Advertisement

ಕುದ್ರೋಳಿ: ಮಂಗಳೂರು ದಸರಾಕ್ಕೆ ಚಾಲನೆ

11:06 AM Sep 27, 2022 | Team Udayavani |

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ʼಮಂಗಳೂರು ದಸರಾ’ ಮಹೋತ್ಸವಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.

Advertisement

ಕಲಾತ್ಮಕ ಮಂಟಪಗಳಲ್ಲಿ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಪೂರ್ವದಲ್ಲಿ ಶಾರದಾ ಮಾತೆಯ ವಿಗ್ರಹದ ಕ್ಷೇತ್ರ ಪ್ರದಕ್ಷಿಣೆ ನಡೆಯಿತು. ಶ್ರೀ ಶಾರದಾ ಮಾತೆಯೊಂದಿಗೆ ನವದುರ್ಗೆಯರ ಆರಾಧನೆ ಇಲ್ಲಿನ ವೈಶಿಷ್ಟ್ಯ.

ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿಯರ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಜನಾರ್ದನ ಪೂಜಾರಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾದ ಹರೇಕಳ ಹಾಜಬ್ಬ, ಅಮೈ ಮಹಾಲಿಂಗ ನಾಯ್ಕ ಭಾಗವಹಿಸಿದ್ದರು.

ರಜತ ಪೀಠ, ವೀಣೆ ಅರ್ಪಣೆ

Advertisement

ಗೋಕರ್ಣನಾಥ ಸೇವಾದಳ ಹಾಗೂ ಭಕ್ತರ ಸಹಕಾರದಿಂದ 14 ಕೆಜಿ ತೂಕದ 13 ಲಕ್ಷ ರೂ. ವೆಚ್ಚದಲ್ಲಿ ತಯಾರಿಸಿದ ರಜತ ಪೀಠ ಅರ್ಪಣೆ ಹಾಗೂ ವೇದಾವತಿ ಕೇಶವ ದೇರೆಬೈಲ್‌ ಹಾಗೂ ಕುಟುಂಬಿಕರು ಬೆಳ್ಳಿಯ ವೀಣೆ ಸಮರ್ಪಿಸಿದರು.

ಗಣ್ಯರಾದ ವೇದವ್ಯಾಸ ಕಾಮತ್‌, ಯು.ಟಿ. ಖಾದರ್‌, ಉಮಾನಾಥ ಕೋಟ್ಯಾನ್‌, ಎಂ.ಬಿ. ಪಾಟೀಲ್‌, ಹರೀಶ್‌ ಕುಮಾರ್‌, ಡಾ| ಮಂಜುನಾಥ ಭಂಡಾರಿ, ಜಯಾನಂದ ಅಂಚನ್‌, ಪೂರ್ಣಿಮಾ, ರಮಾನಾಥ ರೈ, ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಜೆ.ಆರ್‌. ಲೋಬೋ, ಶಕುಂತಳಾ ಶೆಟ್ಟಿ, ಮೊಯಿದಿನ್ ಬಾವಾ, ಐವನ್‌ ಡಿ’ಸೋಜಾ, ಮಿಥುನ್‌ ರೈ, ರಾಜಶೇಖರ ಕೋಟ್ಯಾನ್‌, ಕವಿತಾ ಸನಿಲ್‌, ಎಚ್‌. ಎಸ್‌. ಸಾಯಿರಾಂ, ಉರ್ಮಿಳಾ ರಮೇಶ್‌ ಕುಮಾರ್‌, ಮಾಧವ ಸುವರ್ಣ, ಪದ್ಮರಾಜ್‌ ಆರ್‌., ಶೇಖರ್‌ ಪೂಜಾರಿ, ರವಿಶಂಕರ ಮಿಜಾರು, ಜಗದೀಪ್‌ ಡಿ. ಸುವರ್ಣ, ಕೆ. ಮಹೇಶ್ಚಂದ್ರ, ದೇವೇಂದ್ರ ಪೂಜಾರಿ, ಡಾ| ಅನಸೂಯ ಬಿ.ಟಿ. ಸಾಲ್ಯಾನ್‌, ಡಾ| ಬಿ.ಜಿ. ಸುವರ್ಣ, ವೇದಕುಮಾರ್‌, ಹರಿಕೃಷ್ಣ ಬಂಟ್ವಾಳ, ರಾಧಾಕೃಷ್ಣ, ಶೈಲೇಂದ್ರ ಸುವರ್ಣ, ಲೀಲಾಕ್ಷ ಕರ್ಕೇರಾ, ಚಂದನ್‌ದಾಸ್‌, ಗೌರವಿ, ಕಿಶೋರ್‌ ದಂಡೆಕೇರಿ ಉಪಸ್ಥಿತರಿದ್ದರು. ‌

ದಸರಾ ಎಂದೆಂದಿಗೂ ಅದ್ದೂರಿ: ಪೂಜಾರಿ

ಉತ್ಸವಕ್ಕೆ ಚಾಲನೆ ನೀಡಿದ ಅನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಜನಾರ್ದನ ಪೂಜಾರಿ ಅವರು, ‘ಮಂಗಳೂರು ದಸರಾ ಅತ್ಯಂತ ಭಕ್ತಿ ಸಂಭ್ರಮದಿಂದ ನಡೆಯುವುದನ್ನು ಕಂಡಾಗ ಸಂತೋಷವಾಗುತ್ತದೆ. ಮುಂದಿನ ವರ್ಷ ನಾನಿರುವೆನೋ ಗೊತ್ತಿಲ್ಲ. ಆದರೆ ದಸರಾ ಮಹೋತ್ಸವ ಎಂದೆಂದಿಗೂ ಹೀಗೆ ಅದ್ದೂರಿಯಾಗಿ ನಡೆಯಲಿದೆ. ಯಾವುದೇ ಸಮಸ್ಯೆ ಎದುರಾಗದು. ಎಲ್ಲವೂ ದೇವರ ಕೃಪೆಯಿಂದ ಅತ್ಯಂತ ಯಶಸ್ವಿಯಾಗಿ ನಡೆಯಲಿದೆ’ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next