Advertisement

ಕೂಡ್ಲಿಗಿ ಮೀಸಲು ಕ್ಷೇತ್ರ; ಹಾಗಾಗಿ ನನ್ನೂರಿಂದಲೇ ಸ್ಪರ್ಧೆ

09:55 AM Dec 07, 2017 | Harsha Rao |

ಪೊಲೀಸ್‌ ಇಲಾಖೆಯಲ್ಲಿ ಡಿವೈಎಸ್‌ಪಿಯಂಥ ಉನ್ನತ ಹುದ್ದೆಯಲ್ಲಿದ್ದ ಉಡುಪಿ ಮೂಲದ ಅನುಪಮಾ ಶೆಣೈ ಅವರು ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದು, ಕೊನೆಗೆ ಹುದ್ದೆಗೆ ರಾಜೀನಾಮೆ ನೀಡಿ ಈಗ “ಭಾರತೀಯ ಜನಶಕ್ತಿ ಕಾಂಗ್ರೆಸ್‌’ ಎಂಬ ಪಕ್ಷ ಸ್ಥಾಪನೆ ಮಾಡಿದ್ದಾರೆ. ಆ ಮೂಲಕ, ಅಧಿಕೃತ ವಾಗಿ ರಾಜಕೀಯ ಅಖಾಡಕ್ಕೆ ಇಳಿ ದಿ ದ್ದಾರೆ. ಮುಂದಿನ ರಾಜ್ಯ ವಿಧಾನಸಭೆ ಚುನಾ ವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸುವುದಕ್ಕೆ ತಯಾರಿ ನಡೆಸು ತ್ತಿದ್ದಾರೆ. ವಿಶೇಷ ಅಂದರೆ, ತಾವು ಸೇವೆ ಸಲ್ಲಿಸಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದಿಂದ ಕಣಕ್ಕಿಳಿ ಯುವುದಕ್ಕೆ ಇಷ್ಟು ದಿನ ತಯಾರಿ ನಡೆಸಿದ್ದ ಅನುಪಮಾ, ಈಗ ಸದ್ದಿಲ್ಲದೆ ಸ್ಪರ್ಧಾ ಕಣ ವನ್ನೇ ಬದಲಿಸಿದ್ದಾರೆ. ಹುಟ್ಟೂರು ಕಾಪು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಉದ್ದೇಶಿ ಸಿದ್ದು, ಮನೆ ಮನೆ ಭೇಟಿಯ ಮೂಲಕ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದಾರೆ. ತಮ್ಮ ಚುನಾ ವಣಾ ತಯಾರಿ ಬಗ್ಗೆ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅನುಪಮಾ ಮಾತನಾಡಿದ್ದಾರೆ.

Advertisement

- ಹಿಂದೆ ಕೂಡ್ಲಿಗಿಯಲ್ಲಿ ಕಣಕ್ಕಿಳಿಯುವು ದಾಗಿ ಹೇಳಿದ್ದಿರಿ. ಸದ್ದಿಲ್ಲದೆ ಕ್ಷೇತ್ರ ಬದಲಿಸಿದ್ದು ಏಕೆ?
ಕೂಡ್ಲಿಗಿಯಲ್ಲಿ ಡಿವೈಎಸ್‌ಪಿಯಾಗಿ ಕೆಲಸ ಮಾಡಿದ್ದ ಕಾರಣ ಅಲ್ಲಿನ ಜನರಿಗೆ ಚಿರ ಪರಿಚಿತೆಯಾಗಿದ್ದೆ. ಪೊಲೀಸ್‌ ಅಧಿಕಾರಿಯಾಗಿ ಅಲ್ಲಿ ನನ್ನ ಕರ್ತವ್ಯ ನಿರ್ವಹಣೆಯನ್ನು ಜನ ನೋಡಿದ್ದರೆಂಬ ಕಾರಣಕ್ಕೆ ಅಲ್ಲೇ ಸ್ಪರ್ಧೆ ಗಿಳಿ ಯುವುದಕ್ಕೆ ನಿರ್ಧರಿಸಿದ್ದೆ. ಆದರೆ, ಕೂಡ್ಲಿಗಿ ಮೀಸಲು ಕ್ಷೇತ್ರ ಎಂಬುದು ತಿಳಿದ ಬಳಿಕ ಕ್ಷೇತ್ರ ಬದಲಾವಣೆ ಮಾಡುವುದು ಅನಿ ವಾರ್ಯವಾಯಿತು. ಹೀಗಾಗಿ, ನನ್ನದೇ ಜಿಲ್ಲೆ ಕಾಪುವಿನಲ್ಲಿ ಸ್ಪರ್ಧಿಸಲು ಮುಂದಾಗಿ ದ್ದೇನೆ. ಕಾಪು ನನ್ನ ಹುಟ್ಟೂರು, ಇಲ್ಲಿನ ಜನ ರಿಗೆ ನಾನು ಪರಿಚಿತಳು. ಹೀಗಾಗಿ ಹೆಚ್ಚಿನ ಜನಬೆಂಬಲ ದೊರೆಯುವ ಆಶಾ ಭಾವ ವಿದೆ. ಎರಡು ಕಡೆ ಸ್ಪರ್ಧಿಸಲು ಅವಕಾಶ ವಿರು ವುದ ರಿಂದ ಬಳ್ಳಾರಿ ಸಿಟಿ ಅಥವಾ ಹೊಸಪೇಟೆ ನಗರ ದಿಂದಲೂ ಕಣಕ್ಕಿಳಿಯುವ ಬಗ್ಗೆ ಆಲೋಚಿಸುತ್ತಿದ್ದೇನೆ. 

