Advertisement

ಕೆ.ಆರ್‌.ನಗರಕ್ಕೆ 84ರ ಸಂಭ್ರಮ

12:41 PM Jun 18, 2018 | Team Udayavani |

ಕೆ.ಆರ್‌.ನಗರ: ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಮೈಸೂರು ಸಂಸ್ಥಾನದ ದಿವಾನರಾದ ಸರ್‌ಮಿರ್ಜಾ ಇಸ್ಮಾಯಿಲ್‌, ಸರ್‌ ಎಂ.ವಿಶ್ವೇಶ್ವರಯ್ಯರವರಿಂದ  1934ರಲ್ಲಿ ರೂಪಿತಗೊಂಡ ಕೃಷ್ಣರಾಜನಗರಕ್ಕೆ  84 ವರ್ಷತುಂಬಿದ್ದು ಅದರ ವಾರ್ಷಿಕೋತ್ಸವ ಆಚರಿಸುತ್ತಿರುವುದು ಹೆಮ್ಮೆ ತಂದಿದೆ ಎಂದು ಗರುಡಗಂಭ ಸ್ವಾಮಿ ಹೇಳಿದರು. 

Advertisement

ಇಲ್ಲಿನ ಗರುಡಗಂಭ ವೃತ್ತದಲ್ಲಿ ರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪುತ್ಥಳಿಗೆ ಪುಷ್ಪ ಮಾಲೆ ಅರ್ಪಿಸಿ, ಊರು ಹುಟ್ಟಿದ ಕುರುಹುವಾಗಿರುವ ಗರುಡಗಂಭಕ್ಕೆ ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿ ಮಾತನಾಡಿದರು. 

ಪ್ರತಿ ವರ್ಷವೂ ಪಟ್ಟಣದ ವಾರ್ಷಿಕೋತ್ಸವವನ್ನು ನಾನು ಆಚರಿಸುತ್ತಾ ಬಂದಿದ್ದು, ಇಂತಹ ಮಹತ್ವದ ದಿನವನ್ನು ಪುರಸಭೆ ಮತ್ತು ಜನ ಪ್ರತಿನಿ ಗಳು ಮರೆತಿರುವುದು ಸರಿಯಲ್ಲ. ಇದು ಪಟ್ಟಣದ ಎಲ್ಲ ನಾಗರಿಕರೂ ಸೇರಿ ಸಂತೋಷದಿಂದ ಆಚರಿಸುವ ಹಬ್ಬವಾಗಬೇಕು ಎಂದರು. 

ಕೆ.ಆರ್‌.ನಗರ ರೂಪುಗೊಂಡ ಬಗ್ಗೆ ಮಾಹಿತಿ ನೀಡಿ ಮಾಜಿ ವಿಧಾನ ಪರಿಷತ್‌ ಸದಸ್ಯ ಪುಟ್ಟಸಿದ್ದಶೆಟ್ಟಿ ಮಾತನಾಡಿದರು. ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಯಿತು. ಪುರಸಭೆ ಮುಖ್ಯಾ ಕಾರಿ ನಾಗಶೆಟ್ಟಿ, ಜೆಡಿಎಸ್‌ ಮುಖಂಡ ಶಿವಾಜಿಗಣೇಶ್‌, ಬಿಜೆಪಿ ಮುಖಂಡ ರವೀಂದ್ರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next