Advertisement
ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಚುನಾವಣ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಮಂಗಳೂರು ವಿಭಾಗದಿಂದ ಪ್ರತೀ ದಿನ ಸುಮಾರು 389ಕ್ಕೂ ಹೆಚ್ಚಿನ ಕೆಎಸ್ಸಾರ್ಟಿಸಿ ಬಸ್‌ಗಳು ವಿವಿಧ ಪ್ರದೇಶಗಳಿಗೆ ತೆರಳುತ್ತವೆ. ಈ ಬಾರಿ ಎ. 17, 18ರಂದು ಮಂಗಳೂರಿನ ಒಂದು ಮತ್ತು ಎರಡನೇ ಡಿಪೋದಿಂದ 138ಕ್ಕೂ ಹೆಚ್ಚಿನ ಬಸ್‌ಗಳನ್ನು ಚುನಾವಣೆಗಾಗಿ ಕಳುಹಿಸಲಾಗಿತ್ತು. ಪುತ್ತೂರು ವಿಭಾಗದಿಂದ ಸುಮಾರು 560 ಬಸ್‌ಗಳು ಸಂಚರಿಸುತ್ತಿದ್ದು, ಈ ಪೈಕಿ 263 ಬಸ್ ಸೇವೆಯಲ್ಲಿ ವ್ಯತ್ಯಯವಾಗಿತ್ತು.
Related Articles
ಮತದಾನಕ್ಕೆಂದು ಬಂದ ಮಂದಿಗೆ ಸಾಲು ರಜೆ ಇದೆ. ಎ. 17ರಂದು ಮಹಾವೀರ ಜಯಂತಿ, ಎ. 18 ಚುನಾವಣೆ, ಎ. 19 ಗುಡ್‌ಫ್ರೈಡೇ, ಎ. 21ರಂದು ರವಿವಾರ. ನಡುವಣ ಎ. 20ರ ಶನಿವಾರ ಮಾತ್ರ ಕೆಲಸದ ದಿನ. ಎ. 21ಕ್ಕೆ ಈಗಾಗಲೇ ಹೆಚ್ಚಿನ ಬಸ್ ಮುಂಗಡ ಬುಕ್ಕಿಂಗ್ ಆಗಿದೆ. ಇದೇ ಕಾರಣಕ್ಕೆ ಮಂಗಳೂರಿನಿಂದ ಮೈಸೂರು, ಬೆಂಗಳೂರು ಮತ್ತಿತರ ರೂಟ್‌ಗಳಿಗೆ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್ ನಿಯೋಜಿಸಲು ಕೆಎಸ್ಸಾರ್ಟಿಸಿ ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement