ಕುದೂರು: ಮಾಂಸದ ಅಂಗಡಿ ಮಾಲಿಕರು ಗ್ರಾಮದ ಬೈಪಾಸ್ ರಸ್ತೆಯಲ್ಲಿ ನಿತ್ಯ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಹೀಗಾಗಿ ರಸ್ತೆಯಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಗಳಿತೆಯ ದೂರದಲ್ಲಿ ಶಾಲೆಯಿದ್ದು, ನಿತ್ಯ ನೂರಾರು ಮಕ್ಕಳು ಇದೇ ರಸ್ತೆಯ ಮೂಲಕ ಸಂಚರಿಸುತ್ತಾರೆ. ಕಸದ ವಾಸನೆ ಹಾಗೂ ನಾಯಿಗಳ ಹಾವಳಿಯಿಂದ ಮಾರ್ಗ ಬದಲಿಸಿ ಓಡಾಡುವ ಅನಿವಾರ್ಯತೆ ಉಂಟಾ ಗಿದ್ದು, ವಾಹನ ಸವಾರರು ಕೂಡ ಪರದಾಡ ಬೇಕಾಗಿದೆ.
ನಾಯಿಗಳ ದಾಳಿ: ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುತ್ತಿರುವುದರಿಂದ ದುರ್ವಾಸನೆಗೆ ಅಕ್ಕ ಪಕ್ಕದ ಮನೆಯವರು ಸದಾ ಬಾಗಿಲು ಹಾಕಿ ಕೊಂಡಿರಬೇಕಾಗಿದೆ. ತ್ಯಾಜ್ಯದ ವಾಸನೆಗೆ ನಾಯಿ ಗಳ ಹಾವಳಿ ಕೂಡ ಹೆಚ್ಚಾಗಿದ್ದು, ಮಾಂಸ ತಿನ್ನುವಾಗ ಯಾರೇ ಹೋದರು ಕಚ್ಚಲು ಬರುತ್ತವೆ. ಹೀಗಾಗಿ ಮಕ್ಕಳನ್ನು ರಕ್ಷಿಸುವುದು ಕಷ್ಟವಾಗಿದೆ. ಅನಾಹುತಗಳು ಸಂಭವಿಸುವ ಮುನ್ನ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ತ್ಯಾಜ್ಯ ವಿಲೇವಾರಿಗೆ ಸ್ಥಳ ನಿಗದಿ ಮಾಡಬೇಕು.
ಮುಂದುವರೆದ ಹಳೆ ಚಾಳಿ: ಇಲ್ಲಿ ಕಸ ಹಾಕದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಸುತ್ತಲಿನ ಜಾಗ ಸ್ವಚ್ಛಗೊಳಿಸಲಾಗಿತ್ತು. ಆದರೆ ಮಾಂಸದ ಅಂಗಡಿ ಮಾಲಿಕರು ಒಂದೆರಡು ವಾರದ ನಂತರ ಮತ್ತೇ ಅದೆ ಚಾಳಿ ಮುಂದುವರಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಕಸ ತಂದು ಸುರಿಯುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯಿತಿ ಮುಂದಾಗಬೇಕಿದೆ ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
ಇನ್ನು ರಸ್ತೆಯ ಅಕ್ಕ ಪಕ್ಕದಲ್ಲಿರುವ ಸ್ಥಳೀಯ ನಿವಾಸಿಗಳು ಇದರ ದುರ್ವಾಸನೆಗೆ ಸದಾ ಕಿಟಕಿ, ಬಾಗಿಲು ಮುಚ್ಚಿಕೊಂಡು ಇರಬೇಕಾದ ಪರಿಸ್ಥಿತಿ ತಲೆ ದೊರಿದೆ .ನಾವು ಯಾವಗಲು ಬಾಗಿಲು ಹಾಕಿಕೊಂಡಿರಬೇಕು. ಸ್ವಲ್ಪ ಬಾಗಿಲು ತಗೆದರೂ ಕಸಕ್ಕೆ ಹಚ್ಚಿದ ಬೆಂಕಿಯಿಂದ ಬರುವ ದುರ್ವಾಸನೆ ಯುತ ಹೊಗೆ ಮನೆಯನ್ನು ತುಂಬಿಕೊಳ್ಳುತ್ತದೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಸಮಸ್ಯೆ ಪರಿಹಾರಕ್ಕಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವೆ. ಅಲ್ಲದೆ ನಾಯಿಗಳ ಹಾವಳಿಯಿಂದ ಮಕ್ಕಳನ್ನು ನೊಡಿಕೊಳ್ಳುವುದೇ ಒಂದು ದೊಡ್ಡ ಕೆಲಸವಾಗಿದೆ. ಅದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ರಸ್ತೆಯಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ರಸ್ತೆ ಬದಿ ಜಾಗವನ್ನು ಪಂಚಾಯಿತಿ ವತಿಯಿಂದ ಸ್ವಚ್ಛಗೊಳಿಸಲಾಗಿತ್ತು. ಅದರೆ ರಾತ್ರಿ ವೇಳೆ ತ್ಯಾಜ್ಯ ತಂದು ರಸ್ತೆಯ
ಬದಿಗಳಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಕಸ ಹಾಕುವವರಿಗೆ ದಂಡ ಹಾಕಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
●
ವೆಂಕಟೇಶ್, ಪಿಡಿಒ