Advertisement

‘ಕ್ಷಿಪ್ರ’ಟ್ರೇಲರ್ ಗೆ ನಟ ಧನಂಜಯ್ ಸಾಥ್

05:21 PM Aug 04, 2022 | Team Udayavani |

ಹೊಸಬರೇ ಸೇರಿ ಮಾಡಿರುವ “ಕ್ಷಿಪ್ರ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಧನಂಜಯ್‌ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಸ್ಪೆನ್ಸ್‌ – ಥ್ರಿಲ್ಲರ್‌ ಮಹಿಳಾ ಪ್ರಧಾನ ಕತೆಯಾಗಿರುವ ಚಿತ್ರದಲ್ಲಿ ದಕ್ಷ್ ನಾಯಕ. ರಮ್ಯಪ್ರಿಯಾ ಹಾಗೂ ಪ್ರೀತಿ ಮೀರಜ್ಕರ್‌ ನಾಯಕಿಯರು.

Advertisement

ಮಕ್ಕಳಿಗೆ ಅಂತಲೇ ಹಾಡು-ನೃತ್ಯ, ಯುವಜನಾಂಗವು ಇಷ್ಟಪಡುವ ಫೈಟ್‌-ಹಾಸ್ಯ ಜೊತೆಗೊಂದು ಸಂದೇಶ ಇದೆ ಎಂಬುದು ಚಿತ್ರತಂಡದ ಮಾತು. ಸತೀಶ್‌ ಕೃಷ್ಣ ನಿರ್ದೇಶನದ ಈ ಚಿತ್ರವನ್ನು ಫ್ಯೂರ್‌ ವಿಷನ್‌ ಎಂಟರ್‌ ಟೈನ್‌ಮೆಂಟ್‌ ಹಾಗೂ ದಿನೇಶ್‌ ಕೆ ರಾಮನ್‌ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದ ಕಥೆ ಏನಿರಬಹುದು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಸಸ್ಪೆನ್ಸ್‌-ಥ್ರಿಲ್ಲರ್‌.

ಹೌದು, “ಕ್ಷಿಪ್ರ’ ಒಂದು ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾನಕವಿರುವ ಸಿನಿಮಾ. ಮುಖ್ಯವಾಗಿ ಇದು ನಾಯಕಿಪ್ರಧಾನ ಚಿತ್ರ. ಇಡೀ ಸಿನಿಮಾ ನಾಯಕಿಯ ಸುತ್ತ ಸುತ್ತಲಿದೆ. ಚಿತ್ರದಲ್ಲಿ ನಾಯಕಿಯ ಹೆಸರು “ಕ್ಷಿಪ್ರ’. ಅದನ್ನೇ ಚಿತ್ರತಂಡ ಶೀರ್ಷಿಕೆಯನ್ನಾಗಿಸಿದೆ.

ಕಥೆಯ ಬಗ್ಗೆ ಮಾತನಾಡುವ ದಕ್ಷ್, “ನಾಯಕಿಯ ಕಿಡ್ನಾಪ್‌ ಸುತ್ತ ಕಥೆ ಸಾಗುತ್ತದೆ. ಕಿಡ್ನಾಪ್‌ನೊಂದಿಗೆ ತೆರೆದುಕೊಳ್ಳುವ ಕಥೆ ಮುಂದೆ ಸಾಕಷ್ಟು ಟ್ವಿಸ್ಟ್‌ ಗಳೊಂದಿಗೆ ಸಾಗಿ ಪ್ರೇಕ್ಷಕರ ಕುತೂಹಲಕ್ಕೆ ಕಾರಣ ವಾಗುತ್ತದೆ. ಚಿತ್ರದಲ್ಲಿ ನನ್ನ ಪಾತ್ರ ಕೂಡಾ ಪ್ರಮುಖವಾಗಿದೆ. ಕಿಡ್ನಾಪ್‌ ಮಾಡಿದವರ ಬೆನ್ನಟ್ಟುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುವ ದಕ್ಷ್ ಗೆ ಸಿನಿಮಾ ಮೂಡಿಬಂದಿರುವ ರೀತಿ ಬಗ್ಗೆ ಖುಷಿ ಇದೆ. ಚಿತ್ರದಲ್ಲಿ ಹೆಣ್ಣುಮಕ್ಕಳನ್ನು ನೋಡುವ ರೀತಿ ಬದಲಾಗಬೇಕು ಎಂಬ ಸಂದೇಶವೂ ಈ ಚಿತ್ರದಲ್ಲಿದೆಯಂತೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next