Advertisement

Kukke Subrahmanya; ಸ್ಕಂದ ಪಂಚಮಿ: 267 ಭಕ್ತರಿಂದ ಎಡೆಸ್ನಾನ ಸೇವೆ

11:36 PM Dec 17, 2023 | Team Udayavani |

ಸುಬ್ರಹಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸ್ಕಂದ ಪಂಚಮಿಯ ದಿನವಾದ ರವಿವಾರ ಕುಕ್ಕೆಯಲ್ಲಿ ಸುಮಾರು 267 ಭಕ್ತರು ಗೋವು ಸೇವಿಸಿದ ಎಲೆಯ ಮೇಲೆ ಉರುಳು ಸೇವೆ ನಡೆಸುವ ಮೂಲಕ ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು.

Advertisement

ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇಗುಲದ ಹೊರಾಂಗಣದ ಸುತ್ತ ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯಗಳನ್ನು ಬಡಿಸಲಾಯಿತು. ಬಳಿಕ ದೇಗುಲದ ಗೋವುಗಳು ಅನ್ನಪ್ರಸಾದ ತಿಂದ ಬಳಿಕ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಭಕ್ತರು ಉರುಳು ಸೇವೆ ಕೈಗೊಂಡರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಮುಂತಾದವರು ಉಪಸ್ಥಿತರಿದ್ದರು.ರವಿವಾರ ರಜೆ ದಿನವಾದ್ದರಿಂದ ದೇಗುಲದಲ್ಲಿ ಭಕ್ತರ ಸಂಖ್ಯೆ ನಿರೀಕ್ಷೆಗೂ ಹೆಚ್ಚಿತ್ತು.

18ರಂದು ಮಹಾರಥೋತ್ಸವ
ಡಿ. 18ರಂದು ಬೆಳಗ್ಗೆ 7.33ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ಜರಗಲಿದೆ. ಡಿ.19ರಂದು ಬೆಳಗ್ಗೆ ಅವಭೃತೋತ್ಸವ, ನೌಕಾವಿಹಾರ ನಡೆಯಲಿದೆ. ಷಷ್ಠಿ ದಿನದಂದು ಅಪಾರ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next