Advertisement
ಉಕ್ರೇನ್-ರಷ್ಯಾ ಯುದ್ಧದಿಂದ ಭಾರತಕ್ಕೆ ವಿದೇಶಗಳಿಂದ ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಹೀಗಾಗಿ ಸ್ವಾವಲಂಬನೆ ಸಾಧಿಸಲು ಹೊಸ ಮಾದರಿಯ ಸೂರ್ಯಕಾಂತಿ ಬೆಳೆಗೆ ಕರ್ನಾಟಕದಲ್ಲಿ ಹೆಚ್ಚಿನ ಬೇಡಿಕೆವ್ಯಕ್ತವಾಗಿದೆ. “ಕೆಬಿಎಸ್‌ಎಚ್-90 ಸಂಕರಣ ಸೂರ್ಯಕಾಂತಿ’ಯು ಅಲ್ಪಾವದಿ ತಳಿಯಾಗಿದ್ದು, 80 ದಿನಗಳಲ್ಲಿ ಕಟಾವಿಗೆ ಬರಲಿದೆ. ಒಂದು ಹೆಕ್ಟೇರ್‌ಗೆ ನೀರಾವರಿಪ್ರದೇಶದಲ್ಲಿ 24 ಕ್ವಿಂಟಾಲ್, ಮಳೆ ಆಶ್ರಿತ ಪ್ರದೇಶದಲ್ಲಿ 12 ಕ್ವಿಂಟಾಲ್ ಇಳುವರಿ ಬರುತ್ತದೆ. ಶೇ.40ರಷ್ಟು ಎಣ್ಣೆಯ ಅಂಶ ಹೊಂದಿರುತ್ತದೆ. ವರ್ಷಪೂರ್ತಿ ಎಲ್ಲ ವಾತಾವರಣಗಳಲ್ಲೂ ಈ ಬೆಳೆ ಬೆಳೆಯಬಹುದಾಗಿದೆ.
Related Articles
Advertisement
ಹೀಗಾಗಿ ಒಂದು ವರ್ಷ ಒಂದು ಪ್ರದೇಶದಲ್ಲಿ ಬೆಳೆದರೆ ಮತ್ತೂಂದು ವರ್ಷ ಅದರ ಪಕ್ಕದ ಜಾಗದಲ್ಲಿ ಬೆಳೆಯಬೇಕು. ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಪ್ರಕಾರ 1 ಕ್ವಿಂಟಾಲ್‌ಗೆ ಮಾರುಕಟ್ಟೆಯಲ್ಲಿ 6,700 ರೂ. ಇದೆ.
ಕೆಬಿಎಸ್‌ಎಚ್-90 ವಿಶೇಷತೆ ಏನು ?: ಸಾಮಾನ್ಯ ಸೂರ್ಯಕಾಂತಿ ಬೆಳೆಗಳಲ್ಲಿ ಇತ್ತೀಚೆಗೆ ವಿವಿಧ ರೋಗಗಳು ಬಾಧಿಸಿ ಇಳುವರಿ ಕಡಿಮೆಯಾಗುತ್ತದೆ. ಆದರೆ, ಕೆಬಿಎಸ್‌ಎಚ್ -90 ತಳಿ ರೋಗ ರುಜಿನ ತಡೆದುಕೊಳ್ಳುವ ಶಕ್ತಿ ಹೆಚ್ಚಿರುತ್ತದೆ. ಇದು ಉತ್ತಮ ಸಂಕರಣ ತಳಿಯಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಸೂರ್ಯಕಾಂತಿಗಿಂತ ಇದರಲ್ಲಿ ಕಾಳು ಕಟ್ಟುವಿಕೆ ಹೆಚ್ಚಾಗಿ ಇಳುವರಿಗೆ ಸಹಕಾರಿಯಾಗಿದೆ. ಜೊತೆಗೆ ಎಣ್ಣೆಯ ಅಂಶ ಹೆಚ್ಚಿರುತ್ತದೆ. ಸೂರ್ಯಕಾಂತಿಗೆ ಹೆಚ್ಚಾಗಿ ಬಾಧಿಸುವ ಕೇದಿಗೆರೋಗ ಕೆಬಿಎಸ್ ಎಚ್-90ಗೆ ತಗುಲುವುದಿಲ್ಲ. ಹೀಗಾಗಿ ಇವುಗಳಿಗೆ ಔಷಧಿ ಸಿಂಪಡಿಸುವ ಅಗತ್ಯವಿಲ್ಲ
ಸೂರ್ಯಕಾಂತಿ ಗಿಡಗಳ ನಡುವೆ ಜೇನು ಕೃಷಿ: ಕೆಬಿಎಸ್‌ಎಚ್-90 ತಳಿಯ ಸೂರ್ಯಕಾಂತಿ ಗಿಡಗಳ ಮಧ್ಯೆ ಜೇನು ಕೃಷಿ ಮೂಲಕ ರೈತರು ಇನ್ನಷ್ಟು ಲಾಭಗಳಿಸಬಹುದು. ಜೇನು ನೊಣಗಳ ಪರಾಗಸ್ಪರ್ಶಕ್ಕಾದರೆ ಒಂದು ಎಕರೆಗೆ 4 ಜೇನು ಪೆಟ್ಟಿಗೆ ಇಡಬಹುದು. ಜೇನುತುಪ್ಪ ಸಂಗ್ರಹಕ್ಕಾದರೆ 10 ಅಡಿ ಅಂತರದಲ್ಲಿ ಒಂದೊಂದು ಜೇನು ಪೆಟ್ಟಿಗೆ ಇಡಬಹುದು. ಒಂದು ಜೇನುಪೆಟ್ಟಿಯಿಂದ 10 ಕೆಜಿ ಜೇನು ಸಂಗ್ರಹಿಸಬಹುದು ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜೇನು ಕೃಷಿ ತಜ್ಞ ನಿತಿನ್.
ಕಳೆದ 6 ವರ್ಷಗಳ ಸತತ ಸಂಶೋಧನೆ ನಡೆಸಿ ಕೆಬಿಎಸ್‌ಎಚ್-90 ಸಂಕರಣ ಸೂರ್ಯಕಾಂತಿ ತಳಿ ಪತ್ತೆ ಹಚ್ಚಿ ಅಭಿವೃದ್ಧಿಪಡಿಸಿದ್ದೇವೆ. 2024ರ ಆರಂಭದಲ್ಲಿ ಇದರ ಬೀಜ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಸಾಮಾನ್ಯ ಸೂರ್ಯಕಾಂತಿಗೆ ಹೋಲಿಸಿದರೆ ಈ ತಳಿಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ತೆಗೆಯಬಹುದು.–ಡಾ.ಎಸ್.ಡಿ.ನೆಹರು, ಹಿರಿಯ ವಿಜ್ಞಾನಿ, ಸೂರ್ಯಕಾಂತಿ ಪ್ರಾಯೋಜನೆ ವಿಭಾಗ, ಜಿಕೆ-ವಿಕೆ
–ಅವಿನಾಶ ಮೂಡಂಬಿಕಾನ