Advertisement

ಕೆಎಸ್ಸಾರ್ಟಿಸಿ ದೇಶದಲ್ಲಿಯೇ ಉತ್ತಮ

01:04 PM Apr 07, 2017 | Team Udayavani |

ಹೊನ್ನಾಳಿ: ಕೆಎಸ್‌ಆರ್‌ಟಿಸಿ ದೇಶದಲ್ಲಿಯೇ ಉತ್ತಮ ಸಾರಿಗೆ ಸಂಸ್ಥೆ ಎಂದು ಹೆಸರು ಗಳಿಸಿ ಇದುವರೆಗೂ 183 ಪ್ರಶಸ್ತಿಗಳನ್ನು ಗಳಿಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ನಿಗಮದ ಅಧ್ಯಕ್ಷ, ಬೈದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. 

Advertisement

ಕರ್ನಾಟಕ ರಾಜ್ಯ ರಸ್ತೆ ನಿಗಮದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಎಸ್‌ಡಿಪಿ ಯೋಜನೆಯಡಿ ನಿರ್ಮಾಣಗೊಂಡ ಡೀಸೆಲ್‌ ಬಂಕ್‌ ಮತ್ತು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶಗಳಿಗೆ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು.

ಸರ್ಕಾರಿ ಬಸ್‌ಗಳಲ್ಲಿ ಕೇವಲ ವಿದ್ಯಾರ್ಥಿಗಳ ಓಡಾಟವಾಗದೇ ಗ್ರಾಮಸ್ಥರು ಸಂಚರಿಸಬೇಕಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ  ಸಂಚರಿಸುವುದರಿಂದ ಹೆಚ್ಚು ಸುರಕ್ಷಿತ ಒಂದು ಬಸ್‌ ಕೆಟ್ಟು ನಿಂತರೆ ಅಥವಾ ಯಾವುದೇ ಅವಘಡವಾದರೆ ತಕ್ಷಣ ಮತ್ತೂಂದು ಬಸ್‌ ವ್ಯವಸ್ಥೆ ಮಾಡಿ ಕಳಿಸಲಾಗುವುದು ಎಂದರು. 

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ ಒಟ್ಟು 3600 ನೂತನ ಬಸ್‌ಗಳ ಬೇಡಿಕೆ ಇದ್ದು, ಟೆಂಡರ್‌ ಮೂಲಕ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ವಿಭಾಗಗಳನ್ನು ತೆರೆದು ತನ್ಮೂಲಕ ಸಾರಿಗೆ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸಲಾಗುವುದು ಎಂದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಹೊನ್ನಾಳಿ ಪಟ್ಟಣ ನಾಲ್ಕು ದಿಕ್ಕುಗಳಲ್ಲಿ ಬೆಳೆದು ಅಭಿವೃದ್ಧಿಯಾಗಿರುವ ಕಾರಣ ಮತ್ತು ತಾಲೂಕು ಆಸ್ಪತ್ರೆ, ನ್ಯಾಯಾಲಯ ಸೇರಿದಂತೆ ಇತರ ಕಚೇರಿಗಳಿಗೆ ತೆರಳಲು ಸಹಾಯಕವಾಗಲು ಪಟ್ಟಣದಲ್ಲಿ ನಗರ ಸಾರಿಗೆ ವ್ಯವಸ್ಥೆಗೆ ಈಗಾಗಲೇ ಮನವಿ ಮಾಡಿದ್ದೇನೆಂದು ಹೇಳಿದರು. 

Advertisement

ಕೆಎಸ್‌ಆರ್‌ಟಿಸಿ ಬಸ್‌ಗಳು ಖಾಸಗಿ ಬಸ್‌ ನಿಲ್ದಾಣದಳೊಗೆ ಕಡ್ಡಾಯವಾಗಿ ಹೋಗಿ ಬರಬೇಕು ಇದರಿಂದ ಪ್ರಯಾಣಿಕರಿಗೆ ಹೆಚ್ಚು ಸಹಾಯವಾಗುತ್ತದೆ. ಪಪಂ ಜನಪ್ರತಿನಿಧಿಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕಿದೆ. ಕೆಎಸ್‌ಆರಟಿಸಿ ಸಂಸ್ಥೆ ದೇಶದಲ್ಲಿಯೇ ನಂ.1 ಸಂಸ್ಥೆಯಾಗಲು ಶ್ರಮಿಸಿರುವ ಸಂಸ್ಥೆಯ ಎಲ್ಲಾ ನೌಕರ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

ಜಿಪಂ ಸದಸ್ಯ ಡಿ.ಜಿ.ವಿಶ್ವನಾಥ್‌, ತಾಪಂ ಅಧ್ಯಕ್ಷೆ ಸುಲೋಚನಮ್ಮ, ಪಪಂ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ.ಮಂಜಪ್ಪ ಮಾತನಾಡಿದರು. ತಾಪಂ ಸದಸ್ಯ ವಿಜಯಕುಮಾರ್‌, ಪಪಂ ಉಪಾಧ್ಯಕ್ಷೆ ವೀಣಾ ಸುರೇಶ್‌, ಸದಸ್ಯರಾದ ಸುರೇಶ್‌ಹೊಸಕೇರಿ, ಕುಬೇಂದ್ರಪ್ಪ, ಅಣ್ಣಪ್ಪ, ವಿಜೇಂದ್ರಪ್ಪ, ವಿಜಯಮ್ಮ, ಗ್ರಾಪಂ ಅಧ್ಯಕ್ಷೆ ಲಕ್ಷಮ್ಮ, ಉಪಾಧ್ಯಕ್ಷ ಮಾದಪ್ಪ, ವ್ಯವಸ್ಥಾಪಕ ಶ್ರೀನಿವಾಸ್‌ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next