Advertisement
ಶಿವಮೊಗ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಗಡಿ ಭಾಗದಲ್ಲಿ ನಮ್ಮ ಸೈನಿಕರನ್ನು ಚೀನಿ ಸೈನಿಕರು ಹತ್ಯೆ ಮಾಡಿದ್ದಾರೆ ಆದರೆ ಇದಕ್ಕೆ ಪ್ರತಿಯಾಗಿ ನಮ್ಮ ಸೈನಿಕರೂ ಚೀನಿ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಭಾರತ ಇನ್ನು ಮುಂದೆ ಚೀನಾದ ಉತ್ಪನ್ನಗಳನ್ನು ಖರೀದಿಸದಿರಲು ತೀರ್ಮಾನಿಸಿದ್ದರಿಂದ ಚೀನಾ ದೇಶಕ್ಕೆ ಗಾಬರಿ ಹುಟ್ಟಿಸಿರಬಹುದು. ಅಲ್ಲದೆ ಚೀನಾ ಗಡಿಯಲ್ಲಿ ಭಾರತ ಸುಸಜ್ಜಿತ ರಸ್ತೆ ನಿರ್ಮಿಸಿದ್ದರಿಂದ ಭಾರತ ಯುದ್ದಕ್ಕಾಗಿ ಈ ರಸ್ತೆ ನಿರ್ಮಿಸಿದೆ ಎಂದು ಚೀನಾ ಭಾವಿಸಿರಬಹುದು. ಭಾರತ ಯಾವತ್ತೂ ತಾನಾಗಿಯೇ ಯಾವುದೇ ದೇಶದ ಮೇಲೆ ಯುದ್ದಕ್ಕೆ ಹೋದ ಉದಾಹರಣೆ ಇಲ್ಲ. ಆದರೆ ಭಾರತದ ತಂಟೆಗೆ ಯಾರಾದರೂ ಬಂದರೆ ಭಾರತ ಸುಮ್ಮನಿರುವುದಿಲ್ಲ ಎಂಬುದು ಚೀನಾ ಹಾಗೂ ಪಾಕಿಸ್ತಾನಕ್ಕೆ ಗೊತ್ತಿದೆ.ಚೀನಾ ಈಗ ಒಬ್ಬಂಟಿಯಾಗಿದೆ ಆದರೆ ಭಾರತದೊಂದಿಗೆ ವಿಶ್ವದ ಎಲ್ಲ ದೇಶಗಳೂ ಇವೆ.