Advertisement

ಕುಸಿದ ಮನೆಯಲ್ಲೇ ಜೀವನ ಸಾಗಿಸುತ್ತಿರುವ ವೃದ್ದೆ : ವೃದ್ದಾಪ್ಯ ವೇತನ ಒಂದೇ ಜೀವನಾದಾರ

02:50 PM Sep 10, 2022 | Team Udayavani |

ಕುದೂರು ; ಕುದೂರು ಬಳಿಯ ಬೀಚನಹಳ್ಳಿಯ ಸಂಜೀವಜ್ಜಿಯವರ ಬಾಡಿಗೆ ಮನೆ ಇತ್ತೀಚೆಗೆ ಸುರಿಯುತ್ತಿರುವ ಮಳೆಗೆ ಒಂದು ಭಾಗ ಕುಸಿದಿದ್ದು ಪೂರ್ತಿ ಮನೆ ಕುಸಿಯುವ ಆತಂಕದಲ್ಲಿದೆ.

Advertisement

80 ವರ್ಷ ಇಳಿ ವಯಸ್ಸಿನಲ್ಲಿ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರವ ಸಂಜೀವಜ್ಜಿಗೆ ವೃದ್ದಾಪ್ಯ ವೇತನ ಒಂದೇ ಜೀವನಾದಾರ.

ಈ ಇಳಿ ವಯಸ್ಸಿನಲ್ಲಿಯೂ ಬಾಡಿಗೆ ಕಟ್ಟುತ್ತಾ ಜೀವನ ನಡೆಸುತ್ತಿದ್ದು ಪಡಿತರ ಚೀಟಿ ಸೌಲಭ್ಯವೂ ದೊರೆತಿಲ್ಲದಿರುವುದು ದುರಂತ
ಕಳೆದ ಕರೊನಾ ಸಮಯದಲ್ಲಿ ಪತ್ರಿಕೆಯಲ್ಲಿ ವರದಿ ಬಂದ ನಂತರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಇಲಾಖೆ ವತಿಯಿಂದ ವೃದ್ದಾಪ್ಯ ವೇತನ ನೀಡುತ್ತರುವುದು ಬಿಟ್ಟರೆ ಉಳಿದೆಲ್ಲವೂ ಆಶ್ವಾಸನೆಗಳಾಗೇ ಉಳಿದಿವೆ.

ಸರ್ಕಾರದಿಂದ ಸಂಜೀವಜ್ಜಿಯಂತ ಅಸಹಾಯಕರಿಗೆ ಹಲವಾರು ಯೋಜನೆಳನ್ನ ಜಾರಿಗೆ ತಂದಿದ್ದರೂ ಅರ್ಹರಿಗೆ ಈ ಯೊಜನೆಗಳು ತಲುಪುತ್ತಿಲ್ಲದಿರುವುದು ದುರಂತ. ಈ ಕೂಡಲೇ ಸಂಬಂದ ಪಟ್ಟ ಇಲಾಖೆಯವರು ಈ ಕುರಿತು ಪರಿಹಾರ ಒದಗಿಸಿಕೊಡಬೇಕೆಂದು ಮನವಿ.

ಇದನ್ನೂ ಓದಿ : ಅಯನ್‌ ಮುಖರ್ಜಿ“ಬ್ರಹ್ಮಾಸ್ತ್ರ” ವಿರುದ್ಧ ಕಂಗನಾ ಸರಣಿ ಟೀಕಾಸ್ತ್ರ: ಇಂತಹವರನ್ನು ಜೈಲಿಗಟ್ಟಿ!

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next