ಬಾಹುಬಲಿ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್ ನಟಿ ಕೃತಿ ಸನನ್ ಅವರ ವಿವಾಹದ ಕುರಿತಾದ ಸುದ್ಧಿಗಳು ಇದೀಗ ಜೋರಾಗಿ ಹರಿದಾಡುತ್ತಿವೆ. ಆದಿಪುರುಷ ಸೆಟ್ ನಲ್ಲಿ ಪ್ರಭಾಸ್ ಅವರು ಕೃತಿಗೆ ಪ್ರೇಮ ನಿವೇದನೆ ಮಾಡಿದ್ದಾರಂತೆ, ಕೃತಿ ಕೂಡಾ ಸಮ್ಮತಿ ನೀಡಿದ್ದಾರಂತೆ, ಶೀಘ್ರವೇ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದಾರಂತೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಎಲ್ಲಾ ವದಂತಿಗಳಿಗೆ ಇದೀಗ ಸ್ವತಃ ಕೃತಿ ಸನನ್ ತೆರೆ ಎಳೆದಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ಟೋರಿ ಹಾಕಿದ್ದಾರೆ.
“ಇದು ಪ್ಯಾರ್ ಆಗಲಿ ಅಥವಾ PR ಆಗಲಿ ಅಲ್ಲ.. ನಮ್ಮ ಭೇಡಿಯಾ (ವರುಣ್ ಧವನ್) ರಿಯಾಲಿಟಿ ಶೋನಲ್ಲಿ ಸ್ವಲ್ಪ ಹೆಚ್ಚು ಕಾಡಿದರಷ್ಟೇ. ಅವರ ಹಾಸ್ಯವು ಕೆಲವು ವದಂತಿಗಳಿಗೆ ಕಾರಣವಾಯಿತು. ಕೆಲವು ಪೋರ್ಟಲ್ ನನ್ನ ಮದುವೆಯ ದಿನಾಂಕವನ್ನು ಪ್ರಕಟಿಸುವ ಮೊದಲು ನಾನು ನಿಮ್ಮ ಉತ್ಸಾಹದ ಗುಳ್ಳೆಯನ್ನು ಒಡೆಯುತ್ತೇನೆ. ಈ ವದಂತಿಗಳು ಸಂಪೂರ್ಣವಾಗಿ ಆಧಾರ ರಹಿತವಾಗಿವೆ” ಎಂದು ಕೃತಿ ಹೇಳಿದ್ದಾರೆ.
ಇದನ್ನೂ ಓದಿ:ಜಪಾನ್ ನಲ್ಲಿ ನೆಲೆಸಿದ್ದಾರಂತೆ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ
Related Articles
ಕೃತಿ ಸನನ್ ಮತ್ತು ನಟ ವರುಣ್ ಧವನ್ ಅವರು ಇತ್ತೀಚೆಗೆ ತಮ್ಮ ಭೇಡಿಯಾ ಚಿತ್ರದ ಪ್ರಚಾರಕ್ಕಾಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿ ಕರಣ್ ಜೋಹರ್ ಜತೆ ಮಾತನಾಡುತ್ತಾ ವರುಣ್, ‘ಕೃತಿ ಹೆಸರು ಒಬ್ಬರ ಹೃದಯದಲ್ಲಿದೆ. ಅವರು ಸದ್ಯ ಮುಂಬೈನಲ್ಲಿಲ್ಲ. ಅವರು ದೀಪಿಕಾ ಜೊತೆ ಶೂಟಿಂಗ್ ನಲ್ಲಿದ್ದಾರೆ’ ಎಂದು ಹೇಳಿದ್ದರು. ಇದರಿಂದ ಪ್ರಭಾಸ್- ಕೃತಿ ಲವ್ ಸ್ಟೋರಿ ಬಗ್ಗೆ ಊಹಾಪೋಹಗಳು ಆರಂಭವಾಗಿದ್ದವು.
ಆದಿ ಪುರುಷ್ ಚಿತ್ರದಲ್ಲಿ ಕೃತಿ ಸನನ್ ಅವರು ಪ್ರಭಾಸ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರವು 2023ರ ಜೂನ್ ನಲ್ಲ ತೆರೆಗೆ ಬರಲಿದೆ.