Advertisement

ಬಾಗಲಕೋಟೆಯಲ್ಲಿ ಕೃಷ್ಣಾ ಅಬ್ಬರ

12:34 PM Aug 23, 2020 | Suhan S |

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಮುಂದುವರಿದಿದೆ. ಜಮಖಂಡಿ ತಾಲೂಕಿನ ಮುತ್ತೂರ ನಡುಗಡ್ಡೆ ಜನವಸತಿ ಪ್ರದೇಶ ಜಲಾವೃತಗೊಂಡಿದೆ.

Advertisement

ಜಿಲ್ಲೆಯ ಮಲಪ್ರಭಾ ಹಾಗೂ ಘಟಪ್ರಭಾ ನದಿ ಪಾತ್ರದಲ್ಲಿ ಪ್ರವಾಹ ಸಂಪೂರ್ಣ ಇಳಿಮುಖವಾಗಿ ಜನ ನಿರಾಳರಾಗಿದ್ದಾರೆ. ಕೃಷ್ಣಾ ನದಿಗೆ ಶುಕ್ರವಾರ ಸಂಜೆ ಹಿಪ್ಪರಗಿ ಜಲಾಶಯಕ್ಕೆ 2.26 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನು ಘಟಪ್ರಭಾ ನದಿಗೆ ಹಿಡಕಲ್‌ ಡ್ಯಾಂನಿಂದ 8610 ಕ್ಯೂಸೆಕ್‌, ಹಿರಣ್ಯಕೇಶಿಯಿಂದ 3810, ಮಾರ್ಕಂಡೇಯದಿಂದ 2 ಸಾವಿರ ಹಾಗೂ ಬಳ್ಳಾರಿ ನಾಲಾದಿಂದ 2248 ಕ್ಯೂಸೆಕ್‌ ಸೇರಿ ಒಟ್ಟು 16,668 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ಘಟಪ್ರಭಾ ನದಿಗೆ ಹರಿದು ಬರುವ ನೀರು, ಬೀಳಗಿ ತಾಲೂಕಿನ ಚಿಕ್ಕಸಂಗಮ ಬಳಿ ಕೃಷ್ಣಾ ನದಿ ಸೇರುತ್ತಿದ್ದು, ಆಲಮಟ್ಟಿ ಡ್ಯಾಂಗೆ ಶುಕ್ರವಾರ ಸಂಜೆ 2,94,212 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಆಲಮಟ್ಟಿ ಡ್ಯಾಂ 519.60 ಮೀಟರ್‌ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಸದ್ಯ 518.22 ಮೀಟರ್‌ ನೀರು ಸಂಗ್ರಹವಾಗಿದೆ. ಡ್ಯಾಂನಿಂದ 2.50 ಲಕ್ಷ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿ ಮೂಲಕ ನಾರಾಯಣಪುರ ಡ್ಯಾಂಗೆ ಹರಿ ಬಿಡಲಾಗುತ್ತಿದೆ.

ಅಲ್ಲದೇ ಮಲಪ್ರಭಾ ನದಿಗೆ ನವಿಲುತೀರ್ಥ ಡ್ಯಾಂನಿಂದ 5 ಸಾವಿರ ಕ್ಯೂಸೆಕ್‌ ಹಾಗೂ ಕಾಲುವೆ ಮೂಲಕ 1100 ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ಮಲಪ್ರಭಾ ನದಿ ಮೂಲಕ ಹರಿದು ಬರುವ ನೀರು, ಹುನಗುಂದ ತಾಲೂಕಿನ ಕೂಡಲಸಂಗಮ ಬಳಿ ಕೃಷ್ಣಾ ನದಿಗೆ ಸೇರುತ್ತದೆ. ಅಲ್ಲಿಂದ ನಾರಾಯಣಪುರ ಡ್ಯಾಂಗೆ ಕೃಷ್ಣಾ ನದಿ ಮೂಲಕ 2.80 ಲಕ್ಷ ಕ್ಯೂಸೆಕ್‌ ನೀರು ಸೇರುತ್ತಿದ್ದು, ನಾರಾಯಣಪುರ ಡ್ಯಾಂನಿಂದ 2,81,840 ಕ್ಯೂಸೆಕ್‌ ನೀರು ಹೊರ ಬಿಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next