- ಪಕ್ಷ ಸಂಘಟನೆ ಹೇಗೆ ನಡೆಯುತ್ತಿದೆ ? 
ಪಕ್ಷ ಸಂಘಟನೆ ಪ್ರಕ್ರಿಯೆಗಳು ಜೋರಾಗಿ ಸಾಗುತ್ತಿವೆ. ಪಕ್ಷದ ಅಧಿಕೃತ ನೋಂದಣಿಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಜನವರಿ ಅಂತ್ಯದೊಳಗೆ ಇದು ಮುಗಿಯಲಿದೆ. ಪಕ್ಷದ ಚಿಹ್ನೆಗೋಸ್ಕರ ಕಾಯಬೇಕಿದೆ. ಈ ನಡುವೆ, ರಾಜ್ಯದ ವಿವಿಧೆಡೆ ಗಳಲ್ಲಿ ಸಂಚರಿಸಿ ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಧ್ಯೇಯೋದ್ದೇಶಗಳನ್ನು ಜನಮನಕ್ಕೆ ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಮತ್ತು ಜನಪ್ರತಿನಿಧಿಗಳು ಹಾಗೂ ಸರಕಾರಿ ನೌಕರರನ್ನು ಜನರ ಕೊಂಡಿ ಯಾಗಿಸುವ ಉದ್ದೇಶದಿಂದ ಹೊಸ ಪಕ್ಷ ಸ್ಥಾಪನೆ ಮಾಡಿದ್ದೇನೆ. ಭ್ರಷ್ಟಾಚಾರ ಸಂಪೂರ್ಣ ನಿಯಂತ್ರಣ, ಅಸ್ಪ ƒಶ್ಯತೆ ತೊಡೆದು ಹಾಕುವಿಕೆ, ಮಹಿಳಾ ಪರ ನಿಲುವು ಮತ್ತು ಪರಿಸರ ಸಂರಕ್ಷಣೆ ಪಕ್ಷದ ಉದ್ದೇಶ. 

- ಮುಂದಿನ ಚುನಾವಣೆಯಲ್ಲಿ ಎಷ್ಟು ಕಡೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಿರಿ ?
ಎಲ್ಲ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆಂಬ ಉದ್ದೇಶವಿದೆ. ಆದರೆ ನೋಂದಣಿ ಪ್ರಕ್ರಿಯೆ, ಸದಸ್ಯರ ಸೇರ್ಪಡೆ ಗಮನಿಸಿ ಕ್ಷೇತ್ರಗಳ ಬಗ್ಗೆ ನಿರ್ಧರಿಸುತ್ತೇನೆ. 

