Advertisement

Kukke Shree Subrahmanya Temple: ಹರಿದು ಬಂದ ಭಕ್ತ ಸಾಗರ

11:34 PM Jun 09, 2024 | Team Udayavani |

ಸುಬ್ರಹ್ಮಣ್ಯ: ಎರಡು ದಿನಗಳ ರಜೆಯ ಹಿನ್ನೆಲೆಯಲ್ಲಿ ಶನಿವಾರ ಹಾಗೂ ರವಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

Advertisement

ಕ್ಷೇತ್ರದ ಒಳಾಂಗಣ, ಪೇಟೆಯಲ್ಲಿ ಅಧಿಕ ಸಂಖ್ಯೆಯ ಭಕ್ತರ ಓಡಾಟ ಕಂಡುಬಂದಿತು. ವಾಹನ ನಿಲುಗಡೆ ಪ್ರದೇಶ ಭರ್ತಿಯಾಗಿ ರಸ್ತೆ ಬದಿಯಲ್ಲೇ ನಿಲುಗಡೆ ಮಾಡಲಾಗಿತ್ತು. ಸರಕಾರಿ ಬಸ್‌ಗಳ ಮೂಲಕವೂ ಅಧಿಕ ಭಕ್ತರು ಆಗಮಿಸಿದ್ದರು. ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಕಂಡುಬಂದಿತ್ತು.

ರಥ ಬೀದಿಯಿಂದಲೇ ದೇವರ ದರ್ಶನ ಹಾಗೂ ಭೋಜನ ಪ್ರಸಾದಕ್ಕಾಗಿ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ಭಕ್ತರಿಗೆ ತೊಂದರೆಯಾಗದಂತೆ ದೇವಸ್ಥಾನದ ವತಿಯಿಂದ ಪೂರಕ ಕ್ರಮ ಕೈಗೊಳ್ಳಲಾಗಿತ್ತು.

ಧರ್ಮಸ್ಥಳ-ಕುಕ್ಕೆ ಸುಬ್ರಹ್ಮಣ್ಯ ನಡುವೆ ಖಾಸಗಿ ಸೇರಿದಂತೆ ವಾಹನಗಳ ಓಡಾಟ ಅಧಿಕವಾಗಿತ್ತು. ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಕರು ಭರ್ತಿಯಾಗಿ ಸಂಚರಿಸುತ್ತಿರುವುದು ಕಂಡುಬಂದಿದೆ.

ಧರ್ಮಸ್ಥಳದಲ್ಲೂ ದಟ್ಟಣೆ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಶನಿವಾರ, ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು. ಸೋಮವಾರ ಶಿವನಿಗೆ ವಿಶೇಷವಾಗಿರುವ ಕಾರಣ ಇಂದೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next