Advertisement

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ: ರಥ ಬೀದಿಯಲ್ಲಿ ಪಾರಂಪರಿಕ ಶಿಲಾಮಯ ಕಟ್ಟಡ

12:44 AM Mar 26, 2022 | Team Udayavani |

ಏನೇನು ಬದಲಾವಣೆ?
ರಥ ಬೀದಿಯ ಎರಡೂ ಬದಿಗಳಲ್ಲಿ ಪಾರಂಪರಿಕ ಶಿಲಾಮಯ ಕಟ್ಟಡ, ತುಳುನಾಡು ಶೈಲಿಯ ಕಟ್ಟಡ, ವಿಶಾಲವಾದ ಆಶ್ಲೇಷಾ ಬಲಿ ಮಂದಿರ, 3500 ಭಕ್ತರು ಏಕಕಾಲದಲ್ಲಿ ಪ್ರಸಾದ ಭೋಜನ ಸ್ವೀಕರಿಸಲು ಅನುಕೂಲವಾಗುವ ಅನ್ನದಾಸೋಹ ಭವನ, ವಿಶಾಲ ಪಾಕಶಾಲೆ, ದಾಸ್ತಾನು ಕೊಠಡಿ, ವಿಶಾಲ ಪಾರ್ಕಿಂಗ್‌ ಜತೆಗೆ ವಾಣಿಜ್ಯ ಸಂಕೀರ್ಣ ಕಟ್ಟಡ.

Advertisement

ವಿಜಯ ನಗರ ಶೈಲಿಯಲ್ಲಿ ಕಂಬಗಳ ನಿರ್ಮಾಣ
ರಥಬೀದಿಯಲ್ಲಿ ನಿರ್ಮಾಣವಾಗಲಿರುವ ಎರಡು ಬದಿಯಲ್ಲಿ ಪಾರಂಪರಿಕ ಶಿಲಾಮಯ ಕಟ್ಟಡಗಳು ನಿರ್ಮಾಣವಾಗಲಿದ್ದು, ವಿಜಯ ನಗರ ಶೈಲಿಯಲ್ಲೂ ಕಂಬಗಳು ನಿರ್ಮಾಣವಾಗಲಿವೆ. ಒಳಾಂಗಣದಲ್ಲಿ ಮೈಸೂರು ಶೈಲಿಯ ವಾಸ್ತುಶಿಲ್ಪ, ಛಾವಣಿಯು ತುಳುನಾಡ ಶೈಲಿಯ ಹಂಚಿನಿಂದ ಆಗಲಿದೆ.

ಮರದ ಪಕ್ಕಾಸುಗಳಲ್ಲಿ ದೇವಸ್ಥಾನ ವಿನ್ಯಾಸ ಕೆತ್ತನೆ ಇರಲಿದೆ. ಮೊದಲ ಮಹಡಿಯಲ್ಲಿ ರಥೋತ್ಸವ ವೀಕ್ಷಣೆಗೆ ಗ್ಯಾಲರಿ ನಿರ್ಮಾಣ ವಾಗಲಿದೆ. ಬಹುಕೋಟಿ ವೆಚ್ಚದ ಮಾಸ್ಟರ್‌ ಪ್ಲಾನ್‌ ಕಾಮಗಾರಿಗಳ ಪ್ರಸ್ತಾವಿತ ಕಾಮಗಾರಿಗಳ ಬಗ್ಗೆ ಮಾಸ್ಟರ್‌ ಪ್ಲಾನ್‌ ಮೇಲ್ವಿಚಾರಣ ಸಮಿತಿ ಸಭೆಯಲ್ಲಿ ಮಂಡಿಸಲಾಗಿದೆ.

ಮುಜರಾಯಿ ಸಚಿವರ ನೇತೃತ್ವದಲ್ಲಿಯೂ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯ ರಾಜ್ಯಮಟ್ಟದ ಅಂದಾಜು ಪಟ್ಟಿ ಪರಿಶೀಲನ ಸಭೆಗೆ ಮಂಡಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next