Advertisement

ಕೃಷ್ಣ ರಾಜಸಾಗರ ಭರ್ತಿಯತ್ತ

03:50 PM Aug 14, 2021 | Team Udayavani |

ಮಂಡ್ಯ: ಜಿಲ್ಲೆಯ ಜೀವನಾಡಿ ಆಗಿರುವ ಕೆಆರ್‌ಎಸ್‌ ಜಲಾಶಯ ಸತತ ನಾಲ್ಕನೇ ವರ್ಷವೂ ಭರ್ತಿಯಾಗುವತ್ತಾ ಸಾಗಿದೆ. ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿದಿನ10 ಸಾವಿರಕ್ಕೂ ಹೆಚ್ಚುಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು,121 ಅಡಿ ನೀರು ಸಂಗ್ರಹವಾಗಿದೆ.

Advertisement

ಕಳೆದ 2018ರಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜುಲೈ 20ರಂದೇ ಜಲಾಶಯ ಭರ್ತಿಯಾಗಿತ್ತು. 2019 ಹಾಗೂ 2020ರಲ್ಲಿ ಆ.15ರಂದು ಜಲಾಶಯ ತುಂಬಿತ್ತು. ಈ ವರ್ಷವೂ ಇದೇ ಆಗಸ್ಟ್‌ನಲ್ಲಿ ತುಂಬಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸುವ ಸಾಧ್ಯತೆ ಇದೆ.

ಜೂನ್‌ನಿಂದ ಒಳಹರಿವಿನ ಪ್ರಮಾಣ: ಜೂನ್‌ನಿಂದ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೂ.14ರಂದು 82 ಅಡಿ ಇದ್ದ ಜಲಾಶಯದ ನೀರಿನ ಮಟ್ಟ ಜೂ.15ರಂದು ಒಳಹರಿವು6 ಸಾವಿರಕ್ಯೂಸೆಕ್‌ಹೆಚ್ಚಾಯಿತು. ಇದರಿಂದ ಜೂ.16ರಂದು84 ಅಡಿಗೇರಿತು. ಜೂ.18ರಂದು ಒಳಹರಿವು 16 ಸಾವಿರ ಕ್ಯೂಸೆಕ್‌ ಹೆಚ್ಚಾಗಿದ್ದರಿಂದ ಜೂ.19ರಂದು 90 ಅಡಿ ನೀರು ಸಂಗ್ರಹವಾಯಿತು. ನಂತರ
ಜೂ.24ರವರೆಗೆ ನಿರಂತರವಾಗಿ ಒಳಹರಿವು ಬಂದಿದ್ದರಿಂದ 95 ಅಡಿ ತಲುಪಿತು. ಜು.15ರವರೆಗೆ ಒಳಹರಿವು ಕಡಿಮೆಯಾಗಿದ್ದರಿಂದ ಹಾಗೂ ನದಿ, ನಾಲೆಗಳಿಗೆ ನೀರು ಹರಿಸಿದ್ದರಿಂದ ಮತ್ತೆ 88 ಅಡಿಗೆ ಕುಸಿದಿತ್ತು. ಅಂದೇ ಮತ್ತೆ ಒಳಹರಿವು 22 ಸಾವಿರ ಕ್ಯೂಸೆಕ್‌ ಹೆಚ್ಚಾಗಿದ್ದರಿಂದ 6 ದಿನದೊಳಗೆ 12 ಅಡಿ ನೀರು ಸಂಗ್ರಹವಾಗಿ 100ರ ಗಡಿ ತಲುಪಿತ್ತು.

ಇದನ್ನೂ ಓದಿ:ದಾಳಿ ಸಂಚು ವಿಫಲ; ಜಮ್ಮು-ಕಾಶ್ಮೀರದಲ್ಲಿ ನಾಲ್ವರು ಜೈಶ್ ಉಗ್ರರ ಬಂಧನ, ಸ್ಫೋಟಕ ವಶಕ್ಕೆ

ನಿರಂತರ ಏರಿಕೆ: ಜು.21ರಿಂದ ಜಲಾಶಯದ ನೀರಿನ ಮಟ್ಟ ನಿರಂತರವಾಗಿ ಏರಿಕೆ ಕಂಡಿತು. ಜು.22ರಂದು 102 ಅಡಿ, 23ರಂದು 104, 24ರಂದು 106, 25ರಂದು 108 ಅಡಿ,26ರಂದು 111, 28ರಂದು 113, 31ರಂದು 114, ಆ.1ರಂದು 115, ಆ.4ರಂದು 116, ಆ.8ರಂದು 118,9ರಂದು 120, ಆ.11ರಂದು 121 ಅಡಿ ತಲುಪಿತ್ತು. ನಂತರ ಒಳಹರಿವು ಕಡಿಮೆಯಾಗಿದ್ದರಿಂದ ಮತ್ತೆ 120 ಅಡಿಗಿಳಿದಿದೆ. ಪ್ರಸ್ತುತ ಒಳ ಹರಿವು 4ಸಾವಿರ ಇದ್ದು, ಹೊರ ಹರಿವು 5 ಸಾವಿರ ಕ್ಯೂಸೆಕ್‌ ಇದೆ.

Advertisement

ಕೆಆರ್‌ಎಸ್‌ನಲ್ಲಿ ಸಿದ್ಧತೆ
ಇದೇ ತಿಂಗಳಲ್ಲಿ ಜಲಾಶಯ ಭರ್ತಿ ಆಗುವ ಸಾಧ್ಯತೆ ಇರುವುದರಿಂದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಬಾಗಿನ ಅರ್ಪಿಸಲು ಆಗಮಿಸುವುದರಿಂದ ಕೆಆರ್‌ಎಸ್‌ನಲ್ಲಿ ಬಾಗಿನ ಅರ್ಪಣೆಗೆ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬಿಗಿ ಭದ್ರತೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿ ಡಾ.ಎಂ.ಅಶ್ವಿ‌ನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next