- ರಾಜಕೀಯ ಪಕ್ಷಗಳಲ್ಲಿ ಹಣಬಲ, ಜಾತಿಗೆ ಮಣೆ; ಅಭ್ಯರ್ಥಿಗಳ ಆಯ್ಕೆಗೆ ನಿಮ್ಮ ಮಾನದಂಡ ಏನು ?
ನಿಜ ಹೇಳಬೇಕೆಂದರೆ ನನ್ನ ಪಕ್ಷದತ್ತ ಬರುತ್ತಿರುವವರಲ್ಲಿ ಹೆಚ್ಚಿನವರು ಯುವ ಜನಾಂಗದವರು. ಪಕ್ಷಕ್ಕೆ 16 ಅಂಶಗಳ ಮಾನದಂಡ ರೂಪಿಸಿದ್ದು, ರಾಜಕೀಯ ಆಸಕ್ತಿಯ ಜತೆಗೆ ಜನಸೇವೆ ಮಾಡುವ ಇಚ್ಛಾಶಕ್ತಿ ಇರು ವವ ರಿಗೆ ಆದ್ಯತೆ ನೀಡಲಾಗುವುದು. ಸ್ಪರ್ಧಾಕಾಂಕ್ಷೆ ಇರುವ ಯಾರೇ ಆದರೂ, ಪ್ರತಿ ಬೂತ್‌ ಮಟ್ಟದಲ್ಲಿ ಕನಿಷ್ಠ 1,000 ಮಂದಿ ಪಕ್ಷದ ಕಾರ್ಯ ಕರ್ತ ರನ್ನು ಸೃಷ್ಟಿಸುವ  ಸಾಮರ್ಥ್ಯ ಹೊಂದಿರ ಬೇಕು. ಸಂಘಟನಾ ಚಾತುರ್ಯ, ಫಂಡ್‌ ರೈಸಿಂಗ್‌ ತಾಕತ್ತು ಇದ್ದರೆ ಮತ್ತು ಪಕ್ಷದ ಧ್ಯೇಯೋ ದ್ದೇಶ ಗಳಿಗೆ ಒಪ್ಪಿ ನಡೆಯುವವರಾಗಿದ್ದರೆ, ಅಂಥವ ರನ್ನು ಸಮಗ್ರವಾಗಿ ಅವಲೋಕಿಸಿ ಕಣಕ್ಕಿಳಿಸ ಲಾಗುವುದು. ಅವರು ತಾವು ಪ್ರತಿ ನಿಧಿ ಸುವ ಕ್ಷೇತ್ರದಲ್ಲಿ ಆಗಬೇಕಾದ ಎಲ್ಲ ಬದ ಲಾವಣೆಗೆ ಸಂಬಂಧಿಸಿದ ಪ್ರಣಾಳಿಕೆ ಸಿದ್ಧಪಡಿಸಿ ಕೊಡಬೇಕು. ಪ್ರತಿ ಅಭ್ಯರ್ಥಿ ಕನಿಷ್ಠ 100 ವಾಟ್ಸಾಪ್‌ ಗ್ರೂಪ್‌ಗ್ಳನ್ನು ಹೊಂದಿದ್ದು, ಅವು ಗಳ ಪಕ್ಷದ ಎಲ್ಲ ಕೆಲಸಗಳನ್ನು ಸದಸ್ಯರಿಗೆ ತಿಳಿಸುತ್ತಿರಬೇಕು. 

Advertisement

- ನಿಮ್ಮ ಪಕ್ಷಕ್ಕೆ ಪ್ರತಿಕ್ರಿಯೆ ಹೇಗಿದೆ ?
ಉತ್ತರ ಕರ್ನಾಟಕ ಜಿಲ್ಲೆಗಳು, ಬೆಂಗಳೂರು ಮುಂತಾದೆಡೆಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಕ್ಷದ ಆಶೋತ್ತರ, ಉದ್ದೇಶಗಳನ್ನು ಒಪ್ಪಿ ಪ್ರೋತ್ಸಾಹಿಸುತ್ತಿರುವವರ ಪೈಕಿ ಬಹುತೇಕರು ಈ ಎರಡು ಭಾಗಗಳವರು. ಆದರೆ ಕರಾವಳಿ, ದಾವಣಗೆರೆ, ಮೈಸೂರು ವಲಯದಲ್ಲಿ ಜನರ ಪ್ರತಿಕ್ರಿಯೆ ಅಷ್ಟಾಗಿ ಇಲ್ಲ. ಸೋಮವಾರದಿಂದ ಹುಟ್ಟೂರಾದ ಕಾಪು ಕ್ಷೇತ್ರದಲ್ಲಿ ಮನೆ ಮನೆ ಭೇಟಿ ಆರಂಭಿಸ ಲಾಗಿದೆ. ತಿಂಗಳಲ್ಲಿ 15 ದಿನ ಸ್ವಕ್ಷೇತ್ರ ಕಾರ್ಯ ಕ್ರಮ, ಉಳಿದ 15 ದಿನ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದೇನೆ. 

