Advertisement

KSOU ಶೀಘ್ರದಲ್ಲಿ ಮುಕ್ತ ವಿವಿಯಿಂದ ಆನ್ ಲೈನ್ ಕೋಸ್೯ : ಕುಲಪತಿ ಪ್ರೊ ಹಲ್ಸೆ

07:55 PM Jun 05, 2023 | Team Udayavani |

ಕಲಬುರಗಿ: ರಾಜ್ಯದ ಏಕೈಕ ನ್ಯಾಕ್ ಎ ಪ್ಲಸ್ ಮಾನ್ಯತೆಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮುಂದಿನ ದಿನಗಳಲ್ಲಿ ಆನ್ ಲೈನ್ ಕೋಸ್೯ ಪ್ರಾರಂಭಿಸಲು ಉದ್ದೇಶಿಸಿದೆ.‌

Advertisement

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನ್ಯಾಕ್ ಎ ಪ್ಲಸ್ ಮಾನ್ಯತೆ ಪಡೆದ ರಾಜ್ಯದ ಏಕೈಕ ವಿವಿಯಾಗಿದ್ದು, ಮುಂದಿನ ದಿನಗಳಲ್ಲಿ ಆನ್‌ಲೈನ್ ಕೋರ್ಸ್ ಪ್ರಾರಂಭಿಸುವತ್ತ ಮಹತ್ವದ ಹೆಜ್ಜೆ ಇರಿಸಿದೆ ಎಂದು ಕುಲಪತಿ ಪ್ರೊ.ಎಸ್.ವಿ. ಹಲ್ಸೆ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಘಟಕ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆನ್‌ಲೈನ್ ಕೋರ್ಸ್ ಆರಂಭಿಸುವ ನಿಟ್ಟಿನಲ್ಲಿ ಕೇಂದ್ರದ ಅನುಮತಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಆರು ತಿಂಗಳ ಹಿಂದೆ ಕುಲಪತಿಯಾದ ನಂತರ ವಿವಿಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ., ಅದರ ಭಾಗವಾಗಿ ಇಡೀ ದೇಶದಲ್ಲಿ ಸರ್ಕಾರಿ ವಿವಿಗಳಲ್ಲಿ 2ನೇ ಹಾಗೂ ನ್ಯಾಕ್ ಎ ಪ್ಲಸ್ ಮಾನ್ಯತೆ ಪಡೆದ ರಾಜ್ಯದ ಏಕೈಕ ವಿವಿಯಾಗಿ ಹೊರಹೊಮ್ಮಿದೆ. ಒಟ್ಟಾರೆ ವಿವಿಯ ಶೈಕ್ಷಣಿಕ ಸೌಲಭ್ಯ, ಗುಣಮಟ್ಟ ಮತ್ತು ಮೂಲಸೌಕರ್ಯ ಆಧಾರದ ಮೇಲೆ ನ್ಯಾಕ್ (ನ್ಯಾಷನಲ್ ಅಸೆಸ್‌ಮೆಂಟ್ ಆ್ಯಂಡ್ ಅಕ್ರಿಡೇಷನ್ ಕೌನ್ಸಿಲ್) ಎ ಪ್ಲಸ್ ಮಾನ್ಯತೆ ದೊರಕಿದೆ.‌ಇದು ಹೆಮ್ಮೆಯ ಸಂಗತಿಯಾಗಿದೆ.

ನ್ಯಾಕ್ ಮಾನ್ಯತೆಗಾಗಿ ವಿವಿ ಸಿಬ್ಬಂದಿ ಅವಧಿ ಮೀರಿ ಕಾರ್ಯನಿರ್ವಹಿಸಿದ ಪರಿಣಾಮ ಯಶಸ್ಸು ಕಾಣಲಾಗಿದೆ. ಮಹಾರಾಷ್ಟ್ರ. ವಾರಾಣಸಿ, ಜಮ್ಮು ಮತ್ತು ಕಾಶ್ಮೀರ ಸೇರಿ ಐದು ರಾಜ್ಯಗಳಿಂದ ಆಗಮಿಸಿದ ನುರಿತ ಪ್ರಾಧ್ಯಾಪಕರನ್ನು ಒಳಗೊಂಡ ನ್ಯಾಕ್ ತಂಡ ವಿವಿಧ ಮಗ್ಗಲುಗಳಲ್ಲಿ ಬೆಳವಣಿಗೆ ಅವಲೋಕಿಸಿ ಶಿಫಾರಸು ಮಾಡಿತ್ತು. ಹೀಗಾಗಿ ಮಾನ್ಯತೆ ಲಭಿಸಿದೆ ಎಂದು ಕುಲಪತಿ ಪ್ರೊ ಹಲ್ಸೆ ವಿವರಿಸಿದರು.

Advertisement

ತಾವು ಕುಲಪತಿಯಾದ ನಂತರ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. 6000ಸಾವಿರದಷ್ಟು ಇದ್ದ ಸಂಖ್ಯೆ ಈಗ 18500ಕ್ಕೆ ಹೆಚ್ಚಳವಾಗಿದೆ. ಒಟ್ಟಾರೆ ವಿವಿಯಲ್ಲಿ 63 ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಸಂಖ್ಯೆ ಒಂದು ಲಕ್ಷಕ್ಕೆ ತಲುಪಿಸುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಹೊಸ-ಹೊಸಕಾರ್ಯಗಳೊಂದಿಗೆ ದಾಪುಗಾಲು ಹಾಕಲಾಗುತ್ತಿದೆ ಎಂದರು.

ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯುತ್ತಿರುವವರಲ್ಲಿ ಉತ್ತರ ಕರ್ನಾಟಕದ ಅಭ್ಯರ್ಥಿಗಳೇ ಹೆಚ್ಚು. ನಾಲ್ಕೈದು ತಿಂಗಳಿಂದ ಉಕದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದ್ದರಿಂದ ಮತ್ತಷ್ಟು ಹೆಚ್ಚಳವಾಗಿದೆ. ಹೀಗಾಗಿ ವಿವಿಯಿಂದ ಈ ಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಗೊಂದು ಪ್ರಾದೇಶಿಕ ಕೇಂದ್ರ
ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಸಿಗಬೇಕೆಂಬ ಆಶಯದೊಂದಿಗೆ ಜಿಲ್ಲೆಗೊಂದು ಪ್ರಾದೇಶಿಕ ಕೇಂದ್ರ ಸ್ಥಾಪಿಸಲು ಯೋಜಿಸಲಾಗಿದೆ. ಪ್ರಸಕ್ತ ಗುಲ್ಬರ್ಗ ವಿವಿ ಕಟ್ಟಡವೊಂದರಲ್ಲಿ ಪ್ರಾದೇಶಿಕ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡಕ್ಕಾಗಿ ವಿವಿ ಒಂದು ಎಕರೆ ಭೂಮಿ ನೀಡಿದ್ದು, ಶೀಘ್ರದಲ್ಲಿ ನಿರ್ಮಾಣಗೊಳ್ಳಲಿದೆ. ನಂತರ ವಿವಿಯ ಸಂಪರ್ಕ ಕಾರ್ಯಕ್ರಮ ಇತರ ಕಾರ್ಯಚಟುವಟಿಕೆ ನಡೆಯಲಿವೆ ಎಂದು ಪ್ರೊ.ಹಲ್ಸೆ ಪುನರುಚ್ಚರಿಸಿದರು.

10 ಕೋ.ರೂ ವಿವಿಗೆ: ಐಟಿ ರಿಟರ್ನ್ 10 ಕೋಟಿ ರೂ.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ 27 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಐಟಿ ಇಲಾಖೆಯಿಂದ ಹತ್ತು ಕೋಟಿ ರೂ ವಿವಿಗೆ ಹಿಂತಿರುಗಿ ಬಂದಿದೆ. ರಿಫಂಡ್‌ಗಾಗಿ ಆದಾಯ ತೆರಿಗೆ ಇಲಾಖೆಗೆ ಬೇಕಾಗುವ ಎಲ್ಲ ದಾಖಲೆ ಸಿದ್ಧಪಡಿಸಿ ಸಲ್ಲಿಸಿದ ಪರಿಣಾಮ ಬೃಹತ್ ಮೊತ್ತ ಬಂದಿದೆ. ಇದೊಂದು ದೊಡ್ಡ ಸಾಧನೆ. ಇನ್ನಷ್ಟು ಹಣ ಬರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ವಿವಿ ಆಡಳಿತ ಅಗತ್ಯ ಸಿದ್ಧತೆ ನಡೆಸಿದೆ. ಈ ಹಣ ವಿವಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಲಿದೆ ಎಂದು ಪ್ರೊ.ಹಲ್ಸೆ ತಿಳಿಸಿದರು.

ಇಂದಿನ ಶೈಕ್ಷಣಿಕ ಸ್ಪರ್ಧಾತ್ಮಕತೆಗೆ ಅನುಗುಣ ಸೈಬರ್ ಕ್ರೈಂ ಎಂಸಿಎ, ಎಂಬಿಎ ಅದರಲ್ಲೂ ಐಬಿಎಂನಂತಹ ಹೊಸ ಕೋರ್ಸ್‌ಗಳನ್ನು ಕಡಿಮೆ ಶುಲ್ಕದಲ್ಲಿ ಪ್ರಾರಂಭಿಸಲಾಗುತ್ತಿದೆ. ವಿವಿಯಲ್ಲಿ ಇದೊಂದು ಕ್ರಾಂತಿ ಎಂದು ವಿಶ್ಲೇಷಿಸಲಾಗುತ್ತಿದೆ. ಭ್ರಷ್ಟಾಚಾರರಹಿತ ಆಡಳಿತಕ್ಕೂ ಒತ್ತು ನೀಡಲಾಗಿದೆ ಎಂದರು.

ವಿವಿ ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸಂಗಮೇಶ ಹಿರೇಮಠ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಉಪಾಧ್ಯಕ್ಷ ದೇವೀಂದ್ರಪ್ಪ ಆವಂಟಿ, ರಾಜ್ಯ ಸಮಿತಿ ಸದಸ್ಯ ಶಿವರಂಜನ್ ಸತ್ಯಂಪೇಟೆ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next