Advertisement

ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ: ಕೆ.ಎಸ್.ಈಶ್ವರಪ್ಪ

11:32 AM Sep 28, 2022 | Team Udayavani |

ಶಿವಮೊಗ್ಗ: ಭಗತ್ ಸಿಂಗ್ ಆತ್ಮಕ್ಕೆ ಶಾಂತಿ ಸಿಗುವ ನಿಟ್ಟಿನಲ್ಲಿ ಇಂದು ಪಿಎಫ್ ಐ ನಿಷೇಧವಾಗಿದೆ. ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಪಿಎಫ್ ಐ ದೇಶದ್ರೋಹಿ ಚಟುವಟಿಕೆ ನಡೆಸುತ್ತಿತ್ತು ವಿದೇಶದಿಂದ ಫಂಡಿಂಗ್ ಆಗುತ್ತಿತ್ತು. ಇವರಿಂದ ಹಿಂದೂ ಯುವಕರ ಕೊಲೆ ಆಗುತ್ತಿತ್ತು. ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ ಎಂದು ಮಾಜಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

Advertisement

ಶಿವಮೊಗ್ಗದಲ್ಲಿ‌ ಮಾತಾನಾಡಿದ ಅವರು, ನಗನಗತ್ತಾ ಪಾಕಿಸ್ತಾನ ತಗೊಂಡಿದ್ದೇವೆ, ಹೋರಾಟ ಮಾಡಿ ಭಾರತ ಪಡೆಯುತ್ತೇವೆ ಎಂಬ ಘೋಷಣೆ ಅವರದ್ದು,ಸರಿಯಾದ ಬಿಸಿಯನ್ನು ಕ್ರಾಂತಿಕಾರಿ ನಾಯಕ ಅಮಿತ್ ಶಾ ಕೊಟ್ಟಿದ್ದಾರೆ. ರಾಷ್ಟ್ರದ್ರೋಹವನ್ನು  ಅಮಿತ್ ಶಾ ಸಹಿಸಲ್ಲಇಲ್ಲಿ ರಾಜಕೀಯ ಬರಬಾರದು. ಪಿಎಫ್ ಐ ಬ್ಯಾನ್ ಮಾಡಿಸಲು ಸಿದ್ದರಾಮಯ್ಯ ಒತ್ತಾಯ ಮಾಡಿದ್ದರು. ನಿಮ್ಮದೇ ಸರ್ಕಾರ ಕೇಂದ್ರದಲ್ಲಿದೆ ಬ್ಯಾನ್ ಮಾಡಿ ಅಂತ ಅಧಿವೇಶನದಲ್ಲಿ ಹೇಳಿದ್ದರು. ರಾಜ್ಯದಲ್ಲಿ ದಾಖಲೆ ಸಂಗ್ರಹ ಮಾಡಿ ದಾಖಲೆ ಸಮೇತ ಮನವಿ ಮಾಡಿದ್ವೀವಿ. ಎಲ್ಲ ರಾಜ್ಯಗಳಿಂದ ಸಾಕ್ಷ್ಯ ಸಂಗ್ರಹಿಸಿ ಬ್ಯಾನ್ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ಸೇರಿದಂತೆ ಇತರ ಕೆಲವು ಹತ್ಯೆಗಳಿಗೂ ಪಿಎಫ್ಐ ಕಾರಣ..?

ಹರ್ಷ ಕೊಲೆ, ಪ್ರೇಮಸಿಂಗ್ ಚೂರಿ ಇರಿತ ಪ್ರಕರಣ ಶಿವಮೊಗ್ಗದಲ್ಲಿ ನಡೆದಿತ್ತು. ಪ್ರಕರಣದ ತನಿಖೆಯಲ್ಲಿ ರಾಷ್ಟ್ರದ್ರೋಹಿಗಳ ಸಂಪರ್ಕಿಸಿರುವುದು ಪತ್ತೆಯಾಗಿತ್ತು. ರಾಷ್ಟ್ರದ್ರೋಹಿಗಳಿಗೆ ಭಾರತದಲ್ಲಿ ಅವಕಾಶ ಇಲ್ಲ. ಮುಸಲ್ಮಾನ ಯಜಮಾನರಿಗೆ, ಯುವಕರಿಗೆ ಮನವಿ ಮಾಡುತ್ತೇನೆ ನೀವೆಲ್ಲಾ ರಾಷ್ಟ್ರಭಕ್ತಿಗೆ ಪ್ರೇರಣೆ ನೀಡಬೇಕು. ಶಾಂತಿ ಸಿಗಬೇಕು, ಈಗಲೂ ಕೆಲವರಲ್ಲಿ ಮನಸ್ಥಿತಿ ಇದೆ ಮುಸಲ್ಮಾನರು ಶಾಂತಿ ಬಯಸುತ್ತಾರೆ ಆದರೆ ಕೆಲವರು ಅಶಾಂತಿ ಸೃಷ್ಟಿಸುತ್ತಿದ್ದಾರೆ ಅವರ ಮನಸ್ಥಿತಿ ಬದಲಾಗದಿದ್ದರೆ ಅಶಾಂತಿ ಮುಂದುವರಿಯುತ್ತದೆ. ಸಿದ್ದರಾಮಯ್ಯ ಕಾಲದಲ್ಲಿ 22 ಹಿಂದುಗಳ ಕಗ್ಗೊಲೆಯಾಗಿತ್ತು. ಮುಸಲ್ಮಾನರನ್ನು ಕಾಂಗ್ರೆಸ್ಸಿಗರು ಬೆಳೆಸಿಕೊಂಡು ಬಂದರು. ಅದಕ್ಕೆ ಮೋದಿ ಸರ್ಕಾರ ತಡೆಯೊಡ್ಡಿದೆ ಎಂದರು.

ನಲಪಾಡ್ ಹೇಳಿಕೆ ಉಗ್ರವಾಗಿ ಖಂಡಿಸುತ್ತೇನೆ. ಉಗ್ರವಾದಕ್ಕೆ ನಿರುದ್ಯೋಗ ಸಮಸ್ಯೆ ಕಾರಣ ಎನ್ನುತ್ತಾರೆ. ಅವನಿಗೆ ಎಚ್ಚರಿಕೆ ನೀಡುತ್ತೇನೆ. ಮೈಮೇಲೆ ಜ್ಞಾನ ಇಟ್ಟು ಮಾತನಾಡಲಿ. ಬೇರೆ ಬೇರೆ ಹೆಸರು ಇಟ್ಟುಕೊಂಡು ಮತ್ತೆ ಉಗ್ರ ಚಟುವಟಿಕೆ ನಡೆಸುವ ಸಾಧ್ಯತೆ ಇದೆ. ಆದರೆ ನಮ್ಮ ಸಿಂಹ ಅಮಿತ್ ಶಾ ಇದ್ದಾರೆ ಅವರು ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next