ಶಿವಮೊಗ್ಗ: ಜನಸಾಮಾನ್ಯರ ಮನಸ್ಸಿನಲ್ಲಿರುವುದನ್ನು ನಾನು ಬಾಯಿಬಿಟ್ಟು ಹೇಳುತ್ತೇನೆ. ಅನೇಕರಿಗೆ ಅದನ್ನು ಬಾಯಿ ಬಿಟ್ಟು ಹೇಳಲಾಗುವುದಿಲ್ಲ. ಆಜಾನ್ ಕೂಗುವುದರಿಂಧ ವಿದ್ಯಾರ್ಥಿಗಳಿಗೆ ಎಷ್ಟು ತೊಂದರೆಯಾಗುತ್ತಿದೆ ಎಂದು ಅವರ ಪೋಷಕರಿಗೆ ಗೊತ್ತು. ವಿದ್ಯಾರ್ಥಿಗಳಿಗೂ ಸಹ ಗೊತ್ತು. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಎಷ್ಟು ತೊಂದರೆಯಾಗಿದೆ ಎಂದು ಅವರಿಗೆ ಗೊತ್ತು. ಇರುವುದನ್ನು ಬಹಿರಂಗವಾಗಿ ಹೇಳುನಾನು ಹಿಂದೆ ಮುಂದೆ ನೋಡುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಆಜಾನ್ ಹೇಳಿಕೆ ವಿರುದ್ಧ ಶಿವಮೊಗ್ಗದಲ್ಲಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ರೀತಿ ಪ್ರತಿಭಟನೆ ಮಾಡುವ ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಳ್ಳಲ್ಲ. ಬೇರೆಯವರಿಗೆ ತೊಂದರೆಯಾಗದಂತೆ ಸೌಂಡ್ ಇಡಲು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ರಾತ್ರಿ 10 ರಿಂದ ಬೆಳಿಗ್ಗೆ 6 ವರೆಗೆ ಸಂಪೂರ್ಣ ನಿಷೇಧವಿದೆ. ಹಾಗಿದ್ದರೂ ಕೂಡ ಇವರು ಹೀಗೆ ಮಾಡುತ್ತಾರೆ, ಪ್ರತಿಭಟನೆ ಮಾಡುತ್ತಾರೆಂದರೆ ಹೇಗೆ? ಜನ ಸಾಮಾನ್ಯರ ಭಾವನೆಗಳನ್ನು ನಾನು ಹೇಳುತ್ತೇನೆ. ಎಷ್ಟು ಪ್ರತಿಭಟನೆ ಮಾಡಿದರೂ ಎದುರಿಸುತ್ತೇನೆ ಎಂದರು.
ಮೂಡಿಗೆರೆ ಶಾಸಕರ ವಿರುದ್ಧ ಪ್ರತಿಭಟನೆ- ಅಸಮಾಧಾನ ವಿಚಾರವಾಗಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೆ ಅವಕಾಶ ಇದೆ. ಕೆಲವರಿಗೆ ಶಾಸಕ ಮಾಡಿದ ಕೆಲಸ ಸರಿ ಇಲ್ಲ ಅನ್ನಿಸಿರಬಹುದು. ಅವನು ಹೋಗಿ ಕುಳಿತು ಮಾತನಾಡಬೇಕು. ಜನರು, ಕಾರ್ಯಕರ್ತರು ಬಳಿ ಕುಳಿತು ಸಮಾಧಾನ ಮಾಡುವ ಕೆಲಸ ಮಾಡ್ಬೇಕು. ಇನ್ನೂ ಕೆಲವರು ಬೇಕು ಎಂದೇ ಪ್ರತಿಭಟನೆ ಮಾಡುತ್ತಾರೆ. ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಸೋಮಣ್ಣ ಅಸಮಾಧಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಚುನಾವಣಾ ಸಂದರ್ಭದಲ್ಲಿ ಕೆಲವರಿಗೆ ಬೇಸರ ಆಗಿರುತ್ತದೆ. ಕೇಂದ್ರ ನಾಯಕರು ಕರೆದು, ಮಾತನಾಡಿದ್ದಾರೆ ಎಂದು ಸೋಮಣ್ಣ ಹೇಳಿದ್ದಾರೆ. ಇದು ರಾಜ್ಯದ ಎಲ್ಲಾ ಕಾರ್ಯಕರ್ತರಿಗೆ ಸಮಾಧಾನ ತಂದಿದೆ ಎಂದರು.