Advertisement

ಉಡುಪಿಯಲ್ಲಿಂದು ಶ್ರೀಕೃಷ್ಣಜನ್ಮಾಷ್ಟಮಿ, ನಾಳೆ ಕೃಷ್ಣ ಲೀಲೋತ್ಸವ

10:58 PM Aug 18, 2022 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಆ. 19ರಂದು (ಇಂದು) ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ನೆರವೇರಲಿದ್ದು, ಆ. 20ರಂದು ಶ್ರೀಕೃಷ್ಣಲೀಲೋತ್ಸವ (ವಿಟ್ಲಪಿಂಡಿ) ಆಚರಣೆ ಜರಗಲಿದೆ.

Advertisement

ಶ್ರೀಕೃಷ್ಣ ಮಠದಲ್ಲಿ ದೇವರಿಗೆ ವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಮನೆಗಳಲ್ಲಿ ಶ್ರೀ ಕೃಷ್ಣಾಷ್ಟಮಿಯನ್ನು ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣ ಮಠದಲ್ಲಿ ಆ. 19 ರಂದು ಬೆಳಗ್ಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸಿ, ಮಹಾಪೂಜೆ ನೆರವೇರಿಸಲಿದ್ದಾರೆ. ಅನಂತರ ರಾತ್ರಿ ಪೂಜೆಯ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಶ್ರೀಪಾದರು ಲಡ್ಡಿಗೆ ಮುಹೂರ್ತ ಮಾಡಲಿದ್ದಾರೆ. ಶ್ರೀಗಳೂ ಸಹಿತ ಭಕ್ತರು, ಶಿಷ್ಯ ವರ್ಗ ಹಗಲು ಏಕಾದಶಿಯಂತೆ ನಿರ್ಜಲ ಉಪವಾಸವಿದ್ದು, ರಾತ್ರಿ ಕೃಷ್ಣಾಷ್ಟಮಿ ಅರ್ಘ್ಯ ಪ್ರದಾನ ನೆರವೇರಿಸುವರು. ಶನಿವಾರ ದ್ವಾದಶಿ ರೀತಿಯಲ್ಲಿ ಪ್ರಸಾದವನ್ನು ಸೇವನೆ ಮಾಡುತ್ತಾರೆ.

ಪರ್ಯಾಯ ಶ್ರೀಗಳು ರಾತ್ರಿ ಮಹಾಪೂಜೆ ನಡೆಸಿ ಮಧ್ಯರಾತ್ರಿ 12.21ಕ್ಕೆ ಅಘÂì ಪ್ರದಾನ ನೆರವೇರಿಸಲಿದ್ದಾರೆ. ಕಾಣಿಯೂರು ಶ್ರೀಪಾದರು ಶ್ರೀಕೃಷ್ಣಮಠ ದಲ್ಲಿ ಚಾತುರ್ಮಾಸ ವ್ರತ ಕೈಗೊಂಡಿದ್ದು ಅವರೂ ಅರ್ಘ್ಯ ಪ್ರದಾನ ನೆರವೇರಿಸುವರು. ಉಳಿದ ಯತಿಗಳು ಚಾತು

ರ್ಮಾಸ ವ್ರತ ಇರುವಲ್ಲಿ ಅಷ್ಟಮಿವ್ರತವನ್ನು ಆಚರಿಸುವರು. ಶ್ರೀಕೃಷ್ಣ ಮಠದಲ್ಲಿ ರಾತ್ರಿ ಕನಕನ ಕಿಂಡಿ ಎದುರು ಮತ್ತು ವಸಂತ ಮಂಟಪದಲ್ಲಿ ಅರ್ಘ್ಯವನ್ನು ಬಿಡಲು ಭಕ್ತರಿಗೆ ಅನುವು ಮಾಡಿಕೊಡಲಾಗುತ್ತದೆ. ಶ್ರೀಕೃಷ್ಣ ಮಠವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತಿದೆ. ಕೃಷ್ಣಮಠದಲ್ಲಿ ಆ. 19, 20ರಂದು ಬೆಳಗ್ಗೆಯಿಂದ ರಾತ್ರಿ ವರೆಗೆ ದೇವರ ದರ್ಶನ ಎಂದಿನಂತೆ ಇರಲಿದೆ.

