Advertisement
ಮಡೆಸ್ನಾನ ಪ್ರಾರಂಭಕ್ಷೇತ್ರದಲ್ಲಿ ಬೀದಿ ಮಡೆಸ್ನಾನ ಸೇವೆ ಆರಂಭ ಗೊಂಡಿದೆ. ಕುಮಾರಧಾರಾ- ಕಾಶಿಕಟ್ಟೆ ತನಕ ರಸ್ತೆ ವಿಸ್ತರಣೆ ಕಾಮಗಾರಿ ನಡೆದಿದೆ. ಬೀದಿ ಮಡೆಸ್ನಾನ ನಡೆಸುವ ಭಕ್ತರಿಗೆ ಇದು ಅನುಕೂಲವಾಗಿದೆ. ಈ ಮಾರ್ಗದಲ್ಲಿ ಕುಮಾರಧಾರಾ, ಕುಲ್ಕುಂದ ತನಕ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಎಚ್ಚರಿಕೆ ನಾಮಫಲಕವನ್ನೂ ರಸ್ತೆ ಬದಿ ಅಳವಡಿಸಲಾಗಿದೆ.
Related Articles
ಕಾಶಿಕಟ್ಟೆ, ಬಿಲದ್ವಾರ, ಜೂನಿಯರ್ ಕಾಲೇಜು, ಕುಮಾರಧಾರ, ವಾಸುಕಿ ಛತ್ರ ಮುಂಭಾಗ, ಆದಿ ಸುಬ್ರಹ್ಮಣ್ಯ ಹೊರಾಂಗಣದಲ್ಲಿ ಗಾಂಗೇಯ ಛತ್ರದ ಪಕ್ಕ, ರಕ್ತೇಶ್ವರಿ ಗುಡಿ ಪಕ್ಕ, ಇಂಡಿಯನ್ ಓವರ್ ಸೀಸ್ ಬ್ಯಾಂಕು, ಕೆಎಸ್‌ಆರ್‌ಟಿಸಿ ಬಿಸ್ ನಿಲುಗಡೆ, ಬಿಲದ್ವಾರ ಎದುರು, ಅರಣ್ಯ ಇಲಾಖೆ ಕಚೇರಿ ಬಳಿ, ಪಾರ್ಕಿಂಗ್ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಹೊಟೇಲುಗಳಲ್ಲಿ ಬಿಸಿ ನೀರು ನೀಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
Advertisement
ಪೊಲೀಸರಿಂದಲೂ ಸಕಲ ಸಿದ್ಧತೆಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬಂದಿ, ಗೃಹರಕ್ಷಕದಳ ಸಿಬಂದಿಯವರನ್ನು ನಿಯೋಜಿಸಲು ಕ್ರಮ ವಹಿಸಲಾಗಿದೆ. ದೇಗುಲದ ಒಳಾಂಗಣ, ಹೊರಾಂಗಣ, ಸ್ನಾನಘಟ್ಟ, ಭೋಜನ ಶಾಲೆ ಆದಿಸುಬ್ರಹ್ಮಣ್ಯ, ರಥಬೀದಿ, ಪಾರ್ಕಿಂಗ್ ಸ್ಥಳ ಮೊದಲಾದ ಕಡೆಗಳಲ್ಲಿ ಘರ್ಷಣೆ, ಕಳ್ಳತನ, ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ. ಹೆಚ್ಚುವರಿ ಗೃಹರಕ್ಷಕ ದಳ ಸಿಬಂದಿ ಸಹಕಾರ ಪಡೆಯಲಾಗಿದೆ. ಪಾರ್ಕಿಂಗ್ ಸ್ಥಳಗಳು, ರಥಬೀದಿ ಹಾಗೂ ಇತರ ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ, ಬ್ರಹ್ಮರಥ ಎಳೆಯುವ ವೇಳೆ ನೂಕುನುಗ್ಗಲು ನಿಯಂತ್ರಿಸಲು ರಥಬೀದಿಯ ಎರಡು ಬದಿ ಮಾರ್ಕಿಂಗ್, ಬ್ಯಾರಿಕೇಡ್ ಅಳವಡಿಕೆ, ಐಒಬಿ, ಜಂಕ್ಷನ್, ಕಾಶಿಕಟ್ಟೆ ಮೊದಲಾದ ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುತ್ತದೆ. ಸುವ್ಯವಸ್ಥಿತ ಪಾರ್ಕಿಂಗ್