- ಉಪೇಂದ್ರ ಅವರ ಪ್ರಕಾರ ಎಲ್ಲ  224 ಕ್ಷೇತ್ರಗಳ ಅಭ್ಯರ್ಥಿಗಳೂ ಮುಖ್ಯಮಂತ್ರಿಗಳಂತಿದ್ದು ಕೆಲಸ ಮಾಡಬೇಕು. ನಿಮ್ಮ ನಿಲುವೇನು? 
ಉಪೇಂದ್ರ ಅವರು ಸ್ಪರ್ಧಿಸಲೇಬೇಕೆಂಬ ಹಠದಿಂದ ಹೊರಟ ಹಾಗಿದೆ. ನಿಜ ಹೇಳಬೇಕೆಂದರೆ, ಉಪೇಂದ್ರ ಅವರು ಪಕ್ಷವನ್ನೇ ಕಟ್ಟಿಲ್ಲ. ಈ ಹಿಂದೆ ಯಾರೋ ಸ್ಥಾಪನೆ ಮಾಡಿದ ಪಕ್ಷ ಅದು. ಈ ಬಗ್ಗೆ ಆರ್‌ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯುವ ಕೆಲಸವನ್ನೂ ಮಾಡುವೆ. 

- ರಾಮಮಂದಿರ ನಿರ್ಮಾಣ, ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ಕುರಿತು ನಿಮ್ಮ ನಿಲುವೇನು?
ನಿಜ ಹೇಳಬೇಕೆಂದರೆ, ರಾಮ ಮಂದಿರ ನಿರ್ಮಾಣ ಆಗುವು ದಿಲ್ಲ. ಈಗ ಚುನಾವಣೆ ಹತ್ತಿರ ಬಂದಿರುವುದರಿಂದ ಪ್ರತೀ ಬಾರಿಯಂತೆ ಈ ಬಾರಿಯೂ ಬಿಜೆಪಿಯಿಂದ ರಾಮ ಮಂದಿರ ನಿರ್ಮಾಣದ ಧ್ವನಿ ಕೇಳುತ್ತಿದೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌, ಯಡಿಯೂರಪ್ಪನವರ ಮತಬುಟ್ಟಿ ಸೆಳೆಯುವ ಆಲೋಚನೆಯೊಂದಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ಕೈ ಹಾಕಿದೆ. ಇದೆಲ್ಲ ಚುನಾವಣಾ ಗಿಮಿಕ್‌ ಹೊರತು ಬೇರೇನೂ ಅಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು.

– ಯಡಿಯೂರಪ್ಪ, ವಿಜಯ ಸಂಕೇಶ್ವರ ರಂಥವರೇ ಪ್ರಾದೇಶಿಕ ಪಕ್ಷ ಕಟ್ಟಿ ಯಶಸ್ಸು ಕಂಡಿಲ್ಲ; ನಿಮ್ಮಿಂದ ಸಾಧ್ಯವೇ?
ಯಡಿಯೂರಪ್ಪ ಅವರು ಸ್ಥಾಪಿಸಿದ ಕೆಜೆಪಿ ಕೂಡ ಅಷ್ಟೇ. ಯಾರೋ ಸ್ಥಾಪನೆ ಮಾಡಿದ ಪಕ್ಷ  ವನ್ನು ತನ್ನದು ಎಂದು ಹೇಳಿಕೊಂಡು ಹೋದರು. ಇದೀಗ ಬಿಜೆಪಿ ಯಲ್ಲಿಯೂ ಮುಖ್ಯಮಂತ್ರಿ ಆಗು ತ್ತೇನೋ ಇಲ್ಲವೋ ಎಂಬ ಅಸ್ಥಿರತೆ ಅವರನ್ನು ಕಾಡು ತ್ತಿದೆ. ಇನ್ನು, ವಿಜಯ ಸಂಕೇಶ್ವರ ಕೂಡ ನಿಜವಾದ ರಾಜಕೀಯ ಆಸಕ್ತಿಯಿಂದ ಪಕ್ಷ ಸ್ಥಾಪನೆ ಮಾಡಿರುತ್ತಿದ್ದರೆ ಅದು ಮೂಲೆಗುಂಪಾಗುತ್ತಿರಲಿಲ್ಲ. 

