Advertisement

ಮಕ್ಕಳಿಗೆ ಕೃಷ್ಣ-ರುಕ್ಮಿಣಿಯ ಛದ್ಮವೇಷ

11:32 AM Aug 15, 2017 | |

ಬನ್ನೂರು: ಪಟ್ಟಣದ ಸಮೀಪದ ತುರಗನೂರು ಗ್ರಾಮದಲ್ಲಿನ ಎನ್‌ಸಿಆರ್‌ ಇಂಟರ್‌ ನ್ಯಾಷನಲ್‌ ವಿದ್ಯಾ ಸಂಸ್ಥೆಯಲ್ಲಿ ಕೃಷ್ಣ ಜನ್ಮಷ್ಟಮಿಯ ಅಂಗವಾಗಿ ಕೃಷ್ಣ ರುಕ್ಮಿಣಿ ವೇಷಧಾರಿಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನೂರಾರು ಮಕ್ಕಳು ಕೃಷ್ಣ-ರುಕ್ಮಿಣಿ ವೇಷಧರಿಸಿ, ಬಾಲಕೃಷ್ಣನಾಗಿ ಸಾರ್ವಜನಿಕರ ಗಮನ ಸೆಳೆದರು.

Advertisement

ಕಾರ್ಯಕ್ರಮವನ್ನು ಎನ್‌ಸಿಆರ್‌ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರಾಜೇಶ್‌ ಉದ್ಘಾಟಿಸಿ ಮಾತನಾಡಿ, ಮಕ್ಕಳು ದೇವರಿಗೆ ಸಮಾನ, ಮಕ್ಕಳು ಬಾಲ್ಯದಲ್ಲಿದ್ದಾಗ ಅವರಾಡುವ ತುಂಟಾಟ ನೋಡುವುದೇ ಆನಂದ. ನಮ್ಮ ಸಂಸ್ಥೆಯಲ್ಲಿ ಕೃಷ್ಮಾಷ್ಟಮಿಯನ್ನು ಸಂಭ್ರಮದಿಂದ ಆಯೋಜನೆ ಮಾಡಿದ್ದು, ಪೋಷಕರು ತಮ್ಮ ಮಕ್ಕಳನ್ನು ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ತಮ್ಮ ಮಕ್ಕಳಿಗೆ ಕೃಷ್ಣ-ರುಕ್ಮಿಣಿಯ ವೇಷಧರಿಸಿ ಕರೆದುಕೊಂಡು ಬಂದಿರುವುದು ಸಂತಸದ ವಿಷಯ ಎಂದರು.

ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡಬೇಕು. ನಮ್ಮ ಸಂಸ್ಕೃತಿಯನ್ನು ಗೌರವಿಸುವ ಬಗ್ಗೆ ಹೇಳಬೇಕು ಎಂದು ತಿಳಿಸಿದರು. ಉತ್ತಮ ವೇಷಧಾರಿಯಾದ ಕೃಷ್ಣ-ರುಕ್ಮಿàಣಿಯ ಛದ್ಮವೇಷಧಾರಿ ಮಕ್ಕಳಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.

ಪ್ರೇಮಕುಮಾರಿ, ಎನ್‌ಸಿಆರ್‌ ಇಂಟರ್‌ ನ್ಯಾಷನಲ್‌ ಸ್ಕೂಲಿನ ಅಧ್ಯಕ್ಷ ಟಿ.ಎನ್‌.ಚನ್ನಯ್ಯ, ಮುಖ್ಯಶಿಕ್ಷಕಿ ಭವ್ಯ, ಲತಾ, ಮಾರ್ತಮಾಗ್ಧಲಿನಾ, ಶ್ವೇತಾ ಜಾಯ್‌, ಯಮುನಾ, ದಿವ್ಯ, ಸರಸ್ವತಿ, ಶೋಭಾ, ಪುನೀತ್‌ ಕುಮಾರ್‌, ಪೂರ್ಣಿಮಾ, ಹರ್ಷಿತಾ, ಶಾಲಿನಿ, ಮಂಜುಳ, ರೂಹಿ ತಬಸ್ಸುಂ, ರೂಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next