ಬೆಂಗಳೂರು: ಕೆಆರ್ ಪುರಂ ಅನರ್ಹ ಶಾಸಕರು ಕೆಆರ್ ಐಡಿಎಲ್ ಗೆ ನೀಡಿರುವ ಕಾಮಗಾರಿಯಲ್ಲಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಆರ್ ಪುರಂ ಅನರ್ಹ ಶಾಸಕರು ಈ ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿದ್ದಾರೆ.
ಈ ಕಾಮಗಾರಿಗಳಲ್ಲಿ ಸಿಎಂಗೆ ಇದರಲ್ಲಿ ಎಷ್ಟು ಪಾಲು ಹೋಗಿದೆ? ಬಿಜೆಪಿ ನಾಯಕರಿಗೆ ಎಷ್ಟು ಪಾಲು ಹೋಗಿದೆ.ಅಲ್ಲದೇ ಅನರ್ಹ ಶಾಸಕರಿಗೆಷ್ಟು ಪಾಲು ಹೋಗಿದೆ?ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಕ್ಷಣವೇ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿ ಕೆಆರ್.ಐಡಿಎಲ್ ಗೆ ನೀಡಿರುವ ಗುತ್ತಿಗೆ ವಾಪಸ್ ಪಡೆಯಬೇಕು.ಯಡಿಯೂರಪ್ಪ ಸರ್ಕಾರ ದೋಚುವ ಸರ್ಕಾರವಾಗಿದೆ, ಲೂಟಿಕೋರರ ಸರ್ಕಾರವಾಗಿದೆ ಎಂದು ಹೇಳಿದರು.
ಕೆಆರ್.ಐಡಿಎಲ್ ಗೆ ಕೊಟ್ಟಿರುವ ಆದೇಶ ತಡೆ ಹಿಡಿಯಬೇಕು. ಈ ಕಾಮಗಾರಿಗಳಿಂದ 20- 25 % ಕಮಿಷನ್ ಪಡೆಯೋ ಲೆಕ್ಕಾಚಾರ ಇದರಲ್ಲಿದೆ.ನಾನೇ ಕ್ಯಾಂಡಿಡೇಟ್ ಆಗ್ತೇನೆ, 25% ತಂದುಕೊಡಿ ಮೊದಲು ಎಂದು ಅನರ್ಹ ಶಾಸಕರು ಮಾತುಕತೆ ಮಾಡಿದ್ದಾರೆ.ಬಿಜೆಪಿ ಅಂದರೆ ಭ್ರಷ್ಟ ಜನರಿಂದ ಕೂಡಿರುವ ಸರ್ಕಾರವಾಗಿದೆ ಎಂದು ಆರೋಪಿಸಿದ್ದಾರೆ.