Advertisement

17ರ ಪೋರ ಹಳೆಯ ವಸ್ತುಗಳ ಸಂಗ್ರಹಕಾರ!

06:20 AM Apr 19, 2018 | |

ಕಬಕ: ಈ ಪೋರನಿಗೆ ಇನ್ನೂ ಹದಿನೇಳರ ಹರೆಯ. ಆದರೆ, ಆತನ ಸಂಗ್ರಹ ಬೆರಗು ಮೂಡಿಸುವಂಥದ್ದು, ಕಬಕದ ಕೆ.ಎಸ್‌.ಅನೀಸ್‌ಗೆ ಹಳೆಯ ವಸ್ತುಗಳು,ನಾಣ್ಯ ಹಾಗೂ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ. ಪ್ರಾಚೀನ ಕಾಲದ ಕೈ ಕೆತ್ತನೆಯ ಟಕ್ಕ ನಾಣ್ಯ ಸಹಿತ 192 ದೇಶಗಳ ನಾಣ್ಯ,ಕರೆ ನ್ಸಿ, ಲ್ಯಾಂಪ್‌, ಹಾಲು ಅಳೆಯುವ ಕುಡುತೆ,ಹುಕ್ಕಾ ಸೇದುವ ಸಾಧನ, ಗೋಲಿ ಸೋಡಾದ ಬಾಟಲ್‌, ಪುರಾತನ ಲ್ಯಾಂಡ್‌ ಫೋನ್‌ ಸೇರಿದಂತೆ ಸಾವಿರಾರು ವಸ್ತುಗಳು ಈತನ ಸಂಗ್ರ ಹದಲ್ಲಿವೆ.

Advertisement

ನಾಲ್ಕನೇ ತರಗತಿಯಲ್ಲಿದ್ದಾಗ ತನಗೆ ಸಿಕ್ಕ ಅಪೂರ್ವ ಹಾಗೂ ವಿಶಿಷ್ಟ ವಸ್ತುಗಳನ್ನು ಸಂಗ್ರಹಿಸುವ ಅಭಿರುಚಿ ಬೆಳೆಸಿಕೊಂಡ ಅನೀಸ್‌, ಸದ್ಯ 3ಲಕ್ಷ ರೂ. ಮೌಲ್ಯದ ವಸ್ತುಗಳ ಸಂಗ್ರಹ ಹೊಂದಿದ್ದಾನೆ. ಸಂಘ-ಸಂಸ್ಥೆಗಳು ಆಯೋಜಿಸುವ ಪ್ರದರ್ಶನಗಳಲ್ಲಿ ಹಲವು ಬಹುಮಾನಗಳನ್ನೂ ಗೆದ್ದಿದ್ದಾನೆ.


ಕಬಕದ ಅಬ್ಟಾಸ್‌ ಮತ್ತು ರಹ್ಮತ್‌ ದಂಪತಿಯ ಕಿರಿಯ ಪುತ್ರ ಅನೀಸ್‌ಗೆ ಮಾವ, ಕಲ್ಲಡ್ಕ ನಿವಾಸಿ ಕೆ.ಎಸ್‌. ಯಾಸೀರ್‌ ಅವರೇ ಪ್ರೇರಣೆ. ಅವರು ರಾಷ್ಟ್ರ ಮಟ್ಟದ ಪ್ರಾಚೀನ ವಸ್ತು ಸಂಗ್ರಹಕಾರರು. ಅವರ ಮನೆಗೆ ಹೋಗುತ್ತಿದ್ದಾಗೆಲ್ಲ ಈ ವಸ್ತುಗ ಳನ್ನು ಕುತೂಹಲದಿಂದ ನೋಡುತ್ತಿದ್ದ ಅನೀಸ್‌,ಮಾವನ ಹವ್ಯಾ ಸವನ್ನು ತಾನೂ ರೂಢಿಸಿಕೊಂಡ. ಯಾರಾದರೂ ಖರ್ಚಿಗೆ ಹಣ ನೀಡಿದರೆ, ಅದರಿಂದ ಅಪೂರ್ವ ವಸ್ತುಗಳನ್ನು ಕೊಂಡು ತನ್ನ ಸಂಗ್ರಹಕ್ಕೆ ಸೇರಿಸಿಕೊಳ್ಳುತ್ತಾನೆ. ಅವನ ಹವ್ಯಾಸಕ್ಕೆ ನಮ್ಮ ಕೈಲಾದ ಸಹಕಾರ ನೀಡುತ್ತೇವೆ ಎಂದು ತಾಯಿ ರಹ್ಮತ್‌ ಹೇಳುತ್ತಾರೆ.

ಕಾಡುತ್ತಿದೆ ಮಧುಮೇಹ
ಯೋಗ ಹಾಗೂ ನೈತಿಕ ಶಿಕ್ಷಣ, ಚಿತ್ರಕಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ, ಬಹುಮಾನಗಳಿಸಿದ್ದಾನೆ. ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ ಆಯೋಜಿಸಿದ್ದ ಗಿನ್ನಿಸ್‌ ದಾಖಲೆಗಾಗಿ ಯೋಗಾಸನ ಪ್ರದರ್ಶನದಲ್ಲೂ ಅನೀಸ್‌ ಪಾಲ್ಗೊಂಡಿದ್ದ. ಆಟೋಟಗಳಲ್ಲಿ ಚುರುಕಾಗಿದ್ದರೂ ಬಾಲ್ಯದಲ್ಲೇ ಕಾಡತೊಡಗಿದ ಮಧುಮೇಹ ಈತನ ಕ್ರೀಡಾ ಚಟುವಟಿಕೆಗೆ ಅಡ್ಡಿಯಾಗಿದೆ. ಕೈ ಕೊಡುವ ಆರೋಗ್ಯದಿಂದಾಗಿ ವಿದ್ಯಾಭ್ಯಾಸವನ್ನು ಪ್ರಥಮ ಪಿಯುಸಿಗೇ ಮೊಟಕುಗೊಳಿಸಿ,ಮೊಬೈಲ್‌ ಟೆಕ್ನಿಕಲ್‌ ಕೋರ್ಸ್‌ ಮಾಡುತ್ತಿದ್ದಾನೆ.


ತನ್ನ ಸಂಗ್ರಹದ ವಸ್ತುಗಳನ್ನು ಜೋಡಿಸಿಡಲು ವಿಶೇಷ ಕೊಠಡಿ ನಿರ್ಮಿಸುವ ಅಭಿಲಾಷೆ ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯುಪ್ರ ವೃತ್ತನಾಗಿದ್ದಾನೆ.

 - ಉಮ್ಮರ್‌ ಜಿ.ಕಬಕ

Advertisement

Udayavani is now on Telegram. Click here to join our channel and stay updated with the latest news.

Next