Advertisement
ಪ್ರಧಾನ ಶ್ರೀ ಅನಂತ ಪದ್ಮನಾಭ ದೇವರಿಗೆ ರಾತ್ರಿಯ ಮಹಾಪೂಜೆ ಜರಗಿದ ಬಳಿಕ ಕ್ಷೇತ್ರದ ದೈವದೇವರ ದೈವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಏಕಕಾಲಕ್ಕೆ ನಾಲ್ಕು ದೈವಗಳಾದ ಶ್ರೀ ಜಾರಂದಾಯ, ಬಂಟ ಮತ್ತು ಶ್ರೀ ಧೂಮಾವತಿ ಹಾಗೂ ಬಂಟ ದೈವಗಳಿಗೆ ಗಗ್ಗರ ಸೇವೆ ಜರಗಿತು.
ನಾಲ್ಕು ದೈವಗಳಿಗೆ ಅಣಿಕಟ್ಟೆ ವಿಶೇಷ ನೇಮ ಜರಗಿ ಶ್ರೀದೇವರ ಬ್ರಹ್ಮರಥ ಸಾಗುವ ರಾಜಬೀದಿಯಲ್ಲಿ ಶ್ರೀ ಜಾರಾಂದಾಯ ಹಾಗೂ ಬಂಟ ದೈವದೇವರ ನೂತನ ಬಂಡಿ ವಾಹನೋತ್ಸವ ಜರಗಿತು. ಊರಿನ ಜನರಿಂದ ಬಂಡಿ ವಾಹನಕ್ಕೆ ಹುರುಳಿಕಾಯಿ, ತೆಂಗಿನ ಕಾಯಿ ಮತ್ತು ದೈವಕ್ಕೆ ಹಾಲು, ಸಿಂಗಾರ ಹೂ, ಸೀಯಾಳ ನೀಡುವ ಮೂಲಕ ವಿಶೇಷ ಸೇವೆ ಸಲ್ಲಿಸಿದರು. ಆನುವಂಶಿಕ ಆಡಳಿತ ಮೋಕ್ತೆಸರರಾದ ಕೆ. ನರಸಿಂಹತಂತ್ರಿ, ಕಾರ್ಯ ನಿರ್ವಹಣ ಅಧಿಕಾರಿ ಅರವಿಂದ ಸುತಗುಂಡಿ, ಆನು ವಂಶಿಕ ಮೋಕ್ತೆಸರ ಬಾಲಕೃಷ್ಣ, ಕಾರಂತ, ಜೀರ್ಣೋದ್ಧಾರ ಸಮಿತಿಯ ಉಪಾ ಧ್ಯಕ್ಷರಾದ ಮನೋಹರ ಭಟ್, ಪ್ರಭಾಕರ ಭಟ್, ಜೀರ್ಣೋದ್ಧಾರ ಸಮಿತಿಯ ಉಪಾ ಧ್ಯಕ್ಷ, ಮೋಕ್ತೆಸರರಾದ ಭಾಸ್ಕರ್.ಕೆ. ಸುಜನ್‌ದಾಸ್ ಕುಡುಪು, ಉದಯ ಕುಮಾರ ಕುಡುಪು, ರಾಘವೇಂದ್ರ ಭಟ್, ವಾಸುದೇವರಾವ್ ಕುಡುಪು, ರವೀಂದ್ರ ನಾಯಕ್ ಕುಡುಪು, ದಿನೇಶ್ ಪೆಜ ತ್ತಾಯ, ಜೀರ್ಣೋದ್ಧಾರ ಸಮಿತಿಯ ಕಾರ್ಯ ಧ್ಯಕ್ಷರಾದ ಕೆ. ಕೃಷ್ಣರಾಜತಂತ್ರಿ, ಅರವಿಂದ ತಂತ್ರಿ, ರವಿಪ್ರಸನ್ನ ಉಪಸ್ಥಿತರಿದ್ದರು.