Advertisement

ತ್ರಿವರ್ಣಗಳಲ್ಲಿ ಝಗಮಗಿಸಲಿದೆ ಶ್ರೀಕೃಷ್ಣ ಮಠದ ಕನಕ ಗೋಪುರ

11:33 PM Aug 11, 2022 | Team Udayavani |

ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆ. 13ರಿಂದ 15ರ ವರೆಗೆ ಸಂಜೆ 6.30ರಿಂದ 10 ಗಂಟೆಯವರೆಗೆ ಶ್ರೀಕೃಷ್ಣ ಮಠದ ರಥಬೀದಿಯಲ್ಲಿರುವ ಕನಕಗೋಪುರವು ತಿರಂಗಾ ಬಣ್ಣದ ಬೆಳಕಿನೊಂದಿಗೆ ಕಂಗೊಳಿಸಲಿದೆ.

Advertisement

ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ಉಡುಪಿ ವಲಯ ಸೌತ್‌ ಕೆನರಾ ಫೋಟೋಗ್ರಾಫ‌ರ್ಸ್‌ ಅಸೋಸಿಯೇಶನ್‌, ಗಾಂಧಿ ಆಸ್ಪತ್ರೆ, ಪಂಚಮಿ ಟ್ರಸ್ಟ್‌ ಸಹಯೋಗದಲ್ಲಿ ಆ. 13ರ ಸಂಜೆ 6 ಗಂಟೆಗೆ ಪರ್ಯಾಯ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಇದಕ್ಕೆ ಚಾಲನೆ ನೀಡಲಿದ್ದಾರೆ. ನಿವೃತ್ತ ಯೋಧ ಕೃಷ್ಣ ಶೆಟ್ಟಿಬೆಟ್ಟು ಅವರಿಗೆ ಅಭಿನಂದನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next