ಉಡುಪಿ/ಮಂಗಳೂರು/ ಸುಬ್ರಹ್ಮಣ್ಯ: ಕರಾವಳಿಯಲ್ಲಿ ಸೋಮವಾರವೂ ಬಿಸಿಲ ವಾತಾವರಣದ ನಡುವೆ ಬಿಟ್ಟುಬಿಟ್ಟು ಮಳೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ ಪರಿಸರದಲ್ಲಿ ರವಿವಾರ ರಾತ್ರಿ ಎಡೆಬಿಡದೇ ಧಾರಾಕಾರ ಮಳೆಯಾಗಿದೆ. ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಹಳ್ಳ, ತೋಡುಗಳು ತುಂಬಿ ಹರಿದಿವೆ.
ಸೋಮವಾರ ಬಹುತೇಕ ಬಿಸಿಲಿನ ವಾತಾವರಣ ಇದ್ದರೂ ಸುಳ್ಯ, ಅರಂತೋಡು, ಸಂಪಾಜೆ, ಸೋಣಂಗೇರಿ, ಐವರ್ನಾಡು, ಬೆಳ್ಳಾರೆ, ಕಲ್ಮಡ್ಕ, ಪಂಜ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ, ಐನೆಕಿದು, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಬಿಳಿನೆಲೆ ಭಾಗದಲ್ಲಿ ಆಗಾಗ ಮಳೆಯಾಯಿತು.
ರವಿವಾರ ತಡರಾತ್ರಿ, ಸೋಮವಾರ ಕುಂದಾಪುರ, ಬೈಂದೂರು, ಬ್ರಹ್ಮಾವರ, ಸಿದ್ದಾಪುರ, ಹೆಬ್ರಿ, ಕಾರ್ಕಳ, ಅಜೆಕಾರು, ಕಾಪು, ಮಲ್ಪೆ, ಪೆರ್ಡೂರು ಭಾಗದಲ್ಲಿ ಸಾಧರಣ ಮಳೆಯಾಗಿದೆ. ಬ್ರಹ್ಮಾವರ ಉಪ್ಪೂರು, ಹಾರಾಡಿ, ವಡ್ಡರ್ಸೆ ಭಾಗದಲ್ಲಿ ಗಾಳಿ ಮಳೆಗೆ ಮನೆಗಳಿಗೆ ಹಾನಿ ಸಂಭವಿಸಿದೆ.