ಆ. 19ರಂದು ಜನ್ಮಾಷ್ಟಮಿ ಪ್ರಯುಕ್ತ ದಿನಪೂರ್ತಿ ಮುದ್ದುಕೃಷ್ಣ ವೇಷ ಸ್ಪರ್ಧೆ, ಸ್ಯಾಕೊÕàಫೋನ್‌ ವಾದನ, ಭಜನೆ ಮುಂತಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Advertisement

ಕೃಷ್ಣಲೀಲೋತ್ಸವ (ಆ.20):  

ಆ.  20 ರಂದು ರಥಬೀದಿಯಲ್ಲಿ ಶ್ರೀಕೃಷ್ಣಲೀಲೋತ್ಸವ (ವಿಟ್ಲಪಿಂಡಿ) ಉತ್ಸವ ಸಂಭ್ರಮದಿಂದ ನಡೆಯಲಿದೆ. ಬೆಳಗ್ಗೆ 10.30ರಿಂದಲೇ ಅನ್ನ ಸಂತರ್ಪಣೆ ಆರಂಭಗೊಳ್ಳಲಿದ್ದು, ಸಾವಿರಾರು ಭಕ್ತರಿಗೆ ಕೃಷ್ಣ ಪ್ರಸಾದ ವಿತರಣೆಗೆ ತಯಾರಿ ನಡೆದಿದೆ. ಮಧ್ಯಾಹ್ನ 3ಕ್ಕೆ ರಥಬೀದಿಯಲ್ಲಿ ಸ್ವರ್ಣರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಮತ್ತು ಅನಂತೇಶ್ವರ ಚಂದ್ರಮೌಳೀಶ್ವರ ವಿಗ್ರಹಗಳನ್ನು ನವರತ್ನ ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಗುತ್ತದೆ. ಮೆರವಣಿಗೆ ಸಂದರ್ಭ ರಥಬೀದಿ ಸುತ್ತಲೂ ಅಳವಡಿಸಿರುವ 13 ತ್ರಿಕೋನಾಕೃತಿಯ ಗುರ್ಜಿಗಳಿಗೆ ನೇತು ಹಾಕಿರುವ ಮೊಸರು ಕುಡಿಕೆಯನ್ನು ಕೃಷ್ಣಮಠದ ಗೋವಳರು ಒಡೆಯುತ್ತಾರೆ. ಪರ್ಯಾಯ ಶ್ರೀಪಾದರು ಚಕ್ಕುಲಿ ಉಂಡೆ ಪ್ರಸಾದವನ್ನು ರಥದ ಮೆರವಣಿಗೆ ವೇಳೆ ಭಕ್ತರಿಗೆ ವಿತರಿಸುತ್ತಾರೆ. ಅನಂತರ ಮೃಣ್ಮಯ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಮಧ್ವ ಸರೋವರದಲ್ಲಿ ಜಲಸ್ತಂಭನ ಮಾಡಲಾಗುತ್ತದೆ.

 ದ.ಕ.: ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ :

ಮಂಗಳೂರು: ದಕ್ಷಿಣ ಕನ್ನಡ  ಮತ್ತು ನೆರೆಯ ಕಾಸರಗೋಡು ಜಿಲ್ಲೆ ಯಲ್ಲಿ ಗುರುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಯನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಬಹುತೇಕ ಮನೆಗಳಲ್ಲಿ ಶ್ರೀಕೃಷ್ಣನಿಗೆ ಹೂವಿನ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿ ಜನ್ಮಾಷ್ಟಮಿ ಆಚರಿಸಲಾಯಿತು. ಕೆಲವೆಡೆ ಕಂದಮ್ಮಗಳಿಗೆ ಬಾಲಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದರು.

