ಕಾಸರಗೋಡು: ಕ್ಷಿಪ್ರವಾಗಿ ಉದ್ದೇಶಿತ ಸ್ಥಳಕ್ಕೆ ತಲುಪುವುದಕ್ಕಾಗಿ ಕೆಎಸ್‌ಆರ್‌ಟಿಸಿ ಆರಂಭಿಸಿದ ಮಿಂಚಿನ ಸೂಪರ್ ಡಿಲಕ್ಸ್ ಬಸ್ ಸೇವೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ ಈ ಮೊದಲು ಪ್ರಕಟಿಸಿದಂತೆ ಗುರಿ ತಲುಪಲು ಕನಿಷ್ಠ ಸಮಯ ಬಸ್‌ಗಳಿಗೆ ಸಾಕಾಗುತ್ತಿದೆ.
ಪ್ರತಿ ವರ್ಷ ಸರ್ವೀಸ್‌ನಲ್ಲೂ ಉತ್ತಮ ಗಳಿಕೆಯನ್ನು ಲೆಕ್ಕ ಹಾಕಿದ ಬಳಿಕ ಅಗತ್ಯವಿದ್ದರೆ. ಹೆಚ್ಚಿನ ಸರ್ವೀಸ್ ಆರಂಭಿಸಲು ಕೆಎಸ್‌ಆರ್‌ಟಿಸಿ ಉದ್ದೇಶಿಸಿದೆ.
ಸ್ಪೇರ್ ಸಹಿತ 23 ಬಸ್‌ಗಳನ್ನು ಮಿಂಚಿನ ಸಂಚಾರಕ್ಕಾಗಿ ಉಪಯೋಗಿಸಲಾಗುತ್ತದೆ. ರೈಲಿನ ಪ್ರಯಾಣಿಕರನ್ನು ಆಕರ್ಷಿಸಲು, ಆದಾಯ ಹೆಚ್ಚಿಸಲು ಉದ್ದೇಶಿಸಿ ಮಿಂಚಿನ ಸರ್ವೀಸ್ ಆರಂಭಿಸಲಾಗಿದೆ. ತಿರುವನಂತಪುರ ಪಾಲಕ್ಕಾಡ್ ಅಮೃತ್ ಎಕ್ಸ್ ಪ್ರಸ್ ರೈಲಿಗೆ 8.50 ಗಂಟೆ ಬೇಕಾದ ಪ್ರಯಾಣಕ್ಕೆ ಮಿಂಚಿನ ಬಸ್ ಸೇವೆ 6.30 ಗಂಟೆಯಲ್ಲಿ ತಲುಪುತ್ತದೆ. ತಿರುವನಂತಪುರ-ಕಾಸರಗೋಡು ಬಸ್ ಮಾತ್ರವೇ ಗುರಿ ತಲುಪುವಲ್ಲಿ ಆರ್ಧ ಗಂಟೆ ತಡವಾಗಿದೆ.
ತಿರುವನಂತಪುರ-ಕಟ್ಟಪ್ಪನ ಹೊರತುಪಡಿಸಿದ ಸರ್ವೀಸ್‌ಗಳಲ್ಲೆಲ್ಲಾ ಉತ್ತಮ ಗಳಿಕೆ ಲಭಿಸಿದೆ ಎಂದು ಕೆಎಸ್‌ಆರ್‌ಟಿಸಿ ವಕ್ತಾರರು ತಿಳಿಸಿದ್ದಾರೆ. ತಿರುವನಂತಪುರ – ಕಾಸರಗೋಡು ಪ್ರಯಾಣದಲ್ಲಿ 41,000 ರೂ. ತಿರುವನಂತಪುರ-ಮಾನಂತವಾಡಿ ರೂ. 27,564, ತಿರುವನಂತಪುರ -ಬತ್ತೇರಿ ರೂ. 31,436,ತಿರುವನಂತಪುರ -ಕಣ್ಣೂರು 31,436, ತಿರುವನಂತಪುರ-ಕಟ್ಟಪ್ಪನ 10,574 ರೂ. ಗಳಿಕೆಯಾಗಿದೆ.