Advertisement

ಚಡಚಣದಲ್ಲಿ ಕೆ.ಆರ್.ಪಿ ಪಕ್ಷದ ರ್ಯಾಲಿ: ಪಕ್ಷ ಸೇರ್ಪಡೆ ಕಾರ್ಯಕ್ರಮ

11:41 AM Jan 31, 2023 | keerthan |

ವಿಜಯಪುರ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಘಟನೆಗಾಗಿ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭೆ ಕ್ಷೇತ್ರದ ಚಡಚಣ ಪಟ್ಟಣದಲ್ಲಿ ಫೆ.1 ರಂದು ನವ ನಾಗಠಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಪಕ್ಷದ ನಾಗಠಾಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಶ್ರೀಕಾಂತ ಬಂಡಿ, ಫೆ.1ರಂದು ಚಡಚಣ ಪಟ್ಟಣದಲ್ಲಿ ನಡೆಯುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಘಟನೆಗಾಗಿ ಸಂಜೆ ನಾಲ್ಕು ಗಂಟೆಗೆ ಬೃಹತ್ ಬೈಕ್ ರ್ಯಾಲಿ, ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಜಾಥಾ ಬಳಿಕ ಚಡಚಣ ಪಟ್ಟಣದ ಕೆಇಬಿ ಮೈದಾನದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಗುರು ವಂದನ ಹಾಗೂ ಪುನಿತ್ ನಮನ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನರೆಡ್ಡಿ ಚಾಲನೆ ನೀಡಲಿದ್ದಾರೆ ಎಂದರು.

ಇದೇ ವೇಳೆ ವಿವಿಧ ವಾಹಿನಿಗಳ ಸಂಗೀತ ಕಾರ್ಯಕ್ರಮದಲ್ಲಿ ಮಿಂಚಿದ ಯುವ ಪ್ರತಿಭಾವಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು, ಬಳಿಕ ನಾಗಠಾಣ ಕ್ಷೇತ್ರದ ಕಿರುಚಿತ್ರ ಪ್ರದರ್ಶನ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.

ಬಿಜೆಪಿ ಕಾರ್ಯಕರ್ತನಾದ ನಾನು ಪರಿಶಿಷ್ಟ ಜಾತಿಗೆ ಮೀಸಲಿರುವ ನಾಗಠಾಣ ವಿಧಾನಸಭೆ ಕ್ಷೇತ್ರದ ಟಿಕೆಕ್ ಆಕಾಂಕ್ಷಿಯಾಗಿದ್ದೆ. ಆದರೆ ಬಿಜೆಪಿ ಪಕ್ಷದ ಪ್ರಸ್ತುತ ಪೈಪೋಟಿಯಲ್ಲಿ ನನ್ನಂಥವರಿಗೆ ಅವಕಾಶ ಸಿಗುವುದಿಲ್ಲ ಎಂದರಿತ ನಾನು ಬೆಂಬಲಿಗರು, ಅಭಿಮಾನಿಗಳ ಆಶಯದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸೇರ್ಪಡೆಗೆ ನಿರ್ಧರಿಸಿದ್ದೇನೆ. ಅಲ್ಲದೇ ಜನಾರ್ದನ ರೆಡ್ಡಿ ಅವರು ಟಿಕೆಟ್ ನೀಡುವ ಭರವಸೆ ನೀಡಿದ್ದು, ಚಡಚಣ ಕಾರ್ಯಕ್ರಮದಲ್ಲಿ ನನ್ನ ಹೆಸರು ಘೋಷಿಸುವ ಭರವಸೆಯಿದೆ ಎಂದರು.

Advertisement

ಸಂತೋಷ ರಾಠೋಡ, ಅನಿಲ ಬಂಡಿವಡ್ಡರ, ಅಭಯ ರಾಠೋಡ, ರಾಮು ಅಂಕಲಗಿ, ಎಲ್.ಶ್ರೀಧರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next