Advertisement
ಈ ನದಿಯು ಸುಮಾರು 10ರಿಂದ 15 ನಿಮಿಷಗಳ ಕಾಲ ಪ್ರವಾಹ ಸದೃಶವಾಗಿ ಹರಿಯಿತು. ನದಿಯ ಪ್ರವಾಹವು ಆದಿಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣಕ್ಕೆ ಪ್ರವೇಶಿಸಿತು. ಅಲ್ಲದೆ ಅಲ್ಪ ಪ್ರಮಾಣದಲ್ಲಿ ಸಂಪ್ರದಾಯ ಪ್ರಕಾರ ಒಳ ಪ್ರವೇಶಿಸಿ ಸಂಪೂರ್ಣ ಪ್ರವಾಹ ಶಾಂತವಾಯಿತು.ಮಧ್ಯಾಹ್ನ ಸುಮಾರು 2.15ರ ಸುಮಾರಿಗೆ ಭಾರೀ ಗುಡುಗು ಸಹಿತ ಸಣ್ಣಗೆ ಮಳೆ ಆರಂಭವಾಯಿತು. ಬಳಿಕ 3 ಗಂಟೆಯಿಂದ ಸುಮಾರು ಒಂದು ತಾಸು ಭಾರೀ ಮಳೆಯಾಯಿತು. ಈ ಮಳೆಗೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿಯು ತುಂಬಿ ಹರಿಯಿತು. ಸುಮಾರು ಒಂದು ಗಂಟೆಯ ಮಳೆಗೆ ದರ್ಪಣತೀರ್ಥವು 15 ನಿಮಿಷಗಳ ಕಾಲ ಪ್ರವಾಹ ಸದೃಶವಾಗಿ ಹರಿಯಿತು.