Advertisement

Kudremukh,ನೇತ್ರಾವತಿ ಪೀಕ್‌ ಚಾರಣ: ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಜಾರಿ

12:21 AM Jun 20, 2024 | Team Udayavani |

ಮಂಗಳೂರು: ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದ ಕುದುರೆಮುಖ ಮತ್ತು ನೇತ್ರಾವತಿ ಪೀಕ್‌ ಚಾರಣಕ್ಕೆ ಅತಿಹೆಚ್ಚಿನ ಚಾರಣಿ ಗರ ಒತ್ತಡ ಇರುವುದರಿಂದ ಚಾರಣಿಗರ ಸಂಖ್ಯೆಯನ್ನು ವೈಜ್ಞಾನಿಕ ವಾಗಿ ನಿರ್ಧರಿಸಲಾಗಿದ್ದು ಗರಿಷ್ಠ 300 ಜನರಿಗೆ ಅವಕಾಶ ನೀಡಲಾಗುತ್ತದೆ.

Advertisement

ಚಾರಣ ಕೈಗೊಳ್ಳಲು //www.kudremukhanationalpark.in ಮುಖಾಂತರ ಬುಕ್ಕಿಂಗ್‌ ಮಾಡಬೇಕು. ಒಬ್ಬ ವ್ಯಕ್ತಿಯು ಗರಿಷ್ಠ ಮೂರು ಜನರಿಗೆ ಬುಕ್ಕಿಂಗ್‌ ಮಾಡಬಹುದು. ಎಲ್ಲ ಚಾರಣಿಗರು ಆನ್‌ಲೈನ್‌ ಮೂಲಕ ಮಾತ್ರ ಬುಕ್ಕಿಂಗ್‌ ಮಾಡಬೇಕು, ಯಾವುದೇ ಆಫ್‌ಲೈನ್‌ ಬುಕ್ಕಿಂಗ್‌ ಅವಕಾಶ ಇರುವುದಿಲ್ಲ.

ವಾರಾಂತ್ಯದಲ್ಲಿ ಶನಿವಾರ ಮತ್ತು ರವಿವಾರ 200 ಜನರಿಗೆ ಅವಕಾಶ ನೀಡಲಾಗುತ್ತದೆ.

ವಾರಾಂತ್ಯಕ್ಕೆ ಸ್ಥಳೀಯ ಗ್ರಾಮಸ್ಥರಿಗೆ ಅವಕಾಶ ಲಭಿಸದ ಕಾರಣ ವಿಶೇಷವಾಗಿ ಅವಕಾಶ ನೀಡಲು 50 ಸ್ಥಳೀಯ ಗ್ರಾಮಸ್ಥರಿಗೆ ಪ್ರತ್ಯೇಕ ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆ ರೂಪಿಸಲಾಗಿದೆ. ಕುದುರೆಮುಖ ಮತ್ತು ಬೆಳ್ತಂಗಡಿ ವಲಯ ಅರಣ್ಯ ಅ ಧಿಕಾರಿ ವನ್ಯಜೀವಿ ವಲಯ ಸಂಪರ್ಕಿಸಿ ಬುಕ್ಕಿಂಗ್‌ ಲಾಗಿನ್‌ ಐಡಿ ಪಡೆದು ನೋಂದಾಯಿಸಿಕೊಳ್ಳಬಹುದು.

50 ಪ್ರವಾಸಿಗರಿಗೆ ತತ್ಕಾಲ್‌ ರೂಪದಲ್ಲಿ ವಾರಂತ್ಯಕ್ಕೆ ಮಾತ್ರ
ಬುಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ.ತತ್ಕಾಲ್‌ ಬುಕ್ಕಿಂಗ್‌ ವ್ಯವಸ್ಥೆಯನ್ನು ತಂತ್ರಾಂಶದಲ್ಲಿ ರೂಪಿಸಲಾಗಿದ್ದು ಕೊನೆ ಕ್ಷಣದಲ್ಲಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಕುರಿತು ಪ್ರತಿ ಗುರುವಾರ ಮಧ್ಯಾಹ್ನ ಆನ್‌ಲೈನ್‌ನಲ್ಲಿ ಅವಕಾಶ ನೀಡಲಾಗಿದೆ.

Advertisement

ಉಳಿದ ದಿನಗಳಿಗೆ 300 ಜನರಿಗೆ ಬುಕ್ಕಿಂಗ್‌ ಅವಕಾಶ ನೀಡಲಾಗಿದೆ. ಚಾರಣ ಕುರಿತು ಪ್ರತಿ ತಿಂಗಳ 25ನೇ ತಾರೀಕಿನಂದು ಮುಂದಿನ 30 ದಿನಗಳಿಗೆ ಆನ್‌ಲೈನ್‌ ತಂತ್ರಾಂಶದಲ್ಲಿ ಬುಕ್ಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ.
ಜೂ. 25ರಿಂದ ಈ ವ್ಯವಸ್ಥೆಯು ಜಾರಿಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next