ಪುತ್ತೂರು ಗುಂಡ್ಯ ಹಾಗೂ ಉಪ್ಪಿನಂಗಡಿ ಕಡೆಯಿಂದ ಬರುವ ಖಾಸಗಿ ವಾಹನಗಳಿಗೆ ಪದವಿಪೂರ್ವ ಕಾಲೇಜು, ಎಸ್‌ಎಸ್‌ಪಿಯು ಕಾಲೇಜು ಮೈದಾನ, ಬಸ್‌ಗಳಿಗೆ ಬಿಲದ್ವಾರ ಎದುರಿನ ಪಾರ್ಕಿಂಗ್‌ನಲ್ಲಿ ನಿಲುಗಡೆ. ಹರಕೆ ರಥೋತ್ಸವ, ಸೇವಾರ್ಥಿಗಳು, ವಿವಿಧ ಇಲಾಖೆ ವಾಹನಗಳಿಗೆ ವಿವಿಐಪಿಗಳ ವಾಹನಗಳಿಗೆ ಅರಣ್ಯ ಇಲಾಖೆ ಕಚೇರಿ ಹಿಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಳ್ಯ ಕಡೆಯಿಂದ ಬರುವ ಸರಕಾರಿ ಹಾಗೂ ಖಾಸಗಿ ಬಸ್ಸುಗಳಿಗೆ ಸವಾರಿ ಮಂಟಪ ಬಳಿಯ ಪಾರ್ಕಿಂಗ್ ಸ್ಥಳ, ಇತರೆ ವಾಹನಗಳಿಗೆ ಕನ್ನಡಿ ಹೊಳೆ ಸೇತುವೆ ಬಳಿ ಪಾರ್ಕಿಂಗ್‌ಗೆ ವ್ಯವಸ್ಥೆಗೊಳಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಪೊಲೀಸ್ ಗ್ರೌಂಡ್, ಲಘು ವಾಹನಗಳಿಗೆ ವಲ್ಲೀಶ ಸಭಾಭವನ ಪಕ್ಕದ ಖಾಲಿ ಸ್ಥಳ, ಹೆಲಿಪ್ಯಾಡ್ ಸ್ಥಳದಲ್ಲಿ ನಾಲ್ಕು ಚಕ್ರಗಳ ವಾಹನ ನಿಲುಗಡೆ. ಈ ಕಡೆಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಕೆಎಸ್ ಆರ್‌ಟಿಸಿ ಹಾಗೂ ಖಾಸಗಿ ಬಸ್ಸಿನವರು ಮಾರ್ಗ ಬದಿಯಲ್ಲಿ ಪ್ರಯಾಣಿಕರನ್ನು ಇಳಿಸುವುದು ಮತ್ತು ಹತ್ತಿಸುವುದಕ್ಕೆ ಅವಕಾಶವಿಲ್ಲ. ವಿಶೇಷ ತಪಾಸಣ ತಂಡ
ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ತಾತ್ಕಾಲಿಕ ಶೌಚಾಲಯ ನಿರ್ಮಾಣ, ಸುಬ್ರಹ್ಮಣ್ಯ ಆಸುಪಾಸಿನಲ್ಲಿ ಚೌತಿ, ಪಂಚಮಿ, ಷಷ್ಠಿ ಈ ಮೂರು ದಿನ ಮದ್ಯ ನಿಷೇಧಿಸಿ ಮದ್ಯದಂಗಡಿ, ಬಾರ್ ಮುಚ್ಚುವುದು. ಮಾಂಸ ಮಾರಾಟ, ಪ್ಲಾಸ್ಟಿಕ್ ಬಳಕೆ, ತಂಬಾಕು ಪದಾರ್ಥಗಳ ನಿಷೇ ಧಿಸುವುದು. ಇದಕ್ಕಾಗಿಯೇ ವಿಶೇಷ ತಪಾಸಣ ತಂಡ ರಚಿಸಲಾಗಿದೆ. ಲಗೇಜ್ ಕೊಠಡಿ, ಧ್ವನಿವರ್ಧಕ, ಪಾರ್ಕಿಂಗ್, ಡ್ರೆಸ್ಸಿಂಗ್, ಬೆಳಕು, ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿಮೇಳ, ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಸಿಸಿ
ಕೆಮರಾ ಅಳವಡಿಕೆ ಕಾನೂನು ಸುವ್ಯವಸ್ಥೆ ಕುರಿತು ಹೆಚ್ಚಿನ ನಿಗಾ ಇಡಲಾಗಿದೆ. ಅಹಿತಕರ ನಡೆಯದಂತೆ ಹೆಚ್ಚುವರಿ ಸಿಬಂದಿ, ಗೃಹರಕ್ಷಕ ದಳ ಹಾಗೂ ಸಿಸಿ ಟಿವಿ ಕೆಮರಾ ಅಳವಡಿಸಲಾಗಿದೆ. ಸೋಮವಾರ ಸಂಜೆ ವೇಳೆಗೆ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಬಹತೇಕ ಕಾರ್ಯ ಪೂರ್ಣವಾಗುತ್ತದೆ.
-ಗೋಪಾಲ ಪಿಎಸ್‌ಐ,
ಸುಬ್ರಹ್ಮಣ್ಯ ಪೊಲೀಸ್ ಠಾಣೆ ವಿಶೇಷ ವರದಿ