡಿರುವ ವಿಶೇಷ ದರದ ಮಾರಾಟ ಅ. 4ರಂದು ಕೊನೆಗೊಳ್ಳಲಿದೆ.
ಜವಳಿ ಉದ್ಯಮದಲ್ಲಿ 4 ದಶಕಗಳ ಅನುಭವ ಹೊಂದಿರುವ ಮಳಿಗೆಯನ್ನು ಗ್ರಾಹಕರ ಅನುಕೂಲಕ್ಕಾಗಿ ನವೀಕರಿಸಿ ಜತೆಗೆ ಹೊಸದಾಗಿ ಸೀರೆಗಳ ವಿಭಾಗವನ್ನು ಆರಂಭಿಸಲಾಗಿದೆ. 40 ವರ್ಷಗಳ ಹಿಂದೆ ದಿ| ಕುಲ್ಯಾಡಿ ಸುಬ್ರಾಯ ಪೈ ಅವರಿಂದ ಸ್ಥಾಪಿಸಲ್ಪಟ್ಟ ಮಳಿಗೆಯು, ‘ನಿಯಮಿತ ದರ ಹಾಗೂ ಅನಿಯಮಿತ ಗ್ರಾಹಕರು’ ಎಂಬ ನಿಯಮದಲ್ಲೇ ತನ್ನ ವ್ಯಾಪಾರವನ್ನು ನಡೆಸಿಕೊಂಡು ಬಂದಿರುತ್ತದೆ.
ಮಂಗಳೂರಿಗೆ ಸಿಲ್ಕ್ ಮಾರ್ಕ್‌ನ್ನು ಪರಿಚಯಿಸಿದ ಆರಂಭದ ಸಂಸ್ಥೆಗಳಲ್ಲಿ ಒಂದಾಗಿದ್ದು, ಪ್ರಸ್ತುತ ಎಲ್ಲ ವಿವಿಧ ವಸ್ತ್ರಗಳು ಕೂಡ ಒಂದೇ ಸೂರಿನಡಿ ಲಭ್ಯವಿರುತ್ತದೆ. ಕಾಂಜೀವರಂ, ಧರ್ಮಾವರಂ, ಪ್ರಿಂಟೆಡ್ ಪ್ಯೂರ್ ಸಿಲ್ಕ್, ಪ್ಯೂರ್ ಹ್ಯಾಂಡ್‌ಲೂಮ್ ಕಾಟನ್ ಸಾರೀಸ್, ಕಾಟನ್ ಸಿಲ್ಕ್, ಬನಾರಸ್, ಸಾಫ್ಟ್ ಸಿಲ್ಕ್, ಸಿಂಥೆಟಿಕ್ ಸಾರೀಸ್, ಅರ್ನಿ, ಕೊಲಂ ಸಿಲ್ಕ್, ಮೈಸೂರ್ ಸಿಲ್ಕ್ ಸಹಿತ ಎಲ್ಲ ರೀತಿಯ ಅತ್ಯಾಧುನಿಕ ಡಿಸೈನ್‌ಗಳ ಸೀರೆಗಳು ಲಭ್ಯವಿರುತ್ತವೆ.
ಸೂಟಿಂಗ್ಸ್, ಶರ್ಟಿಂಗ್ಸ್, ರಾಮರಾಜ್, ಸಿಲ್ಕ್, ಕಾಟನ್ ಧೋತಿ, ಚೂಡಿದಾರ್ ಸೆಟ್, ಲೆಹಂಗಾ ಚೋಲಿ ಹೀಗೆ ಎಲ್ಲ
ವಿವಿಧ ಬಟ್ಟೆಗಳು ಕೂಡ ಒಂದೇ ಸೂರಿನಡಿ ಲಭ್ಯವಾಗಲಿವೆ. ಎಲ್ಲ ವಿಧದ ಪ್ರಮುಖ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳನ್ನು ಸ್ವೀಕರಿಸಲಾಗುತ್ತಿದ್ದು, ಗ್ರಾಹಕರು ಮಳಿಗೆಗೆ ಒಮ್ಮೆ ಭೇಟಿ ನೀಡುವಂತೆ ಮಾಲಕರಾದ ಕುಲ್ಯಾಡಿ ಮರ್ತು ಪೈ ಹಾಗೂ ಕುಲ್ಯಾಡಿ ಶ್ರವಣ್ ಪೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.