ಜಿಲ್ಲಾಡಳಿತ, ಜಿ.ಪಂ. ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಂಪನಕಟ್ಟೆಯ ಲ್ಲಿರುವ ಸರಕಾರಿ ನೌಕರರ ಸಂಘದ ನಂದಿನಿ ಸಭಾ ಭವನದಲ್ಲಿ ಆ. 19ರಂದು ಬೆಳಗ್ಗೆ 10.30ಕ್ಕೆ ಶ್ರೀಕೃಷ್ಣ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿದೆ. ದ.ಕ. ಜಿಲ್ಲೆಯ ಹಲವು ಕಡೆಗಳಲ್ಲಿ ಆ. 19ರಂದು ಮೊಸರು ಕುಡಿಕೆ ಉತ್ಸವ ನಡೆಯಲಿದೆ.

ಶ್ರೀ ಕೃಷ್ಣಾಷ್ಟಮಿ ಸಂದೇಶ: ಭಗವತ್‌ ಪ್ರೀತಿಗಾಗಿ ಕರ್ತವ್ಯ :

ಕರ್ಮಣ್ಯೇವಾಧಿಕಾರಸ್ತೇ… ಮನುಷ್ಯನಾದವ ಫ‌ಲಾಪೇಕ್ಷೆಯನ್ನು ಇಟ್ಟುಕೊಳ್ಳದೆ ಕರ್ಮವನ್ನು ಮಾಡಬೇಕು. ಆ ಕರ್ಮವು ಕೃಷ್ಣಪ್ರೀತಿಯ ಉದ್ದೇಶವನ್ನು ಹೊಂದಿರಬೇಕು. ಆಗ ಮಾತ್ರ ಅದು ಬಂಧಕರೂಪವನ್ನು ತಾಳುವುದಿಲ್ಲ. ಫ‌ಲಾಪೇಕ್ಷೆಯ ಆಗ್ರಹ ಮತ್ತು ಅದರ ಅಭಿಮಾನ ಸೇರಿದರೆ ವಿಷ್ಣು ಪ್ರೀತಿ ಎನ್ನುವುದು ಮರೀಚಿಕೆಯಾಗುತ್ತದೆ. ಆದುದರಿಂದ ಕರ್ತೃತ್ವಾದಿ ಅಭಿಮಾನ ತ್ಯಾಗಪೂರ್ವಕ ಕರ್ಮವನ್ನು ಮಾಡಬೇಕು. ಈ ಕರ್ಮವು ವಿಷ್ಣುಪೂಜಾತ್ವೇನ ಸತ್ಕರ್ಮವಾಗಿ ವಿಷ್ಣುಪ್ರೀತಿ ಸಂಪಾದಿಸುವಲ್ಲಿ ಕಾರಣವಾಗುತ್ತದೆ. ಫ‌ಲಾಫ‌ಲಗಳು ದೈವಾಧೀನ. ಕರ್ಮ ಮಾಡುವಲ್ಲಿ ಮಾತ್ರ ಮನುಷ್ಯನಿಗೆ ಅವಕಾಶ ಉಂಟು. ಅಂತಹ ಸದವಕಾಶವನ್ನು ಭಗವಂತನ ಪ್ರೀತಿಗಾಗಿ ಯಥೋಚಿತ ಉಪಯೋಗಿಸಿ ಎಲ್ಲರೂ ಶ್ರೀಕೃಷ್ಣಾನುಗ್ರಹಕ್ಕೆ  ಭಾಜನರಾಗಬೇಕು. – ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪರ್ಯಾಯ  ಶ್ರೀಕೃಷ್ಣಾಪುರ ಮಠ,  ಶ್ರೀಕೃಷ್ಣಮಠ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next