ಮಹಾನಗರ: ದಸರಾ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಕೈಗೊಂಡ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಯಾತ್ರಿಕರಿಂದ ಭರ್ಜರಿ ಬೆಂಬಲ ಸಿಕ್ಕಿದೆ. ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ವಿವಿಧ ಕ್ಷೇತ್ರಗಳಿಗೆ ಅ.3ರಿಂದ 12ರ ವರೆಗೆ ಆಯೋಜಿಸಿದ ಪ್ರವಾಸದಲ್ಲಿ 134 ಬಸ್‌ಗಳಲ್ಲಿ 6,010 ಮಂದಿ ಪ್ರವಾಸಿಗರು ಭಾಗವಹಿಸಿದ್ದಾರೆ. ಈ ಪೈಕಿ ಮಂಗಳೂರು ಕೊಲ್ಲೂರು ಪ್ರವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳಿದ್ದಾರೆ.
ಮಂಗಳೂರಿನಿಂದ ಒಟ್ಟು 116 ಬಸ್‌ಗಳಲ್ಲಿ 5,240 ಮಂದಿ ಹಾಗೂ ಉಡುಪಿಯಿಂದ ಹೊರಟ 9 ಬಸ್‌ಗಳಲ್ಲಿ 397 ಮಂದಿ ಪ್ರಯಾಣಿಸಿದ್ದಾರೆ. ಮಂಗಳೂರು ಕೊಲ್ಲೂರು ಪ್ರವಾಸದಲ್ಲಿ 47 ಬಸ್‌ಗಳಲ್ಲಿ 2,294 ಮಂದಿ ಭಕ್ತರು ಪ್ರಯಾಣಿಸಿದ್ದಾರೆ. ಇದು ಇತರ ಪ್ರದೇಶಗಳಿಗಿಂತ ಅತೀ ಹೆಚ್ಚು ಪ್ರವಾಸಿಗರು ತೆರಳಿದ ಕ್ಷೇತ್ರಯಾತ್ರೆ.
ಮಂಗಳೂರು-ಕೊಲ್ಲೂರು ಪ್ರವಾಸ ದಲ್ಲಿ 47 ಟ್ರಿಪ್‌ಗ್ಳೊಂದಿಗೆ 2,294 ಮಂದಿ ಪ್ರಯಾಣಿಸಿದ್ದಾರೆ. ಮಡಿಕೇರಿ ಪ್ಯಾಕೇಜ್ ಪ್ರವಾಸದಲ್ಲಿ ಒಟ್ಟು 30 ಬಸ್‌ಗಳು ತೆರಳಿದ್ದು 1,459 ಮಂದಿ ಭಾಗವಹಿಸಿದ್ದರು.
ಮುರ್ಡೇಶ್ವರ ಪ್ರವಾಸದಲ್ಲಿ 18 ಬಸ್‌ಗಳಲ್ಲಿ 857 ಮಂದಿ ಭಕ್ತರು ಭಾಗವಹಿಸಿದ್ದರು. ಮಂಗಳೂರು ಸುತ್ತಮುತ್ತಲಿನ ನವದುರ್ಗ ದರ್ಶನ ಪ್ಯಾಕೇಜ್‌ನಲ್ಲಿ 21 ಬಸ್‌ಗಳಲ್ಲಿ 630 ಮಂದಿ ಪ್ರಯಾಣಿಸಿದ್ದಾರೆ.
ಭಕ್ತರಿಗಾಗಿ 24 ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಜನರಿಂದ ಉತ್ತಮ ಬೆಂಬಲ ಸಿಕ್ಕಿದೆ. ಕೇರಳ, ಮುಂಬಯಿ, ಮೈಸೂರು, ಬೆಂಗಳೂರಿ ನಿಂದ ಭಕ್ತರು ಪ್ರಯಾಣಿಸಿದ್ದಾರೆ. ಸೂಕ್ತ ಮಾರ್ಗದರ್ಶ ನೀಡಲು ಪ್ರತ್ಯೇಕ ವ್ಯವಸ್ಥೆ, ಕೈಗೆಟಕುವ ದರದಿಂದಾಗಿ ಪ್ರಯಾಣಿಕರು ಸಂತೃಪ್ತರಾಗಿದ್ದಾರೆ.
-ರಾಜೇಶ್ ಶೆಟ್ಟಿ, ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