Advertisement
ಮಹಾಲಕ್ಷ್ಮೀ ಲೇಔಟ್ನ ಮುನೇಶ್ವರ ಬ್ಲಾಕ್ ನಿವಾಸಿ ಅಮೃತ್ ಶಿರೂರ್ (40) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಡಿ.28ರಂದು ಸಂಜೆ ಮನೆ ಕೋಣೆಯ ಫ್ಯಾನ್ಗೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ರಾತ್ರಿ ಮನೆಯ ಮಾಲಿಕ ಗಿರೀಶ್ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
Related Articles
Advertisement
ಘಟನಾ ಸ್ಥಳದಲ್ಲಿ ಅಮೃತ್ ಶಿರೂರ್ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್ನೋಟ್ ಪತ್ತೆಯಾಗಿದ್ದು, ಪೊಲೀಸರು ಜಪ್ತಿ ಮಾಡಿದ್ದಾರೆ. ತಂದೆ-ತಾಯಿಗೆ ಒಳ್ಳೆಯ ಮಗನಾಗಲಿಲ್ಲ. ಪತ್ನಿಗೆ ಒಳ್ಳೆಯ ಗಂಡನಾಗಲಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ. ನನ್ನ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಜೀವನ ಜಿಗುಪ್ಸೆಯಾ ಗಿದೆ ಎಂದು ಬರೆದಿರುವುದು ಕಂಡು ಬಂದಿದೆ. ಇನ್ನು ಘಟನಾ ಸ್ಥಳದಲ್ಲೂ ಯಾವುದೇ ಸಂಶಯ ಕಂಡು ಬಂದಿಲ್ಲ. ವೈದ್ಯಕೀಯ ವರದಿ ಬಂದ ಬಳಿಕ ಒಂದಷ್ಟು ಮಾಹಿತಿ ಗೊತ್ತಾಗಲಿದೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
2 ಮದುವೆಯೂ ಮುರಿದು ಬಿದ್ದಿತ್ತು! :
ಮೃತ ಅಮೃತ್ ಶಿರೂರ್ ಎರಡು ಮದುವೆಯಾಗಿದ್ದರು. ಮೊದಲಿಗೆ ಪ್ರೇಮವಿವಾಹವಾಗಿದ್ದು, ಕೆಲವೇ ತಿಂಗಳಲ್ಲಿ ಪತ್ನಿ ಯಿಂದ ವಿಚ್ಛೇದನ ಪಡೆದಿದ್ದರು. 2019ರಲ್ಲಿ ಶಿಕ್ಷಕಿಯೊಬ್ಬರನ್ನು ಎರಡನೇ ಮದುವೆಯಾಗಿದ್ದು, ದಂಪತಿ ನಡುವೆ ಮನ ಸ್ತಾಪವಾಗಿ ದೂರವಾಗಿದ್ದಾರೆ. ದಂಪತಿ ವಿಚ್ಛೇದನದ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕೌಟುಂಬಿಕ ಕಾರಣಗಳಿಂದ ಮನನೊಂದಿದ್ದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಕೆಎಸ್ಡಿಎಲ್ ಅಧಿಕಾರಿ ಅಮೃತ್ ಶಿರೂರ್ ಎಂಬುವರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಸಾವಿಗೆ ಯಾರು ಕಾರಣರಲ್ಲ ಡೆತ್ನೋಟ್ನಲ್ಲಿ ಉಲ್ಲೇಖೀಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.-ಸೈದುಲ್ಲಾ , ಡಿಸಿಪಿ ಉತ್ತರ ವಿಭಾಗ