- ನೀವು ಮತ್ತು ಉಪೇಂದ್ರ ಜತೆಯಾಗಿ ಪಕ್ಷ ಕಟ್ಟುವಿರಿ ಎಂಬ ಸುದ್ದಿಯಿತ್ತಲ್ಲವೇ?
ಉಪೇಂದ್ರ ಅವರು ಹೊಸ ಪಕ್ಷ ಸ್ಥಾಪನೆಯ ಬಗ್ಗೆ ಪ್ರಕ ಟಿಸಿ ದಾಗ ಅವರನ್ನು ಸಂಪರ್ಕಿಸಿದ್ದು ನಿಜ. ಈ ಬಗ್ಗೆ ಮೂರು ಬಾರಿ ಮಾತುಕತೆಯೂ ನಡೆದಿತ್ತು. ಆದರೆ ಆಗಿನ್ನೂ ಅವರು ಪಕ್ಷದ ಅಧಿಕೃತ ಹೆಸರು ಘೋಷಿಸಿರ ಲಿಲ್ಲ. ಜತೆಗೆ ನಮ್ಮ ಧ್ಯೇಯೋದ್ದೇಶಗಳು ಹೊಂದಾಣಿಕೆ ಯಾಗುತ್ತಿರಲಿಲ್ಲ. ನನಗೆ ಹೊಸ ಪಕ್ಷದ ಮೂಲಕ ಹೊಸ ನಾಯಕರನ್ನು ಸೃಷ್ಟಿಸುವ ಹಂಬಲವಿದೆ. ಅದಕ್ಕಾಗಿ ನನ್ನದೇ ಪಕ್ಷವನ್ನು ದೃಢಗೊಳಿಸುವತ್ತ ಯೋಚಿಸಿದೆ. 

- ಕರಾವಳಿ ರಾಜಕಾರಣದ ಲೆಕ್ಕಾಚಾರವೇ ಬೇರೆ; ಅದನ್ನು ಹೇಗೆ ಎದುರಿಸುವಿರಿ?
ಶಾಂತಿಗಾಗಿ ನಮ್ಮ ಪಕ್ಷ, ಧಾರ್ಮಿಕ ಕಲಹ ಜನರಿಗೆ ಬೇಕಾಗಿಲ್ಲ. ಸಾಮಾಜಿಕ ತಾಣಗಳಲ್ಲಿ ಧರ್ಮಗಳಿಗೆ ಸಂಬಂಧಪಟ್ಟ ಚರ್ಚೆ ಮಾಡಿ ಸಂಘರ್ಷಕ್ಕೆ ಕಾರಣರಾಗುತ್ತಿದ್ದಾರೆ. ಸಂಘರ್ಷಗಳನ್ನು ಸೃಷ್ಟಿ ಮಾಡುತ್ತಿರುವುದು ಬಿಜೆಪಿ; ಅದನ್ನು ಮುಂದುವರಿಸುತ್ತಿರುವವರು ಕಾಂಗ್ರೆಸ್‌. ಪೊಲೀಸರನ್ನು ಸರಿಯಾಗಿ ಕೆಲಸ ಮಾಡಲು ಬಿಟ್ಟರೆ ಇಂತಹ ಸಂಘರ್ಷಗಳು ನಡೆಯುತ್ತಲೇ ಇರಲಿಲ್ಲ. ಆದರೆ ತಮ್ಮ ಸ್ವಾರ್ಥಕ್ಕೋಸ್ಕರ ಪೊಲೀಸರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡದೆ, ಧರ್ಮ ರಾಜಕಾರಣದ ಮೂಲಕ ಜನರನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ.

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next